ಮಧ್ಯಪ್ರದೇಶ ಮಾನವಹಕ್ಕುಗಳ ಆಯೋಗದಿಂದ ಆಡಳಿತ ಮತ್ತು ಪುರಸಭೆಗೆ ನೋಟಿಸ್ಸ್ವಾತಂತ್ರ್ಯದ ನಂತರ 74 ವರ್ಷಗಳ ನಂತರವೂ ಬೀದಿ ನಾಯಿ ಸಮಸ್ಯೆ ಪರಿಹರಿಸಲಾಗದಿರುವುದು ಭಾರತಕ್ಕೆ ನಾಚಿಕೆಗೇಡು ! |
ಬೀದಿನಾಯಿಗಳನ್ನು ಹಿಡಿದು ಒಂದೇ ಸ್ಥಳದಲ್ಲಿ ಇಡುವಂತೆ ಏಕೆ ಮಾಡುತ್ತಿಲ್ಲ ? ಇಲ್ಲಿ ಜನರಿಗೆ ಬದುಕುವ ಹಕ್ಕಿದೆಯೇ ಅಥವಾ ಬೀದಿ ನಾಯಿಗಳಿಗೆ ? ಇಲ್ಲಿ ಜನರಿಗೆ ಮಾನನಹಕ್ಕುಗಳಿಗಿಂತ ಕೆಲವು ಪ್ರಾಣಿಸ್ನೇಹಿ ಸಂಘಟನೆಗಳಿಗೆ ಜನರಿಗೆ ತೊಂದರೆ ಕೊಡುವ ಪ್ರಾಣಿಗಳ ಹಕ್ಕು ಹೆಚ್ಚು ಮಹತ್ವದ್ದು ಅನಿಸುತ್ತದೆ, ಇದು ನಾಚಿಕೆಗೇಡು ! – ಸಂಪಾದಕರು
ಭೋಪಾಲ (ಮಧ್ಯಪ್ರದೇಶ) – ಇಲ್ಲಿ ಅಂಜಲಿ ವಿಹಾರ ಫೇಸ್-2 ನಲ್ಲಿ ಓರ್ವ 4 ವರ್ಷದ ಹೆಣ್ಣು ಮಗುವಿನ ಮೇಲೆ 5 ಬೀದಿನಾಯಿಗಳು ದಾಳಿ ನಡೆಸಿ ಆ ಮಗುವನ್ನೂ ಗಂಭೀರವಾಗಿ ಗಾಯಗೋಳಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗವು ಪುರಸಭೆ, ಆಡಳಿತ ಮತ್ತು ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ 7 ದಿನದಲ್ಲಿ ಉತ್ತರಿಸಲು ಹೇಳಲಾಗಿದೆ. ನೋಟಿಸ್‍ನಲ್ಲಿ, `2021 ರಲ್ಲಿ ಎಷ್ಟು ನಾಯಿಗಳ ನಸಬಂದಿ ಮಾಡಲಾಗಿದೆ ?’, `ರೇಬೀಸ್ (ಯಾವ ರೋಗದಿಂದ ನಾಯಿ ಹುಚ್ಚಾಗುತ್ತವೆಯೋ, ಆ ರೋಗ) ಆಗಿರುವ ಎಷ್ಟು ನಾಯಿಗಳನ್ನು ನಗರದಿಂದ ಹೊರಹಾಕಲಾಗಿದೆ ?’, ಮುಂತಾದ ಮಾಹಿತಿಗಳನ್ನು ಕೇಳಲಾಗಿದೆ.
A four-year-old girl was attacked by stray dogs in #Bhopal in #MadhyaPradesh on Saturday afternoon.https://t.co/HnFhQlNGGc
— TIMES NOW (@TimesNow) January 2, 2022