ನವ ದೆಹಲಿ – ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ಪುನಃ ಹೆಚ್ಚಾಗುತ್ತಿದೆ, ಈ ಹೆಚ್ಚಾಗುತ್ತಿರುವ ರೋಗಿಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೊರೊನಾದ ಹರಡುವಿಕೆಯನ್ನು ಕಂಡುಹಿಡಿಯಲು ಕೇಂದ್ರ ಸರಕಾರವು ಜನವರಿ 1 ರಂದು ರಾಜ್ಯಗಳಿಗೆ ಒಂದು ಮಾರ್ಗಸೂಚಿ ಜಾರಿಮಾಡಿದೆ. ಇದರಲ್ಲಿ ರಾಜ್ಯಗಳಿಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸುವ ಪ್ರಕ್ರಿಯೆ ಆರಂಭಿಸಲು ಮತ್ತು ಈ ಪ್ರಕರಣಗಳ ಮೇಲೆ ನಿಗಾವಹಿಸಲು ನಿಯಂತ್ರಣ ಕಕ್ಷೆಗಳನ್ನು ಸ್ಥಾಪನೆ ಮಾಡಲು ಹೇಳಲಾಯಿತು. ಅದೇ ರೀತಿ ಜಿಲ್ಲಾಮಟ್ಟದಲ್ಲಿ ನಿಯಂತ್ರಣ ಕಕ್ಷೆಗಳ ಸ್ಥಾಪನೆ ಮಾಡುವುದು ಮತ್ತು ಕೊರೋನಾ ಬಗ್ಗೆ ಆರೋಗ್ಯ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಸಮೀಕ್ಷೆ ನಡೆಸುವಂತೆಯೂ ಸಲಹೆ ನೀಡಿದೆ.