ಗಯಾ(ಬಿಹಾರ)ದಲ್ಲಿ ಪಿಂಡದಾನ ಮಾಡಲು ಪಾಲಿಕೆಯು ೫ ರೂಪಾಯಿ ಶುಲ್ಕ ಪಡೆಯಲಿದೆ

ಹಿಂದೂಗಳ ಧಾರ್ಮಿಕ ಕೃತಿಗಳ ಮೇಲೆ ಈ ರೀತಿಯಲ್ಲಿ ಶುಲ್ಕ ಹೇರುವುದೆಂದರೆ ಹೊಸ ರೀತಿಯ ಔರಂಗಜೇಬನ ‘ಜಿಝಿಯಾ ತೆರಿಗೆ’ಯೇ ಆಗಿದೆ ! ಹಿಂದೂ ಸಂಘಟನೆಗಳು ಇದನ್ನು ಪ್ರಖರವಾಗಿ ವಿರೋಧಿಸಿ ಅದನ್ನು ರದ್ದುಗೊಳಿಸಲು ಪ್ರಯತ್ನಿಸಬೇಕು !

ಸರಕಾರದಿಂದ ಒಂದೆಡೆ ಮುಸಲ್ಮಾನರ ಓಲೈಕೆಯೆಂದು ಮದರಸಾಗಳಲ್ಲಿ ಆಧುನಿಕ ಶಿಕ್ಷಣ ನೀಡಲು ಅನುದಾನ ಹಾಗೂ ಇತರ ಸೌಲಭ್ಯಗಳಿಗಾಗಿ ಹಣ ಸುರಿಯಲಾಗುತ್ತದೆ ಮತ್ತು ಇನ್ನೊಂದೆಡೆ ಹಿಂದೂಗಳ ಯಾತ್ರೆಗಳ ಮೇಲೆ ಹೆಚ್ಚುವರಿ ಪ್ರವಾಸಿ ಶುಲ್ಕವನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಇದು ಭಾರತದ ‘ಜಾತ್ಯತೀತತೆ’ಯ ವ್ಯಾಖ್ಯೆಯಾಗಿದೆ ! ಜಾತ್ಯತೀತ ಸರಕಾರಿ ವ್ಯವಸ್ಥೆಯ ಈ ಅನ್ಯಾಯದ ಮೇಲೆ ಹಿಂದೂ ರಾಷ್ಟ್ರವೇ ಏಕೈಕ ಉಪಾಯವಾಗಿದೆ, ಎಂಬುದನ್ನು ಗಮನದಲ್ಲಿಡಿ !

ಗಯಾ (ಬಿಹಾರ) – ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ. ಪಾಲಿಕೆಯಿಂದ ಈ ‘ಪಿಂಡ ವೇದಿ’ಯ ಪರಿಸರದ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಸಂಸ್ಥೆಗೆ ವರ್ಷಕ್ಕೆ ಐದೂವರೆ ಲಕ್ಷ ರೂಪಾಯಿಗಳ ಗುತ್ತಿಗೆ ನೀಡಲಾಗುತ್ತಿದೆ. ಆದರೆ ಇಲ್ಲಿನ ಪುರೋಹಿತರು ಮತ್ತು ಅವರ ಸಂಘಟನೆಗಳು ಈ ನಿರ್ಣಯವನ್ನು ವಿರೋಧಿಸಿವೆ. ‘ಇದರ ಪರಿಣಾಮವನ್ನು ಎದುರಿಸಬೇಕಾಗಬಹುದು’, ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

೧. ಅಲ್ಲಿನ ಪಂಡಾ ಸಮಾಜ ಮತ್ತು ವಿಷ್ಣುಪದ ಪ್ರಬಂಧಕಾರಿಣಿ ಸಮಿತಿಯು ವಿರೋಧಿಸುತ್ತ ‘ಪಾಲಿಕೆಯು ಈ ರೀತಿಯಲ್ಲಿ ಶುಲ್ಕ ವಸೂಲಾತಿ ಮಾಡುತ್ತಿದ್ದರೆ ತೀರ್ಥಯಾತ್ರಿಗಳ ದೃಷ್ಟಿಯಲ್ಲಿ ತೀರ್ಥಸ್ಥಳವು ವಸೂಲಿಯ ಅಡ್ಡೆಯಾಗುವುದು. ಈ ರೀತಿಯಲ್ಲಿ ಶುಲ್ಕ ಸಂಗ್ರಹಿಸುವುದು ಒಂದು ರೀತಿಯಲ್ಲಿ ಹಣಗಳಿಸುವ ಒಂದು ಆಕರವಾಗಬಾರದು. ಈ ನಿರ್ಣಯವನ್ನು ತಕ್ಷಣ ಹಿಂದೆ ಪಡೆಯಬೇಕು’ ಎಂದು ಹೇಳಿದೆ.

೨. ವಿಷ್ಣುಪದ ಪ್ರಬಂಧಕಾರಿಣಿ ಸಮಿತಿಯ ಅಧ್ಯಕ್ಷರಾದ ಶಂಭೂಲಾಲ ವಿಠ್ಠಲರವರು ‘ಇಂತಹ ನಿರ್ಣಯದಿಂದ ಜನರಲ್ಲಿ ನಿರಾಸೆಯ ವಾತಾವರಣ ನಿರ್ಮಾಣವಾಗಿದೆ. ಈ ನಿರ್ಣಯದ ಮೇಲೆ ಪಾಲಿಕೆ ಮತ್ತು ಸರಕಾರವು ಪುನಃ ವಿಚಾರ ಮಾಡಬೇಕಿದೆ’ ಎಂದು ಹೇಳಿದ್ದಾರೆ.

೩. ಗಯಾ ನಗರಪಾಲಿಕೆಯು ಈ ವಿಷಯದಲ್ಲಿ ‘ಪಿಂಡ ವೇದಿ’ಯಲ್ಲಿನ ಸೀತಾಕುಂಡ ಮತ್ತು ಅಕ್ಷಯ ವಟ ದೇವಸ್ಥಾನಗಳ ಪರಿಸರದಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥಾಪನೆಗಾಗಿ ಗುತ್ತಿಗೆ ನೀಡಲಾಗಿದೆ. ಅನಂತರವೇ ಇಲ್ಲಿ ಶುಲ್ಕ ವಸೂಲಿ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದೆ.