ಮಹಾರಾಷ್ಟ್ರದ ಪರಿಸರ ಖಾತೆ ರಾಜ್ಯ ಸಚಿವ ಮಾನ್ಯ ಆದಿತ್ಯಜಿ ಠಾಕ್ರೆ ಅವರಿಗೆ ಬಂದಿರುವ ಬೆದರಿಕೆಗಳನ್ನು ಸನಾತನ ಸಂಸ್ಥೆಯು ತೀವ್ರವಾಗಿ ಖಂಡಿಸುತ್ತದೆ. ಈ ಬೆದರಿಕೆಗಳನ್ನು ನೀಡಿರುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ; ಆದರೆ ಈ ಚರ್ಚೆಗೆ ಯಾವುದೇ ಸಂಬಂಧವಿಲ್ಲದ ಮತ್ತು ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳ ವಿಷಯದಲ್ಲಿ, ಮಹಾರಾಷ್ಟ್ರದ ಸಚಿವರಾದ ನವಾಬ್ ಮಲಿಕ್ ಮತ್ತು ಛಗನ್ ಭುಜಬಲ್ ಇಬ್ಬರೂ ವಿನಾಕಾರಣ ಸನಾತನ ಸಂಸ್ಥೆಯ ಮೇಲೆ ಆರೋಪಗಳನ್ನು ಹೊರಿಸಿದ್ದಾರೆ. ಅವರ ಆರೋಪಗಳು ಸುಳ್ಳು ಮತ್ತು ರಾಜಕೀಯ ಪ್ರೇರಿತವಾಗಿವೆ. ಈ ಮೂಲಕ ಹಿಂದುತ್ವವಾದಿ ಸಂಸ್ಥೆಗೆ ಪರ್ಯಾಯವಾಗಿ ಹಿಂದುತ್ವದ ತೇಜೋವಧೆ ಮಾಡುವ ಉದ್ದೇಶವೇ ಕಂಡುಬರುತ್ತದೆ.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಿರ್ಬಂಧಗಳ ಹೊರತಾಗಿಯೂ, ರಝಾ ಅಕಾಡೆಮಿಯು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ ತೆಗೆದು ನಡೆಸಿದ ಗಲಭೆಯಿಂದ ಮಹಾರಾಷ್ಟ್ರವು ಹೊತ್ತಿ ಉರಿದಿತ್ತು, ಇದರ ಮೇಲೆ ಕ್ರಮಕ್ಕೆ ಒತ್ತಾಯಿಸದೆ; ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ (ಪೂರ್ವಾಶ್ರಮದ ವಾಸಿಂ ರಿಜ್ವಿ) ಇವರ ಶಿರಚ್ಛೇದ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆಯೊಡ್ಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡದೆ, ಯಾವುದೇ ಪುರಾವೆಗಳಿಲ್ಲದೆ ಸನಾತನ ಸಂಸ್ಥೆಯನ್ನು ರಾಷ್ಟ್ರವ್ಯಾಪಿ ನಿಷೇಧಿಸುವಂತೆ ಛಗನ್ ಭುಜಬಲ್ ಒತ್ತಾಯಿಸುತ್ತಿದ್ದಾರೆ. ಇದೊಂದು ‘ಕಾಲ್ ದಿ ಡಾಗ್ ಮ್ಯಾಡ್ ಅಂಡ್ ಶೂಟ್ ಹಿಮ್’ ಎಂಬ ಇಂಗ್ಲಿಷ್ ಗಾದೆಯಂತೆ ಹಿಂದೂವಿರೋಧಿ ಶಕ್ತಿಗಳು ಸನಾತನವನ್ನು ಮುಗಿಸುವ ಪ್ರಯತ್ನವಾಗಿದೆ. ಇದನ್ನು ನಾವು ಖಂಡಿಸುತ್ತೇವೆ.