ಪುರಿಯಲ್ಲಿನ ಶ್ರೀ ಜಗನ್ನಾಥ ದೇವಸ್ಥಾನದ ಭೂಮಿಯನ್ನು ಸರಕಾರಿ ಅಧಿಕಾರಿಗಳು ಮಾರಾಟ ಮಾಡಬಹುದು!

ಒಡಿಶಾ ಸರಕಾರದಿಂದ ಕಾನೂನಾತ್ಮಕ ಸುಧಾರಣೆಗಳಿಗಾಗಿ ಸಮ್ಮತಿ

* ಸರಕಾರಿ ಅಧಿಕಾರಿಯು ಭ್ರಷ್ಟನಾಗಿದ್ದರೆ ಅವನು ಭ್ರಷ್ಟ ಮಾರ್ಗವನ್ನು ಅವಲಂಬಿಸಿ ದೇವಸ್ಥಾನದ ಭೂಮಿಯ ಮಾರಾಟ ಮಾಡಿ ಹಣ ಸಂಗ್ರಹಣೆ ಮಾಡುವನು ! ಇಂತಹ ಕಾನೂನುಗಳನ್ನು ಭಾವಿಕರು ಕಾನೂನುಬದ್ಧ ಮಾರ್ಗದಿಂದ ವಿರೋಧಿಸುವುದು ಅವಶ್ಯಕವಾಗಿದೆ !- ಸಂಪಾದಕರು

* ದೇವಸ್ಥಾನಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಅಪಾತ್ರ ವ್ಯಕ್ತಿಯು ಮಾಡುವುದು ‘ಅಧರ್ಮವೇ ಆಗಿದೆ. ಇಂತಹ ಕಾನೂನಿನಲ್ಲಿ ಮನಸ್ಸಿಗೆ ಬಂದಂತೆ ಬದಲಾವಣೆ ಮಾಡುವವರೂ ಅಧರ್ಮಿಗಳೇ ಆಗಿದ್ದಾರೆ. ಸರಕಾರಿ ಅಧಿಕಾರಿಗಳಿಗಿಂತಲೂ ದೇವತೆಯ ಭಕ್ತರು ಖಂಡಿತವಾಗಿಯೂ ದೇವಸ್ಥಾನದ ವ್ಯವಸ್ಥಾಪನೆ ಮತ್ತು ವ್ಯವಹಾರವನ್ನು ನಡೆಸಲು ಯೋಗ್ಯರಾಗಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ. ಹಿಂದೂಗಳೇ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸಲು ಪ್ರಾಣವನ್ನು ಪಣಕ್ಕಿಟ್ಟು ಕಾನೂನುಬದ್ಧ ಹೋರಾಟವನ್ನು ಆರಂಭಿಸಿ !- ಸಂಪಾದಕರು

* ವಕ್ಫ್ ಬೋರ್ಡ್ ಭೂಮಿಯನ್ನು ಮಾರಲು ಒಡಿಶಾ ಸರಕಾರವು ಇಂತಹ ಕಾನೂನುಗಳನ್ನು ನಿರ್ಮಿಸುವ ಧೈರ್ಯವನ್ನು ತೋರಿಸಬಲ್ಲುದೇ ?- ಸಂಪಾದಕರು

ಪುರಿಯಲ್ಲಿ ‘ಶ್ರೀ ಜಗನ್ನಾಥ ದೇವಸ್ಥಾನ

ಭುವನೇಶ್ವರ (ಓಡಿಶಾ) – ಒಡಿಶಾದಲ್ಲಿ ಬಿಜು ಜನತಾ ದಳ ಸರಕಾರದ ಮಂತ್ರಿ ಮಂಡಲವು ಪುರಿಯಲ್ಲಿ ‘ಶ್ರೀ ಜಗನ್ನಾಥ ದೇವಸ್ಥಾನ ಅಧಿನಿಯಮ 1954′ ದಲ್ಲಿ ಸುಧಾರಣೆ ಮಾಡುವ ಪ್ರಸ್ತಾಪವನ್ನು ಸಮ್ಮತಿಸಿದೆ. ಇದರಿಂದ ಸರಕಾರಿ ಅಧಿಕಾರಿಗಳಿಗೆ ಶ್ರೀ ಜಗನ್ನಾಥ ಮಂದಿರ ಸಂಚಾಲನ ಕಮಿಟಿಯ ಅಧೀನದಲ್ಲಿರುವ ಭೂಮಿ ಹಾಗೂ ಇತರ ಸ್ಥಿರಾಸ್ತಿಯನ್ನು ಮಾರುವ ಹಾಗೂ ಬಾಡಿಗೆಗೆ ನೀಡುವ ಅಧಿಕಾರವಿದೆ. ಈ ಹಿಂದೆ ಇಂತಹ ನಿರ್ಣಯಗಳಿಗೆ ರಾಜ್ಯ ಸರಕಾರದ ಅನುಮತಿ ಪಡೆಯುವುದು ಆವಶ್ಯಕವಾಗಿತ್ತು. ರಾಜ್ಯದ ಮುಖ್ಯ ಸಚಿವರಾದ ಸುರೇಶ ಚಂದ್ರ ಮಹಾಪಾತ್ರರವರು ಈ ಬಗ್ಗೆ ಮಾಹಿತಿ ನೀಡಿದರು.

ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ಅಧ್ಯಕ್ಷರು, ಮುಖ್ಯ ನಿರ್ವಹಣಾಧಿಕಾರಿ, ದೇವಸ್ಥಾನ ನಿರ್ವಹಣಾಧಿಕಾರಿ, ಉಪ ನಿರ್ವಹಣಾಧಿಕಾರಿ ಮುಂತಾದ ಅಧಿಕಾರಿಗಳು ಈಗ ದೇವಸ್ಥಾನಕ್ಕೆ ಸಂಬಂಧಿಸಿದ ಸಂಪತ್ತನ್ನು ಮಾರುವ ಅಥವಾ ಅಡಮಾನ ಇಡುವ ನಿರ್ಣಯ ತೆಗೆದುಕೊಳ್ಳಬಹುದು.

ಒಡಿಶಾ ಸರಕಾರವು ‘ಶ್ರೀಮಂದಿರ ಗುರುಕುಲ’ ವನ್ನು ಸ್ಥಾಪಿಸಲಿದೆ

ಪುರಿ ಜಗನ್ನಾಥ ಮಂದಿರ ಪ್ರಬಂಧ ಸಮಿತಿಯ ಸಭೆಯ ನಂತರ ದೇವಸ್ಥಾನದ ನಿರ್ವಹಣಾಧಿಕಾರಿಯಾದ ಕೃಷ್ಣ ಕುಮಾರರವರು ”ಶ್ರೀಮಂದಿರ ಗುರುಕುಲ’ವನ್ನೂ ಸ್ಥಾಪಿಸಲಾಗುವುದು. ಈ ಗುರುಕುಲವು 17 ಎಕರೆ ಭೂಮಿಯಲ್ಲಿ ಇರಲಿದೆ. ಒಡಿಶಾ ಸರಕಾರವು ಈ ಗುರುಕುಲದ ನಿರ್ಮಾಣಕ್ಕಾಗಿ ಹಣ ನೀಡಲಿದೆ. ಇದಕ್ಕಾಗಿ ‘ಶ್ರೀಮಂದಿರ ಆದರ್ಶ ಗುರುಕುಲ ಸೊಸೈಟಿ’ ಯನ್ನು ನಿರ್ಮಿಸಲಾಗುವುದು ಮತ್ತು ಇದು ಗುರುಕುಲದ ಸಂಚಾಲನೆಯನ್ನು ಮಾಡಲಿದೆ’, ಎಂದು ಹೇಳಿದ್ದಾರೆ.

ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಸೇವೆ ಮಾಡುವವರಿಗೆ ನಿಶ್ಯುಲ್ಕವಾಗಿ ಮನೆಗಳನ್ನು ನೀಡಲಾಗುವುದು. ಇದಕ್ಕಾಗಿ 8 ಎಕರೆ ಭೂಮಿಯ ಆಯ್ಕೆ ಮಾಡಲಾಗಿದೆ. ಇದರ ಖರ್ಚನ್ನು ಒಡಿಶಾ ಸರಕಾರವು ವಹಿಸಲಿದೆ.