ದೇವಸ್ಥಾನದ ಸಂರಕ್ಷಣೆ, ಪರಂಪರೆಯ ಸಂವರ್ಧನೆ ಮತ್ತು ಭಕ್ತಾದಿಗಳಿಗೆ ಆಧುನಿಕ ಸೌಲಭ್ಯಗಳು
ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರಿಂದ ೧,೪೪೫ ಕೋಟಿ ರೂಪಾಯಿ ವೆಚ್ಚದ ‘ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆ’ಗೆ ಚಾಲನೆ!

ಕೊಲ್ಲಾಪುರ – ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಹಾ ಅವರ ಹಸ್ತದಿಂದ ಮತ್ತು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪ್ರಮುಖ ಉಪಸ್ಥಿತಿಯಲ್ಲಿ ಜೂನ್ ೨೦ ರಂದು ‘ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆ’ಯ ಅಡಿಯಲ್ಲಿ ೧,೪೪೫ ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ಜೀರ್ಣೋದ್ಧಾರ, ಸಂರಕ್ಷಣೆ ಮತ್ತು ಪರಿಸರ ಅಭಿವೃದ್ಧಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ, ಕೊಲ್ಲಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಕಾಶ್ ಆಬಿಟ್ಕರ್, ಶಿವಸೇನೆಯ ಶಾಸಕ ರಾಜೇಶ್ ಕ್ಷೀರಸಾಗರ್, ಕೊಲ್ಲಾಪುರದ ಮೇಯರ್ ರೂಪಾರಾಣಿ ನಿಕಮ್, ಭಾಜಪ ಸಂಸದ ಧನಂಜಯ್ ಮಹಾಡಿಕ್ ಸೇರಿದಂತೆ ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಗೃಹ ಸಚಿವ ಅಮಿತ್ ಶಹಾ ಅವರು ತಮ್ಮ ಧರ್ಮಪತ್ನಿಯವರೊಂದಿಗೆ ಶ್ರೀ ಅಂಬಾಬಾಯಿಯ ದರ್ಶನ ಪಡೆದು ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ತದನಂತರ ದೇವಸ್ಥಾನದ ಆವರಣದಲ್ಲಿರುವ ‘ರಾಮಾಚಾ ಪಾರ್’ನಲ್ಲಿ ಶ್ರೀ ದೇವಿಯ ಉತ್ಸವ ಮೂರ್ತಿಗೆ ಪೂಜೆ ನೆರವೇರಿಸಲಾಯಿತು. ರಾಜ್ಯ ಸರಕಾರವು ಮಂಜೂರು ಮಾಡಿರುವ ‘ಮಹಾಲಕ್ಷ್ಮಿ ಮಂದಿರ ಅಭಿವೃದ್ಧಿ ಯೋಜನೆ’ಯು ಕೊಲ್ಲಾಪುರದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ೩ ಹಂತಗಳಲ್ಲಿ ಅನುಷ್ಠಾನಗೊಳ್ಳಲಿರುವ ಈ ‘ಬೃಹತ್ ಅಭಿವೃದ್ಧಿ ಯೋಜನೆ’ಯ ಅಡಿಯಲ್ಲಿ ದರ್ಶನ ಮಂಟಪ, ಅನ್ನದಾಸೋಹ ಭವನ (ಅನ್ನಛತ್ರ), ದೇವಸ್ಥಾನ ಮತ್ತು ದೇವಸ್ಥಾನ ಸಮಿತಿಯ ಕಚೇರಿ, ಸ್ವತಂತ್ರ ಶೌಚಾಲಯಗಳು, ಅಂಗಡಿಗಳು, ಮಾಹಿತಿ ಕೇಂದ್ರ, ಭದ್ರತಾ ಚೌಕಿ, ಭವ್ಯ ಸಭಾಂಗಣ, ಪೊಲೀಸ್ ಠಾಣೆ, ಪ್ರಥಮ ಚಿಕಿತ್ಸಾ ಕೇಂದ್ರ, ವೇದಪಾಠಶಾಲೆ, ಭೋಜನಾಲಯ ಮತ್ತು ಬೃಹತ್ ವಾಹನ ನಿಲ್ದಾಣ (ಪಾರ್ಕಿಂಗ್) ನಿರ್ಮಿಸಲಾಗುವುದು.

ಪ್ರಸ್ತುತ ಮೂಲ ದೇವಸ್ಥಾನದ ಸಂರಕ್ಷಣೆಗಾಗಿ ೩೨ ಕೋಟಿ ೯೬ ಲಕ್ಷ ರೂಪಾಯಿ ಹಾಗೂ ದೇವಸ್ಥಾನದ ವಿದ್ಯುದೀಕರಣ, ಸಿಸಿಟಿವಿ ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳಿಗಾಗಿ ೨೩ ಕೋಟಿ ೫ ಲಕ್ಷ ರೂಪಾಯಿಗಳ ಕೆಲಸಗಳು ವೇಗವಾಗಿ ನಡೆಯುತ್ತಿವೆ. ದೇವಸ್ಥಾನದ ಪುರಾತನ ವೈಭವ ಮತ್ತು ಭವ್ಯತೆಯನ್ನು ಕಾಯ್ದುಕೊಳ್ಳಲು ಸುತ್ತಮುತ್ತಲಿನ ೪೧ ಸಣ್ಣ ಮತ್ತು ದೊಡ್ಡ ದೇವಸ್ಥಾನಗಳ ಜೀರ್ಣೋದ್ಧಾರ, ನಗರ ಪ್ರದಕ್ಷಿಣೆ ಮಾರ್ಗದ ಸುಂದರ ಸುಶೋಭೀಕರಣ ಮತ್ತು ದೇವಸ್ಥಾನದ ಆವರಣದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಗಾಗಿ ೨೮,೦೫೮ ಚದರ ಮೀಟರ್ ಭೂಮಿಯನ್ನು ಮೌಲ್ಯಮಾಪನ ಮಾಡಲಾಗಿದ್ದು, ಅದರಲ್ಲಿ ೧೯,೪೮೯ ಚದರ ಮೀಟರ್ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯ ಮಾರ್ಗದರ್ಶನದಲ್ಲಿ ವೇಗವಾಗಿ ನಡೆಯುತ್ತಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!