ಇತರ ಗ್ರಹಗಳ ಜನರು ಪೃಥ್ವಿಯ ಮೇಲೆ ಆಕ್ರಮಣ ನಡೆಸುವರು ! – ವರ್ಷ 2022ರ ಬಗ್ಗೆ ಬಾಬಾ ವೆಂಗಾ ಇವರು ನುಡಿದ ಭವಿಷ್ಯವಾಣಿ

ಭಾರತದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ!

ನವದೆಹಲಿ- ಬಲ್ಗೇರಿಯಾದಲ್ಲಿ ವಾಸಿಸುತ್ತಿದ್ದ ಭವಿಷ್ಯ ನುಡಿಯುವ ವಾಂಗೆಲಿಯಾ ಪಾಂಡೆವಾ ಗುಶತೆರೊವಾ ಉರ್ಫ ಬಾಬಾ ವೆಂಗಾ ಎಂಬ ಪ್ರಸಿದ್ಧ ಅಂಧ ಭವಿಷ್ಯಕಾರರೊಬ್ಬರು ಆಗಿ ಹೋದರು. ದೃಷ್ಟಿ ಇಲ್ಲದಿರುವಾಗಲೂ ಅವರು ಸ್ಪಷ್ಟವಾಗಿ ಭವಿಷ್ಯ ಹೇಳುತ್ತಿದ್ದರು. ಅವರು ನುಡಿದ ಅನೇಕ ಭವಿಷ್ಯಗಳು ನಿಜವಾಗಿವೆ. ವರ್ಷ 2022 ರ ಭವಿಷ್ಯವನ್ನು ಸಹ ಅವರು ಹೇಳಿಟ್ಟಿದ್ದಾರೆ. ಅದರಂತೆ ವರ್ಷ 2022 ರಲ್ಲಿ ಜಗತ್ತಿನಲ್ಲಿ ನೀರಿನ ಸಂಕಟ ಅಧಿಕ ತೀವ್ರವಾಗಲಿದೆ. ಅನೇಕ ನಗರಗಳಲ್ಲಿ ಕುಡಿಯುವ ನೀರಿನ ಕೊರತೆ ಭಾಸವಾಗಲಿದೆ. ನದಿಗಳ ನೀರು ಕಲುಷಿತಗೊಳ್ಳಲಿದೆ. ನೀರಿಲ್ಲದೇ ಜನರು ಇತರ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಗುವುದು. ಹಾಗೆಯೇ ಇತರ ಗ್ರಹಗಳ ಜನರು ಪೃಥ್ವಿಯ ಮೇಲೆ ಆಕ್ರಮಣ ಮಾಡಲಿದ್ದಾರೆ, ಎಂದು ಹೇಳಿದ್ದಾರೆ.

ಬಾಬಾ ವೆಂಗಾ ಇವರ ವರ್ಷ 2022 ರ ಭವಿಷ್ಯವಾಣಿಗಳು

‘ಏಲಿಯನ್ಸ್’ (ಇತರ ಗ್ರಹಗಳ ಮೇಲಿನ ಜನರು) ಪೃಥ್ವಿಯ ಮೇಲೆ ಆಕ್ರಮಣ ಮಾಡುವ ಸಾಧ್ಯತೆ

‘ಓಮುಆಮುಆ’ ಹೆಸರಿನ ಒಂದು ಚಿಕ್ಕಗ್ರಹವು ಏಲಿಯನ್ ಮುಖಾಂತರ ಪೃಥ್ವಿ ಗ್ರಹದ ಮೇಲಿನ ಜೀವನದ ಶೋಧನೆಗಾಗಿ ಕಳುಹಿಸುವುದು. ತದನಂತರ ಈ ಏಲಿಯನ್ ಪೃಥ್ವಿಯ ಮೇಲಿನ ಜನರ ಮೇಲೆ ಆಕ್ರಮಣ ಮಾಡಬಹುದು.

ಮಾರಣಾಂತಿಕ ವಿಷಾಣುಗಳ ಸೋಂಕು ಹರಡಲಿದೆ

ಜಗತ್ತಿನ ತಾಪಮಾನದ ಹೆಚ್ಚಳದಿಂದ ರಶಿಯಾದ ಸೈಬೇರಿಯಾ ಭಾಗದಲ್ಲಿ ಹಿಮ ಕರಗಲು ಪ್ರಾರಂಭವಾಗುವುದು. ಇದರಿಂದ ವಿಜ್ಞಾನಿಗಳ ತಂಡ ಮಾರಣಾಂತಿಕ ವಿಷಾಣುವನ್ನು ಕಂಡು ಹಿಡಿಯಲಿದೆ. ಈ ವಿಷಾಣು ಅಧಿಕ ಸಾಂಕ್ರಾಮಿಕವಾಗಿರಲಿದೆ ಮತ್ತು ವೇಗವಾಗಿ ಹರಡಲಿದೆ. ಈ ಸೋಂಕನ್ನು ಎದುರಿಸಲು ಜಗತ್ತಿನ ಎಲ್ಲ ವ್ಯವಸ್ಥೆ ವಿಫಲವಾಗುವುವು.

ಮೊಬೈಲ ಇತ್ಯಾದಿಗಳ ಕಾರಣದಿಂದ ಜನರು ಮಾನಸಿಕ ರೋಗಿಗಳಾಗುತ್ತಾರೆ !

ಈ ವರ್ಷ ಜನರು ಮೊಬೈಲ, ಲ್ಯಾಪಟಾಪ್ ಮತ್ತು ಸಂಗಣಕ (ಕಂಪ್ಯೂಟರ) ಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅವರ ಈ ರೂಢಿ ನಿಧಾನವಾಗಿ ವ್ಯಸನಕ್ಕೆ ಬದಲಾಗುವುದು. ಇದರಿಂದ ಜನರ ಮಾನಸಿಕ ಸ್ಥಿತಿ ಕೆಡುವುದು ಮತ್ತು ಅವರು ಮಾನಸಿಕ ರೋಗಿಗಳಾಗುವರು.

ಭೂಕಂಪ ಮತ್ತು ಸುನಾಮಿಯ ಅಪಾಯ

ಜಗತ್ತಿನಲ್ಲಿ ಭೂಕಂಪ ಮತ್ತು ಸುನಾಮಿಯ ಅಪಾಯ ಹೆಚ್ಚಾಗುವುದು. ಹಿಂದೂ ಮಹಾಸಾಗರದ ಭೂಕಂಪದ ಬಳಿಕ ಒಂದು ದೊಡ್ಡ ಸುನಾಮಿ ಬರಲಿದೆ. ಇದು ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ, ಇಂಡೋನೇಶಿಯಾ, ಭಾರತದಂತಹ ಜಗತ್ತಿನ ಅನೇಕ ದೇಶಗಳ ದಡದ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ. ಈ ಸುನಾಮಿಯಲ್ಲಿ ನೂರಾರು ಜನರು ಜೀವ ಕಳೆದುಕೊಳ್ಳಲಿದ್ದಾರೆ.

ಭಾರತದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಇರಲಿದೆ

ಜಗತ್ತಿನ ತಾಪಮಾನದ ಹೆಚ್ಚಳದಿಂದ ಭಾರತದ ಮೇಲೆಯೂ ಪರಿಣಾಮ ಬೀರಲಿದೆ. ಇದರಿಂದ ದೇಶದಲ್ಲಿರುವ ಅನೇಕ ಭಾಗಗಳಲ್ಲಿ ತಾಪಮಾನ ಅತ್ಯಧಿಕ 50 ಡಿಗ್ರಿಯ ಸೆಲ್ಸಿಯಸ್ ತನಕ ತಲುಪಲಿದೆ. ಇದರಿಂದ ದೇಶದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಧಿಕ ತಾಪಮಾನದ ಕಾರಣ ಕೀಟಗಳ ಬಾಧೆಯು ಹೆಚ್ಚಾಗುವುದು. ಈ ಕೀಟಗಳು ಹೊಲಗಳ ಪೈರಿನ ಮೇಲೆ ಆಕ್ರಮಣ ಮಾಡಬಹುದು. ಇದರಿಂದ ದೊಡ್ಡ ಹಾನಿಯಾಗುವ ಸಾಧ್ಯತೆಯಿದೆ.