ಜನರಲ್ ಬಿಪಿನ್ ರಾವತ್ ನಂತರ ದೇಶಕ್ಕೆ ಅದೇ ಸಾಮರ್ಥ್ಯದ ಹೊಸ ನಾಯಕತ್ವ ಸಿಗಲಿದೆ ! – ಬ್ರಿಗೇಡಿಯರ್ ಹೇಮಂತ ಮಹಾಜನ್

ಹಿಂದೂ ಸಂಘಟನೆ ಮತ್ತು ಧರ್ಮಾಧಿಷ್ಠಿತ ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

‘ಭಾರತದ ಭದ್ರತೆ ? : ಬಾಹ್ಯ ಶತ್ರುಗಳು ಮತ್ತು ಆಂತರಿಕ ದೇಶದ್ರೋಹಿಗಳಿಂದ’ ಈ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

ಮುಂಬಯಿ – ಭಾರತದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿ.ಡಿ.ಎಸ್.) ಜನರಲ್ ಬಿಪಿನ್ ರಾವತ್ ಅವರು ಮೂರು ಸೇನಾಪಡೆಗಳನ್ನು ಒಟ್ಟಾಗಿಸಿ ದೇಶದ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಪರಿಣಾಮಕಾರಿ ರಣತಂತ್ರವನ್ನು ರೂಪಿಸಿದ್ದರು. ಉರಿ, ಮ್ಯಾನ್ಮಾರ್ ಮತ್ತು ಡೋಕ್ಲಾಮ್‌ನಲ್ಲಿ ಯಶಸ್ವಿ ಸೇನಾ ಕಾರ್ಯಾಚರಣೆಗಳನ್ನು ನಡೆಸಿದ್ದರು. ಅವರ ನಿರಂತರ ಪ್ರಯತ್ನಗಳಿಂದಾಗಿ ಮುಂದಿನ ಎರಡೂವರೆ ವರ್ಷಗಳಲ್ಲಿ ದೇಶದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತಿದ್ದವು; ಆದರೆ ಅವರ ಅಕಾಲಿಕ ನಿರ್ಗಮನವು ಅದರ ಮೇಲೆ ಪರಿಣಾಮ ಬೀರಬಹುದು, ಆದರೆ ಸಿ.ಡಿ.ಎಸ್ ರಾವತರ ನಂತರ, ಅದೇ ಸಾಮರ್ಥ್ಯದ, ಅಗಾಧ ಆಧ್ಯಯನವಿರುವ, ನಿಪುಣ, ಅನುಭವಿ ಮತ್ತು ನುರಿತ ನೂತನ ಸಿ.ಡಿ.ಎಸ್. ಆಯ್ಕೆಯಾಗುತ್ತಾರೆ ಮತ್ತು ಅವರು ಅವರ ಉಳಿದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಭಾರತದ ಭವಿಷ್ಯದ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಯುದ್ಧ ಸೇವಾ ಮೆಡಲ್ ಪುರಸ್ಕೃತ (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ್ ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಡಿಸೆಂಬರ್ ೧೨ ರಂದು ಆಯೋಜಿಸಿದ್ದ ‘ಭಾರತದ ಭದ್ರತೆ : ಬಾಹ್ಯ ಶತ್ರುಗಳು ಮತ್ತು ಆಂತರಿಕ ದೇಶದ್ರೋಹಿಗಳಿಂದ’ ಕುರಿತ ವಿಶೇಷ ‘ಆನ್‌ಲೈನ್’ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಂವಾದದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪೃಥ್ವಿ ಚೌಹಾಣ್, ‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಅನೀಲ್ ಧೀರ್, ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ತಮ್ಮ ವಿಚಾರವನ್ನು ವ್ಯಕ್ತಪಡಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ ಪ್ರಭು ಮತ್ತು ಶ್ರೀ. ವಿನೋದ ಗಾದೀಕರ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಆನ್‌ಲೈನ್ ಕಾರ್ಯಕ್ರಮವನ್ನು ೩೪೧೧ ಜನರು ವೀಕ್ಷಿಸಿದರು.

ಜನರಲ್ ಬಿಪಿನ್ ರಾವತ್ ಇವರ ನಿಧನದ ನಂತರ ಹರ್ಷ ವ್ಯಕ್ತಪಡಿಸುವ ಜಿಹಾದಿಗಳ ವಿರುದ್ಧ ದೇಶಪ್ರೇಮಿಗಳು ಒಟ್ಟಾಗಬೇಕು – ನ್ಯಾಯವಾದಿ ಪೃಥ್ವಿ ಚೌಹಾಣ್, ಸರ್ವೋಚ್ಚ ನ್ಯಾಯಾಲಯ

ಸಿ.ಡಿ.ಎಸ್. ಬಿಪಿನ್ ರಾವತ್ ಅವರು ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಮೂರು ಸೇನಾಪಡೆಗಳನ್ನು ಸಬಲಗೊಳಿಸುತ್ತಿದ್ದರು. ಎರಡೂ ವರೆ ಕಡೆಗಳಲ್ಲಿ ಅಂದರೆ ಪಾಕಿಸ್ತಾನದ ವಿರುದ್ಧ, ಚೀನಾ ವಿರುದ್ಧ ಮತ್ತು ಅರ್ಧದಷ್ಟು (ಆಂತರಿಕ) ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದ್ದರು. ಜಿಹಾದ್ ಪ್ರತಿಪಾದಿಸುವವರ ಮನೆಗೆ ನುಗ್ಗಿ ಹತ್ಯೆ ಮಾಡಲಾಗುತ್ತಿತ್ತು. ಇದರಿಂದಾಗಿ ರಾವತ್ ಸಾವಿನಿಂದ ಜಿಹಾದಿಗಳು ಸಂಭ್ರಮಿಸುತ್ತಿದ್ದಾರೆ; ಆದರೆ ದೇಶಭಕ್ತರು ಒಗ್ಗೂಡಿ ಅವರಿಗೆ ಉತ್ತರ ನೀಡಬೇಕು.

ನಾಗರಿಕರು ಸೈನಿಕರಿಗೆ ಬೆಂಬಲ ಸೂಚಿಸಿ ಅವರ ಮನೋಧೈರ್ಯವನ್ನು ಕಾಪಾಡಲು ಪ್ರಯತ್ನಿಸಬೇಕು ! –  ಶ್ರೀ. ಅನೀಲ್ ಧೀರ್, ರಾಷ್ಟ್ರೀಯ ಕಾರ್ಯದರ್ಶಿ, ‘ಭಾರತ ರಕ್ಷಾ ಮಂಚ್’

ಶ್ರೀ. ಅನೀಲ್ ಧೀರ್

ಸಿ.ಡಿ.ಎಸ್. ಬಿಪಿನ್ ರಾವತ್ ಇವರ ನಿಧನದಿಂದ ಸಂತಸಗೊಂಡಿರುವವರು ಜಿಹಾದಿ ಮಾನಸಿಕತೆಯವರು. ಈ ಮೊದಲು ‘ಅತ್ಯಾಚಾರವೆಸಗುತ್ತಾರೆ’, ‘ಕಾಶ್ಮೀರದಲ್ಲಿ ದಾರಿತಪ್ಪಿದ ಯುವಕರನ್ನು ಕೊಲ್ಲುತ್ತಿದ್ದಾರೆ’ ಎಂದು ಸೈನ್ಯದ ಮೇಲೆ ಆರೋಪ ಹೊರಿಸಿ ಅವರನ್ನು ದುರ್ಬಲಗೊಳಿಸುತ್ತಿದ್ದರು. ಜೊತೆಗೆ ಕಮ್ಯುನಿಸ್ಟರು, ಚೀನಾ-ಪರ ಹಿತಶತ್ರುಗಳು, ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ವಿವಿಧ ವಾರ್ತಾವಾಹಿನಿಗಳಲ್ಲಿ ಚರ್ಚಿಸುವ ಮೂಲಕ ಸೇನೆಯ ಧೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದರು. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುತ್ತಿರುವ ಸೈನಿಕನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪಾಗಿದೆ. ನಾಗರಿಕರು ಸೈನಿಕರಿಗೆ ಬೆಂಬಲ ಸೂಚಿಸಿ ಅವರ ಮನೋಧೈರ್ಯವನ್ನು ಕಾಪಾಡಲು ಪ್ರಯತ್ನಿಸಬೇಕು.

ದೇಶವಿರೋಧಿ ಕೃತ್ಯವೆಸಗುವ ಆಂತರಿಕ ಶತ್ರುಗಳ ಮೇಲೆ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ಸರಕಾರ ಹೊಸ ಕಾನೂನು ರೂಪಿಸಬೇಕು – ಶ್ರೀ. ಆನಂದ ಜಾಖೋಟಿಯಾ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಆನಂದ ಜಾಖೋಟಿಯಾ

ಈಗ ಯುದ್ಧದಲ್ಲಿ ಬದಲಾವಣೆಯಾಗಿದೆ ಆದ್ದರಿಂದ ಗಡಿಯಲ್ಲಿನ ಶತ್ರುಗಳ ಸಹಿತ ಆಂತರಿಕ ದೇಶದ್ರೋಹಿಗಳ ವಿರುದ್ಧ ಸೇನೆ ಹೋರಾಡಬೇಕಿದೆ. ತ್ರಿಪುರಾದ ಘಟನೆಗಳಿಂದ ಮಹಾರಾಷ್ಟ್ರದ ೬ ಸ್ಥಳಗಳಲ್ಲಿ ಮತಾಂಧರು ಗಲಭೆ ನಡೆಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಅರಾಜಕತೆ ಹೆಚ್ಚಾಗುವುದರ ಜೊತೆಗೆ ನಾಗರಿಕರು ಮಹಾ ಸಂಘರ್ಷವನ್ನೇ ಎದುರಿಸಬೇಕಾಗಬಹುದು. ದೇಶದ ಮತ್ತು ಸೇನೆಗೆ ಅವಮಾನ ಮಾಡುತ್ತಿರುವ ಆಂತರಿಕ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಹೊಸ ಕಾನೂನನ್ನು ರೂಪಿಸಬೇಕು.