ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು ಭಗವಂತನಿಗೆ ಮಾಡಿದ ಅವಮಾನ ! – ಪೋಪ ಫ್ರಾನ್ಸಿಸ್

ಆಮಿಷವೊಡ್ಡಿ ಬಡ ಮತ್ತು ಬುಡಕಟ್ಟು ಜನರ ಮತಾಂತರ ಮಾಡುವುದು, ನಂತರ ಅವರನ್ನು ವಂಚಿಸುವುದು, ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಅವರ ಧರ್ಮಕ್ಕನುಸಾರವಾಗಿ ಆಚರಣೆ ಮಾಡಲು ತಡೆಯುವುದು, ಇದು ಸಹ ಭಗವಂತನಿಗೆ ಮಾಡಿದ ಅವಮಾನವೇ ಆಗಿದೆ, ಇದನ್ನು ಪೋಪ ಫ್ರಾನ್ಸಿಸ್ ಯಾವಾಗ ಹೇಳುವರು ಮತ್ತು ಕ್ರೈಸ್ತ ಮಿಶನರಿಗಳು ಹೀಗೆ ಮಾಡುವುದನ್ನು ಯಾವಾಗ ತಡೆಯುವರು ?- ಸಂಪಾದಕರು

ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ – ಮಹಿಳೆಯರ ಅತ್ಯಾಚಾರ ಮಾಡುವುದು ಇದು ಈಶ್ವರನ ಅವಮಾನವಾಗಿದೆ. ತಾಯಿ ಜೀವನ ನೀಡುತ್ತಾಳೆ. ಮಹಿಳೆ ಜಗತ್ತನ್ನು ಒಟ್ಟುಗೂಡಿಸುತ್ತಾಳೆ. ಮಹಿಳೆಯರಿಗೆ ಯಾವುದೇ ರೀತಿ ತೊಂದರೆ ಕೊಡುವುದು ಇದು ನೇರ ಭಗವಂತನಿಗೆ ಅವಮಾನ ಮಾಡಿದಂತೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ ಫ್ರಾನ್ಸಿಸ್ ಇವರು ಕ್ರೈಸ್ತ ಹೊಸವರ್ಷದ ಶುಭಾಶಯ ನೀಡುವಾಗ ಹೇಳಿದರು. ಕಳೆದೆರಡು ವರ್ಷಗಳಿಂದ ಕೊರೊನಾದ ಕಾರಣದಿಂದ ಸಂಚಾರ ನಿರ್ಬಂಧದ ಸಮಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಮಾಣ ಹೆಚ್ಚಾಗಿದೆ, ಇದರಿಂದ ಅವರು ಮೇಲಿನ ಹೇಳಿಕೆ ನೀಡಿದರು. ಪೋಪ್ ಫ್ರಾನ್ಸಿಸ್ ಇವರು ಈ ಮೊದಲು ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ತಡೆಯುವಂತೆ ಕರೆ ನೀಡಿದ್ದರು.