ಹಿಂದೂ ದೇವಾಲಯದಲ್ಲಿ ಹಸ್ತಕ್ಷೇಪ ಮಾಡಲು ಸರಕಾರ ಮತ್ತು ನ್ಯಾಯಾಲಯಕ್ಕೆ ಯಾವುದೇ ಹಕ್ಕಿಲ್ಲ ! – ಸ್ವಾಮಿ ಪರಿಪೂರ್ಣಾನಂದ ಮಹಾರಾಜರು, ತೆಲಂಗಾಣ

‘ಹಿಂದೂ ದೇವಾಲಯಗಳನ್ನು ಜಾತ್ಯತೀತಗೊಳಿಸುವ ಷಡ್ಯಂತ್ರ !’ಈ ವಿಷಯದ ‘ಆನ್‌ಲೈನ್’ ವಿಶೇಷ ಸಂವಾದ !

ದೇವಾಲಯದ ಆಡಳಿತ ಸಮಿತಿಯೊಳಗೆ ಇತರ ಧರ್ಮದವರು ನುಸುಳುವಿಕೆ ಆಗಿದೆ. ಹಿಂದೂ ದೇವಾಲಯಗಳ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಹಿಂದೂ ದೇವಾಲಯಗಳನ್ನು ನಡೆಸುಸುತ್ತಿರುವ ಸೆಕ್ಯುಲರ್ ಜನರು ಹಿಂದೂ ದೇವತೆಗಳನ್ನು ‘ಸೈತಾನ’ ಎಂದು ಪರಿಗಣಿಸುತ್ತಾರೆ. ದೇವಸ್ಥಾನದ ಆವರಣದ ಬಳಿ ಇತರ ಧರ್ಮೀಯರು ಅಂಗಡಿಗಳನ್ನು ಹಾಕುತ್ತಾರೆ, ಆದರೆ ಮಸೀದಿಗಳು ಮತ್ತು ಚರ್ಚ್‌ಗಳ ಬಳಿ ಹಿಂದೂ ಹಬ್ಬಗಳ ಮೆರವಣಿಗೆ ನಡೆಸಿದರೆ ಅದನ್ನು ವಿರೋಧಿಸಲಾಗುತ್ತದೆ. ಸರ್ವೋಚ್ಚ ನ್ಯಾಯಾಲಯವು ‘ಹಲಾಲ್’ ಅನ್ನು ನಿಷೇಧಿಸುವ ಬಗ್ಗೆ ನಿರ್ಧರಿಸಬೇಕು, ಹಿಂದೂ ಹಬ್ಬಗಳು ಮತ್ತು ಮೆರವಣಿಗೆಗಳಿಗೆ ಸ್ವಾತಂತ್ರ್ಯವನ್ನು ನೀಡಬೇಕು; ಆದರೆ ಹಿಂದೂಗಳ ದೇವಸ್ಥಾನಗಳನ್ನು ಬೇರೆ ಧರ್ಮದವರಿಗೆ ಹಸ್ತಾಂತರಿಸುವ ನಿರ್ಧಾರವನ್ನು ಹಿಂದೂಗಳ ಮೇಲೆ ಹೇರಲಾಗುತ್ತಿದೆ. ಹಿಂದೂ ದೇವಾಲಯಗಳ ಆಸ್ತಿ ಮತ್ತು ನಿಬಂಧನೆಗಳಲ್ಲಿ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ಮೂಗು ತೂರಿಸುವ ಅಧಿಕಾರವಿಲ್ಲ, ಎಂದು ತೆಲಂಗಾಣದ ಸ್ವಾಮಿ ಪರಿಪೂರ್ಣಾನಂದ ಮಹಾರಾಜರು ಸ್ಪಷ್ಟಪಡಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂ ದೇವಸ್ಥಾನಗಳನ್ನು ಜಾತ್ಯತೀತಗೊಳಿಸುವ ಷಡ್ಯಂತ್ರ !’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರರಾದ ನ್ಯಾಯವಾದಿ ವಿಷ್ಣು ಶಂಕರ ಜೈನರು ಮಾತನಾಡುತ್ತಾ, ಸರಕಾರ ಯಾವುದೇ ರೀತಿಯಲ್ಲಿ ಹಿಂದೂ ದೇಗುಲಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಿಲ್ಲ. ಹಿಂದೂ ದೇವಾಲಯಗಳಲ್ಲಿ ಭಕ್ತರು ನೀಡುವ ಹಣವನ್ನು ಸರಕಾರವು ಇತರ ಧರ್ಮಗಳಿಗೆ ಹೇಗೆ ಬಳಸುತ್ತದೆ ? ಇದು ಹಿಂದೂಗಳ ವಿಷಯದಲ್ಲಿ ವಿಶ್ವಾಸದ್ರೋಹ ಮತ್ತು ಹಗರಣವಾಗಿದೆ. ದೇವಾಲಯಗಳಲ್ಲಿ ಕೇವಲ ದೇವತೆಗಳ ನಿಯಮಗಳನ್ನು ಮಾತ್ರ ಪಾಲಿಸಲಾಗುವುದು. ಹಿಂದೂ ದೇವಾಲಯಗಳ ನಿರ್ವಹಣೆಯಲ್ಲಿ ಇತರ ಧರ್ಮದವರು ಹಸ್ತಕ್ಷೇಪ ಮಾಡುವ ಮೂಲಕ ಹಿಂದೂ ದೇವಾಲಯಗಳನ್ನು ಭ್ರಷ್ಟಗೊಳಿಸುತ್ತಿದ್ದಾರೆ. ಸಂವಿಧಾನದ ೨೬ ನೇ ಪರಿಚ್ಛೇದದ ಪ್ರಕಾರ, ‘ಹಿಂದೂಗಳಿಗೆ ಅವರ ದೇವಾಲಯಗಳ ವ್ಯವಹಾರಗಳನ್ನು ನೋಡಿಕೊಳ್ಳುವ ಸಂಪೂರ್ಣ ಹಕ್ಕಿದೆ’, ಹಾಗೆಯೇ ಪರಿಚ್ಛೇದ ೨೫ ಕ್ಕನುಸಾರ, ‘ಹಿಂದೂಗಳಿಗೆ ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಅಬಾಧಿತವಾಗಿರಿಸಿ ತಮ್ಮದೇ ಆದ ಪದ್ದತಿಯಲ್ಲಿ ಬದುಕುವ ಹಕ್ಕಿದೆ.’ ಈ ಬಗ್ಗೆ ಹಿಂದೂಗಳ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಲಾಗುವುದು, ನ್ಯಾಯಾಲಯವು ಕೇಳದಿದ್ದಲ್ಲಿ, ನಾವು ಜನರಲ್ಲಿ ಜಾಗೃತಿ ನಿರ್ಮಿಸಿ ಹಿಂದೂಗಳ ಧ್ವನಿಯನ್ನು ಜನಪ್ರತಿನಿಧಿಗಳ ಮೂಲಕ ಸಂಸತ್ತಿಗೆ ತಲುಪಿಸುವೆವು ಎಂದು ನ್ಯಾಯವಾದಿ ವಿಷ್ಣು ಜೈನರು ಹೇಳಿದರು.

ಇಲ್ಲಿಯ ನ್ಯಾಯವಾದಿ ಶ್ರೀಹರಿ ಕುತ್ಸ ಮಾತನಾಡುತ್ತಾ, ದೇವಸ್ಥಾನದ ಆವರಣದಲ್ಲಿ ಅನ್ಯ ಧರ್ಮೀಯರಿಗೆ ಅಂಗಡಿಗಳನ್ನು ಇಡಲು ಅವಕಾಶ ನೀಡಲಾಗುತ್ತಿದೆ. ಮಸೀದಿ ಪ್ರದೇಶದಲ್ಲಿ ಹಿಂದೂಗಳಿಗೆ ಅಂಗಡಿಗಳನ್ನು ನಡೆಸಲು ಬಿಡುತ್ತಾರೆಯೇ ? ದೇವಸ್ಥಾನಗಳನ್ನು ಪ್ರವಾಸಿ ತಾಣವಾಗಿ ನೋಡುವುದನ್ನು ಸರಕಾರ ಬಿಡಬೇಕು ಎಂದು ಹೇಳಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡಿ, ದೇವಸ್ಥಾನಗಳು ಧರ್ಮದ ತಳಹದಿಯಾಗಿವೆ. ವಿವಿಧ ಸರಕಾರಗಳು ದೇವಾಲಯಗಳನ್ನು ಸ್ವಾಧೀನಪಡಿಸಿಕೊಂಡವು ಮತ್ತು ದೇವಾಲಯಗಳನ್ನು ಲೂಟಿ ಮಾಡಲು ಪ್ರಾರಂಭಿಸಿದವು. ಹಲವು ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಿಸಿ ಈ ಭೂಮಿಯನ್ನು ಕಬಳಿಸಿದರು. ಹಜ್ ಯಾತ್ರೆಗೆ ಸಬ್ಸಿಡಿ ನೀಡುವುದು ಸೇರಿದಂತೆ ಹಲವು ಉದ್ದೇಶಗಳಿಗೆ ದೇವಸ್ಥಾನದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈಗ ಅವರು ಧಾರ್ಮಿಕ ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದ್ದಾರೆ. ಹಿಂದೂ ದೇವಾಲಯ ಸಂಸ್ಕೃತಿಯನ್ನು ನಾಶಪಡಿಸುವ ಯೋಜಿತ ಷಡ್ಯಂತ್ರದಿಂದ ಪ್ರಯತ್ನಗಳು ನಡೆಯುತ್ತಿದ್ದು, ಇದು ನೋವಿನಿಂದ ಕೂಡಿದ್ದು, ಇದು ಹಿಂದೂಗಳ ಮನದಲ್ಲಿ ಅತೃಪ್ತಿ ಮೂಡಿಸುತ್ತಿದೆ. ಹಿಂದೂ ಸಮಾಜವು ಇದನ್ನು ಹೆಚ್ಚು ಕಾಲ ಸಹಿಸುವುದಿಲ್ಲ ಎಂದು ಹೇಳಿದರು.