ದೇಶದ ರಕ್ಷಣೆಗೆ ಇಂತಹ ವಿಚಾರವಾಗುವುದೇ ?

ಚೀನಾದ ಗೋಡೆ : ’೧೫೦೦ ಮೈಲು ಅಂದರೆ ಭೂಮಿಯ ಪರಿಧಿಯ ೧೨ ನೇ ಅಂಶದಷ್ಟು ಜಾಗವನ್ನು ವ್ಯಾಪಿಸುವ ಮನುಷ್ಯನು ಕಟ್ಟಿದಂತಹ ಎಲ್ಲಕ್ಕಿಂತ ದೊಡ್ಡ ವಾಸ್ತುವಾಗಿದೆ. ಈ ಗೋಡೆಯಲ್ಲಿ ೨೪,೦೦೦ ಬಾಗಿಲುಗಳು ಹಾಗೂ ಮಿನಾರಗಳಿವೆ. ಗೋಡೆಯ ಸರಾಸರಿ ಎತ್ತರ ೨೫ ಅಡಿಯಾಗಿದ್ದು ಬುಡದಲ್ಲಿ ಅದರ ಅಗಲ ೨೦ ರಿಂದ ೩೦ ಅಡಿಯಷ್ಟಿದೆ ಈ ಗೋಡೆಯ ಮೇಲಿನಿಂದ ಒಮ್ಮೆಗೆ ಒಂದೇ ರೇಖೆಯಲ್ಲಿ ಅನೇಕ ಕುದುರೆ ಸವಾರರು ಕುದುರೆ ಓಡಿಸಬಲ್ಲರು. ಇ.ಪೂ. ಮೂರನೆ ಶತಮಾನದಲ್ಲಿ ಚೀನಾದ ರಾಜ ಶಿನೆ ವ್ಹಾಂಗ ಟೀ ಇವನು ಕಟ್ಟಿಸಲು ಆರಂಭಿಸಿದನು. ಈ ಗೋಡೆಯ ಕೆಲಸ ಮುಂದೆ ೧೭೦೦ ವರ್ಷಗಳ ವರೆಗೆ ನಡೆಯಿತು ಹಾಗೂ ಅದನ್ನು ಮಿಂಗ್ ರಾಜಮನೆತನವು (ಇ.ಸ.೧೩೬೮-೧೬೪೪ರಲ್ಲಿ) ಕೊನೆ ಮಾಡಿತು’.