ಭಾರತದ ‘ಸಾಫ್ಟ್ ಪವರ್’ ಮತ್ತು ಜಾಗತಿಕ ಭಾರತ !

ದೇಶದ ಕುಟುಂಬಗಳು ಧರ್ಮ ಮತ್ತು ಅಧ್ಯಾತ್ಮಗಳ ಬಗ್ಗೆ ಚರ್ಚಿಸಿದರೆ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗಿರುವುದು

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ದೇಶದ ಪ್ರಗತಿಯಲ್ಲಿ ‘ಹಾರ್ಡ ಪವರ್’ ಮತ್ತು ‘ಸಾಫ್ಟ್ ಪವರ್’ ಇರುವುದರ ಮಹತ್ವ !

ಯಾವುದೇ ದೇಶಕ್ಕೆ ತನ್ನ ಸುರಕ್ಷತೆಯನ್ನು ಸುಭದ್ರವಾಗಿಡಲು ಮತ್ತು ಪ್ರಗತಿಯನ್ನು ಸಾಧಿಸಬೇಕಾಗಿದ್ದರೆ, ರಾಷ್ಟ್ರೀಯ ಸರ್ವಸಮಾವೇಶಕ ಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ಇದರಲ್ಲಿ ‘ಹಾರ್ಡ್ ಪವರ್’ ಮತ್ತು ‘ಸಾಫ್ಟ್ ಪವರ್’ ಈ ಎರಡೂ ಮಹತ್ವದ ವಿಷಯಗಳ ಸಮಾವೇಶವಿರುತ್ತದೆ. ದೇಶದ ಸೇನಾಶಕ್ತಿ, ಗುಪ್ತಚರ ಇಲಾಖೆ, ತಂತ್ರಜ್ಞಾನದ ಕ್ಷಮತೆ ಇತ್ಯಾದಿಗಳನ್ನು ‘ಹಾರ್ಡ್ ಪವರ್’ ಎಂದು ಕರೆಯಲಾಗುತ್ತದೆ, ಹಾಗೆಯೇ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿ, ಹಬ್ಬ-ಹರಿದಿನ, ಪ್ರವಾಸೋದ್ಯಮ ಇತ್ಯಾದಿಗಳನ್ನು ದೇಶದ ‘ಸಾಫ್ಟ್ ಪವರ್’ ಎಂದು ಹೇಳಲಾಗುತ್ತದೆ. ಒಂದು ವೇಳೆ ದೇಶದ ಪ್ರಗತಿಯಾಗಬೇಕಾಗಿದ್ದರೆ ಮತ್ತು ಅದನ್ನು ಭದ್ರವಾಗಿಡಬೇಕಾಗಿದ್ದರೆ, ‘ಹಾರ್ಡ್ ಪವರ್’ ಮತ್ತು ‘ಸಾಫ್ಟ್ ಪವರ್’ ಇವೆರಡರ ಆವಶ್ಯಕತೆಯಿರುತ್ತದೆ.

೨. ‘ಸಾಫ್ಟ್ ಪವರ್’ ಮತ್ತು ಜಾಗತಿಕ ಸ್ತರದಲ್ಲಿರುವ ದೀಪಾವಳಿಯ ಮಹತ್ವ !

ದೀಪಾವಳಿಯು ಭಾರತದಲ್ಲಿಯಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಆಚರಿಸಲ್ಪಟ್ಟಿತು. ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳು ಮಾತನಾಡುತ್ತಿರುವಾಗ ‘ಭಾರತೀಯ ವ್ಯಕ್ತಿ ಅಥವಾ ಮುಖಂಡರು ಮಾತನಾಡುತ್ತಿದ್ದಾರೆ’, ಎಂದೆನಿಸುತ್ತಿತ್ತು. ದೀಪಾವಳಿಯ ನಿಮಿತ್ತ ಅಮೇರಿಕಾ ದೇಶದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಇಂಗ್ಲೆಂಡಿನ ಪ್ರಧಾನಮಂತ್ರಿ ಜಾನ್ಸನ್ ಮತ್ತು ಕೆನಡಾದವರು ನೀಡಿರುವ ಪ್ರತಿಕ್ರಿಯೆಯಿಂದ ಜಗತ್ತಿನ ದೃಷ್ಟಿಯಿಂದ ದೀಪಾವಳಿ ಎಷ್ಟು ಮಹತ್ವಪೂರ್ಣವಾಗಿದೆ ? ಎನ್ನುವುದು ಸ್ಪಷ್ಟವಾಯಿತು. ಅಮೇರಿಕಾದ ಸಂಸತ್ತಿನಲ್ಲಿ ‘ರಾಷ್ಟ್ರೀಯ ಹಬ್ಬ’ ಎಂದು ದೀಪಾವಳಿಯ ನಿಮಿತ್ತ ರಜೆಯನ್ನು ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಮಂಡಿಸಲಾಯಿತು.

೩. ‘ಸಾಫ್ಟ್ ಪವರ್’ನಿಂದ ಭಾರತಕ್ಕಾಗುವ ಲಾಭ !

೩ ಅ. ಜಗತ್ತಿನಾದ್ಯಂತ ಭಾರತದ ಒಳ್ಳೆಯ ವರ್ಚಸ್ಸು ನಿರ್ಮಾಣವಾಗುವುದು : ‘ಸಾಫ್ಟ್ ಪವರ್’ ಕಾರಣದಿಂದ ಜಗತ್ತಿನಾದ್ಯಂತ ಭಾರತದ ಒಳ್ಳೆಯ ವರ್ಚಸ್ಸು ನಿರ್ಮಾಣವಾಗುತ್ತದೆ. ಜಗತ್ತಿನಲ್ಲಿರುವ ಜನರಿಗೆ ಭಾರತವು ಒಳ್ಳೆಯ ದೇಶವಾಗಿದೆ ಎಂದೆನಿಸುತ್ತದೆ. ಚೀನಾ ಹೇಳುವಂತೆ, ಭಾರತವು ಆಕ್ರಮಣಕಾರಿಯಲ್ಲ, ಜಗತ್ತಿಗೆ ತೊಂದರೆ ಕೊಡುವುದಿಲ್ಲ ಮತ್ತು ಭಯೋತ್ಪಾದನೆಯನ್ನು ಹರಡುವುದಿಲ್ಲ, ಭಾರತದ ನಾಗರಿಕರು  ವಿವಿಧ ದೇಶಗಳಲ್ಲಿ ಶಾಶ್ವತವಾಗಿ ನೆಲೆಸಲು ಅಥವಾ ಅಧ್ಯಯನಕ್ಕಾಗಿ ಹೋದಾಗ ಅವರು ಆಯಾ ದೇಶದ ಅಭಿವೃದ್ಧಿಯಲ್ಲಿ ತಮ್ಮಿಂದಾದಷ್ಟು ಸಹಾಯ ನೀಡುತ್ತಾರೆ ಎನ್ನುವುದು ಇಡೀ ಜಗತ್ತಿಗೆ ತಿಳಿದಿದೆ.

೩ ಆ. ಇತರ ದೇಶಗಳಲ್ಲಿ ವಾಸಿಸುವ ಭಾರತೀಯರಿಂದ ಆ ದೇಶಕ್ಕೆ ಬಹಳ ಆಧಾರವೆನಿಸುವುದು : ಜಗತ್ತಿನ ವಿವಿಧ ದೇಶಗಳಲ್ಲಿ ಸುಮಾರು ೩ ಕೋಟಿ ಭಾರತೀಯರು ವಾಸಿಸುತ್ತಾರೆ. ಈ ಭಾರತೀಯರಿಂದ ಆಯಾ ದೇಶಗಳಿಗೆ ಬಹಳ ದೊಡ್ಡ ಆಧಾರವೆನಿಸುತ್ತದೆ. ಇದು ‘ಸಾಫ್ಟ್ ಪವರ್’ ಆಗಿದೆ. ಇದರಿಂದ ಇತರ ರಾಷ್ಟ್ರಗಳೊಂದಿಗೆ ಭಾರತದ ಉತ್ತಮ ಸಂಬಂಧವು ವೃದ್ಧಿಯಾಗುತ್ತದೆ. ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ವಿವಿಧ ದೇಶಗಳ ಸಹಕಾರ ದೊರಕುತ್ತದೆ. ಉದಾ. ವಿಶ್ವ ಸಂಸ್ಥೆಯ ಮಾನವ ಹಕ್ಕು ಪರಿಷತ್ತಿನಲ್ಲಿ ಚೀನಾ ದೇಶದ ವಿರೋಧದ ಬಳಿಕವೂ ಭಾರತವು ಆಯ್ಕೆಗೊಂಡಿತು. ವಿಶ್ವ ಸಂಸ್ಥೆಯ ವಿವಿಧ ಸಮಿತಿಗಳಲ್ಲಿ ಅಲ್ಲಿಯ ದೇಶಗಳಿಂದ ಭಾರತಕ್ಕೆ ಒಳ್ಳೆಯ ಮತಗಳು ದೊರಕುತ್ತವೆ. ಅವರೊಂದಿಗೆ ಭಾರತದ ಒಳ್ಳೆಯ ಆರ್ಥಿಕ ಹಿತ ಸಂಬಂಧ ವೃದ್ಧಿಯಾಗುತ್ತದೆ. ಇದರಿಂದ ‘ಸಾಫ್ಟ್ ಪವರ್’ ಎಂದು ದೀಪಾವಳಿಯು ಭಾರತಕ್ಕೆ ಒಂದು ಬಹುದೊಡ್ಡ ಅವಕಾಶವಾಗಿದೆ.

೪. ಪ್ರವಾಸೋದ್ಯಮದ ಮೂಲಕ ಭಾರತದ ವಿಷಯದಲ್ಲಿ ‘ಸಾಫ್ಟ್ ಪವರ್’ ವೃದ್ಧಿಸುವುದು

ಕೆಲವು ದಿನಗಳ ಹಿಂದೆ ಉತ್ತರ ಭಾರತದ ಕುಶೀನಗರದಲ್ಲಿ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಾಯಿತು. ಈ ವಿಮಾನ ನಿಲ್ದಾಣವನ್ನು ಒಂದು ಬೌದ್ಧ ಕೇಂದ್ರಕ್ಕಾಗಿ ನಿರ್ಮಿಸಲಾಯಿತು. ಗೌತಮ ಬುದ್ಧನು ಭಾರತದ ವಿವಿಧ ಸ್ಥಳಗಳಲ್ಲಿ ಕಾರ್ಯ ಕೈಕೊಂಡನು. ಜಗತ್ತಿನಲ್ಲಿರುವ ಎಲ್ಲ ಬೌದ್ಧ ದೇಶಗಳಿಗೆ ಭಾರತದಲ್ಲಿ ಒಂದಾಗುವ ಇಚ್ಛೆಯಿದೆ. ಕುಶೀನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿರುವುದರಿಂದ ಭಾರತದ ‘ಸಾಫ್ಟ್ ಪವರ್’ ಹೆಚ್ಚಳವಾಗುವುದು, ಅಲ್ಲದೇ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಹಾಯವಾಗುವುದು. ಭಾರತದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ, ‘ಅಡ್ವೆಂಚರ್’ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮ (ಉದಾ. ಅಯೋಧ್ಯೆ) ಅಭಿವೃದ್ಧಿಯಾಗುತ್ತಿದೆ. ಪ್ರವಾಸೋದ್ಯಮ ದೇಶಕ್ಕೆ ಲಾಭದಾಯವಾಗಿದ್ದು, ಪರಿಸರ ಮಾಲಿನ್ಯಮುಕ್ತವಾಗಿದೆ. ಪ್ರವಾಸೋದ್ಯಮ ವೃದ್ಧಿಸಿದರೆ ಜನರಿಗೆ ಲಾಭವಾಗುತ್ತದೆ. ಇದು ‘ಸಾಫ್ಟ್ ಪವರ್’ನ ಪರಿಣಾಮವಾಗಿದೆ. ಭಾರತದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಂದ ಪ್ರವಾಸೋದ್ಯಮಕ್ಕೆ ಚಾಲನೆ ದೊರೆತು ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತದೆ.

(ಆಧಾರ : BRIG HEMANT MAHAJAN,YSM-2 )

೫. ಚೀನಾದ ವಿರುದ್ಧದ ಆರ್ಥಿಕ ಯುದ್ಧವನ್ನು ಗೆಲ್ಲಲು ‘ಆಲ್‌ಔಟ್’ ಯುದ್ಧವನ್ನು ಹೋರಾಡಬೇಕಾಗಿದೆ !

ಇತ್ತೀಚೆಗೆ ಜರುಗಿದ ದೀಪಾವಳಿಯ ಸಮಯದಲ್ಲಿ ಭಾರತೀಯರು ಚೀನಾ ಸಾಮಗ್ರಿಗಳನ್ನು ಖರೀದಿಸುವುದನ್ನು ಬಹಿಷ್ಕರಿಸಿದರು. ಇದರಿಂದ ಚೀನಾಕ್ಕೆ ೫ ಸಾವಿರ ಕೋಟಿ ಮೊತ್ತಗಳಷ್ಟು ಹಾನಿಯಾಯಿತು. ಇದು ಭಾರತಕ್ಕೆ ದೊರೆತ ಬಹುದೊಡ್ಡ ಯಶಸ್ಸಾಗಿದೆ. ಆದರೆ ಕೇವಲ ಇಲ್ಲಿಗೇ ನಿಲ್ಲದೇ ಈ ಹೋರಾಟವನ್ನು ಅನೇಕ ವರ್ಷಗಳ ವರೆಗೆ ಹೋರಾಡಬೇಕಾಗಲಿದೆ. ‘ಭಾರತೀಯರಾಗಿರಿ ಮತ್ತು ಭಾರತೀಯ ವಸ್ತುಗಳನ್ನು ಖರೀದಿಸಿರಿ !’, ಇದು ನಮ್ಮ ಘೋಷಣೆಯಾಗಬೇಕು. ಯಾವ ಅಂಗಡಿಯವರು ಚೀನಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೋ ಅವರನ್ನು ಬಹಿಷ್ಕರಿಸಬೇಕು. ‘ಕಾರ್ಪೊರೇಟ್’ ಕ್ಷೇತ್ರದ ಜನರು ಇಂದಿಗೂ ಚೀನಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರೆ, ಅವರ ಮೇಲೆಯೂ ಸಾಮಾಜಿಕ ಬಹಿಷ್ಕಾರವನ್ನು ಹಾಕಬೇಕು. ಎಲ್ಲಿಯವರೆಗೆ ನಾವು ಚೀನಾದ ವಿರುದ್ಧ ‘ಆಲ್ ಔಟ್’ (ಕೊನೆಯ ವರೆಗೆ) ಯುದ್ಧವನ್ನು ಹೋರಾಡುವುದಿಲ್ಲವೋ, ಅಲ್ಲಿಯ ವರೆಗೆ ನಾವು ಚೀನಾದ ವಿರುದ್ಧ ಯಾವ ಆರ್ಥಿಕ ಯುದ್ಧವನ್ನು ಹೋರಾಡುತ್ತಿರುವೆಯೋ, ಅದನ್ನು ಗೆಲ್ಲಲು ಸಹಾಯ ಸಿಗಲಾರದು’.

– (ನಿವೃತ್ತ) ಬ್ರಿಗೇಡಿಯರ ಹೇಮಂತ ಮಹಾಜನ, ಪುಣೆ.

‘ಸಾಫ್ಟ್ ಪವರ್’ ಎಂದರೆ ಏನು ?

೧೯೯೦ ನೆಯ ವರ್ಷದ ಆಸುಪಾಸಿನಲ್ಲಿ ಅಮೇರಿಕಾದ ಅಧ್ಯಯನಕಾರ ಜೊಸೆಫ್ ನಾಯ ಇವರು ಅಮೇರಿಕದ ಅಧಿಕಾರದ ಪ್ರಭಾವ ಕಡಿಮೆಯಾಗುತ್ತಿರುವ ವಿಚಾರ ಪ್ರವಾಹವನ್ನು ಬದಲಾಯಿಸಲು `ಸಾಫ್ಟ್ ಪವರ್’ ಸಂಕಲ್ಪನೆಯನ್ನು ಮಂಡಿಸಿದ್ದರು. ನಮಗೆ ಅಪೇಕ್ಷಿತವಿರುವಂತೆ ನಿರ್ಧಾರವನ್ನು ಸಾಧ್ಯಗೊಳಿಸಲು ಯಾವುದೇ ಒತ್ತಡವಿಲ್ಲದೇ ಇನ್ನೊಬ್ಬರನ್ನು ಆಕರ್ಷಿತಗೊಳಿಸುವ ಕ್ಷಮತೆ, ಅಂದರೆ `ಸಾಫ್ಟ್ ಪವರ್’ ಆಗಿದೆ. ಇದನ್ನು ಉಪಯೋಗಿಸುವುದು ಮತ್ತು ಅದರ ಪ್ರತಿಫಲ ದೊರಕುವುದು ದೀರ್ಘಕಾಲದ ಪ್ರಕ್ರಿಯೆಯಾಗಿದೆ.

ಈಶ್ವರನನ್ನು ಮರೆತಿದ್ದರಿಂದ ಸಾಮ್ರಾಜ್ಯಗಳು ನಾಶವಾಗುವುದು !

‘ವ್ಯಕ್ತಿ, ಸಮೂಹ, ಸಮಾಜ, ಗ್ರಾಮ, ನಗರ, ರಾಜ್ಯ, ದೇಶ ಹೀಗೆ ಎಲ್ಲರ ಕರ್ಮಗಳ ಲೆಕ್ಕವು ಈಶ್ವರನಲ್ಲಿರುತ್ತದೆ ಮತ್ತು ಲೆಕ್ಕದ ಪ್ರಕಾರ ಎಲ್ಲರಿಗೆ ಅದರ ಫಲ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಪ್ರತಿಯೊಂದು ದೇಶವು ಈಶ್ವರನನ್ನು ಸ್ಮರಿಸಿ ಕಾರ್ಯ ನಿರ್ವಹಿಸಬೇಕು. ಈಶ್ವರನಿಗೆ ಮರೆತಿದ್ದರಿಂದ ಅನೇಕ ಸಾಮ್ರಾಜ್ಯಗಳು ಇದು ವರೆಗೆ ನಾಶವಾದವು. ಎರಡನೇಯ ಮಹಾಯುದ್ಧದ ಸಮಯದಲ್ಲಿ ಒಂದು ದಿನ ಓರ್ವ ಫಕೀರನು ಮುಂಬಯಿಯ ಬಂದರಿನ ಸಮೀಪದಲ್ಲಿ ‘ಜನಗಳೇ ! ಪ್ರಾಣವನ್ನು ಉಳಿಸಲಿಕ್ಕಿದ್ದರೆ ಓಡಿ ಹೋಗಿ !’ ಎಂದು ಕೂಗುತ್ತ ಸುತ್ತಾಡುತ್ತಿದ್ದನು. ಆಗ ಅವನು ಹುಚ್ಚ ಎಂದು ತಿಳಿದು ಯಾರು ಕೂಡ ಗಮನ ನೀಡಲಿಲ್ಲ. ಎರಡು ದಿನಗಳ ನಂತರ ಮುಂಬಯಿ ಬಂದರಿನನಲ್ಲಿ ಭೀಕರ ಸ್ಫೋಟ ಸಂಭವಿಸಿತು. ಅನೇಕ ಮನೆಗಳು ಕುಸಿದವು ಮತ್ತು ನೂರಾರು ಜನರು ಮೃತಪಟ್ಟರು.’  – ಸ್ವಾಮಿ ದತ್ತಾವಧೂತ