ಜನಸಂಖ್ಯಾ ನಿಯಂತ್ರಣ ಕಾನೂನು ಮಾಡಿ ಇಲ್ಲದಿದ್ದರೆ ಹಿಂದುತ್ವದ ಬಗ್ಗೆ ಮಾತನಾಡುವ ಅಧಿಕಾರವಿಲ್ಲ !

ಡಾ. ಪ್ರವಿಣ ತೊಗಡಿಯಾ ಇವರಿಂದ ಭಾಜಪ ಸರಕಾರಕ್ಕೆ ಆಗ್ರಹ

ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಅಧ್ಯಕ್ಷ ಡಾ. ಪ್ರವೀಣ ತೊಗಾಡಿಯಾ

ಹರಿದ್ವಾರ (ಉತ್ತರಾಖಂಡ) – ಕೇಂದ್ರ ಸರಕಾರವು ಜನಸಂಖ್ಯಾ ನಿಯಂತ್ರಣ ಕಾನೂನನ್ನು ಶೀಘ್ರವಾಗಿ ಜಾರಿ ಮಾಡಬೇಕು, ಇಲ್ಲದಿದ್ದರೆ ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ಅಧಿಕಾರವಿಲ್ಲ, ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಅಧ್ಯಕ್ಷ ಡಾ. ಪ್ರವೀಣ ತೊಗಾಡಿಯಾ ಇವರು ಹೇಳಿದರು ಹಾಗೂ ತಬಲಿಗಿ ಜಮಾತ್‍ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

ಕೇವಲ ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಸರಕಾರಿಕರಣ ಏಕೆ ?

ಡಾ. ತೊಗಡಿಯಾವರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇತರ ಧರ್ಮೀಯರ ಧಾರ್ಮಿಕ ಸ್ಥಳಗಳನ್ನು ಸರಕಾರಿಕರಣ ಮಾಡುವುದಿಲ್ಲ, ಹಾಗಾದರೆ ಭಾಜಪದ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ದೇವಸ್ಥಾನಗಳ ಸರಕಾರೀಕರಣ ಏಕೆ ಆಗುತ್ತಿದೆ ? ಎಂದು ಪ್ರಶ್ನಿಸಿದರು.

‘2017 ನೇ ಇಸವಿಯಲ್ಲಿ ಭೋಪಾಲದಲ್ಲಿ ನನಗೆ ಶ್ರೀರಾಮಮಂದಿರದ ವಿಷಯದಲ್ಲಿ ಮಾತನಾಡಲು ರಾ.ಸ್ವ. ಸಂಘದ ನಾಯಕರು ತಡೆದಿದ್ದರಿಂದ ನಾನು ಅನಿವಾರ್ಯವಾಗಿ ವಿಹಿಂಪವನ್ನೇ ಬಿಟ್ಟೆನು’, ಎಂದು ಡಾ. ತೊಗಡಿಯಾರವರು ಹೇಳಿದರು.