೧. ಪೊಲೀಸರ ಎಚ್ಚರಿಕೆಗೆ ಕಿವಿಗೊಡದವರ ವಿರುದ್ಧ ಕ್ರಮ ಕೈಗೊಳ್ಳಿ !
ಕೋಲಾರದಲ್ಲಿ ಪೊಲೀಸರ ಎಚ್ಚರಿಕೆಯ ನಂತರವೂ ಕ್ರೈಸ್ತರು ಹಿಂದೂಗಳ ಮನೆಗಳಿಗೆ ತೆರಳಿ ಕ್ರೈಸ್ತರ ಧಾರ್ಮಿಕ ಪುಸ್ತಕಗಳನ್ನು ಹಂಚಲು ಪ್ರಯತ್ನಿಸಿದ್ದರಿಂದ ಜನರು ಆ ಪುಸ್ತಕಗಳಿಗೆ ಬೆಂಕಿ ಹಚ್ಚಿದರು.
೨. ಇಂತಹ ಸಂಸ್ಥೆಗಳನ್ನು ನಿಷೇಧಿಸಿ !
ಮದರ್ ತೆರೇಸಾ ಅವರು ಸ್ಥಾಪಿಸಿದ ‘ಮಿಶನರೀಸ್ ಆಫ್ ಚಾರಿಟಿ’ ಎಂಬ ಕ್ರೈಸ್ತರ ಸಂಸ್ಥೆಯ ವಿರುದ್ಧ ವಡೋದರಾ (ಗುಜರಾತ್)ದಲ್ಲಿ ಮತಾಂತರದ ಪ್ರಕರಣವನ್ನು ದಾಖಲಿಸಲಾಗಿದೆ. ಮಕ್ಕಳ ಸುಧಾರಣಾ ಕೇಂದ್ರದಲ್ಲಿರುವ ಬಾಲಕಿಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಸಂಸ್ಥೆ ಯತ್ನಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
೩. ‘ಎಸ್.ಡಿ.ಪಿ.ಐ.’ವನ್ನು ನಿಷೇಧಿಸಿ !
‘ಶ್ರೀರಂಗಪಟ್ಟಣದ ಮಸೀದಿಯ ಜಾಗದಲ್ಲಿ ನೀವು ಎಷ್ಟೇ ದೊಡ್ಡ ಮಂದಿರ ನಿರ್ಮಿಸಿದರೂ, ಅಲ್ಲಿ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಮೊಳಗುವುದು ಎಂದು ನಾನು ಹಿಂದೂ ಸಂಘಟನೆಗಳಿಗೆ ಹೇಳಲು ಬಯಸುತ್ತೇನೆ’ ಎಂಬುದಾಗಿ ‘ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’ದ ಮುಖಂಡ ನೂರುದ್ದೀನ್ ಫಾರೂಕಿ ಬೆದರಿಕೆಯೊಡ್ಡಿದ್ದಾನೆ.
೩. ಭಾರತವು ‘ಇಸ್ಲಾಮಿಕ್ ರಾಷ್ಟ್ರ’ವಾಗುವ ಮೊದಲು ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸಿ !
‘ಮುಸಲ್ಮಾನರು ಹೆಚ್ಚು ಮಕ್ಕಳಿಗೆ ಜನ್ಮ ನೀಡದಿದ್ದರೆ, ನಮ್ಮ ಸಮಾಜವು ಭಾರತವನ್ನು ಹೇಗೆ ಆಳಲು ಸಾಧ್ಯ ? ಅಸದುದ್ದೀನ್ ಓವೈಸಿ ಪ್ರಧಾನಿಯಾಗುವುದು ಹೇಗೆ ?’ ಎಂದು ಎಂ.ಐ.ಎಂ. ನ ಅಲಿಗಢ ಜಿಲ್ಲಾಧ್ಯಕ್ಷ ಗುಫರಾನ್ ನೂರ್ ಪ್ರಶ್ನಿಸಿದ್ದಾರೆ.
೪. ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಭಾರತ ಸಾಧಿಸಿದ ‘ಪ್ರಗತಿ’ !
೨೦೨೧ ನೇ ಇಸವಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೆ ೩೨ ಸಾವಿರ ರೂಪಾಯಿ ವಿದೇಶಿ ಸಾಲವಿದೆ. ಪ್ರಸ್ತುತ ಭಾರತದ ಮೇಲೆ ೪೩ ಲಕ್ಷ ೩೨ ಸಾವಿರ ರೂಪಾಯಿಗಳ ವಿದೇಶಿ ಸಾಲವಿದ್ದು, ಒಟ್ಟು ೧೪೭ ಲಕ್ಷ ಕೋಟಿ ರೂ. ಯಷ್ಟು ಸಾಲವಿದೆ.
೫. ಹೀಗೆ ಭಾರತದಾದ್ಯಂತ ಏಕೆ ನಡೆಯುವುದಿಲ್ಲ?
ಜಲಪಾಯಿಗುಡಿ (ಬಂಗಾಲ) ಯಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ತೊಂದರೆಯಾಗಬಾರದು ಎಂದು ಇಲ್ಲಿನ ಒಂದು ಮಸೀದಿಯಲ್ಲಿ ಅಜಾನ್ ಕೇಳಲು ಧ್ವನಿವರ್ಧಕಗಳನ್ನು ಬಳಸದಿರಲು ನಿರ್ಧರಿಸಲಾಗಿದೆ.
೬. ಇಂತಹ ಪೊಲೀಸರನ್ನು ವಜಾ ಮಾಡಿ ಅವರ ವಿಚಾರಣೆ ನಡೆಸಿ
ರಾಂಚಿ (ಝಾರಖಂಡ)ಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಮುಕೇಶ ಸೋನಿಯವರ ಹತ್ಯೆ ಪ್ರಕರಣದಲ್ಲಿ ಖಲಾರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಫರಿದಾ ಆಲಮ್ ಇವನೇ ಮುಖ್ಯ ರೂವಾರಿ ಎಂದು ಸೋನಿಯವರ ಸಂಬಂಧಿಕರು ಆರೋಪಿಸಿದ್ದಾರೆ.
೭. ಅತಿಕ್ರಮಣವಾದ ದೇವಸ್ಥಾನಗಳನ್ನು ಮುಕ್ತಗೊಳಿಸಲು ಸರಕಾರವು ಹೆಜ್ಜೆ ಇಡುವುದೇ ?
ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸೀದಿಯಲ್ಲಿ ನಡೆಯುವ ನಮಾಜು ಪಠಣವನ್ನು ನಿಷೇಧಿಸಬೇಕೆಂದು ಮಥುರಾದ ನ್ಯಾಯಾಲಯದಲ್ಲಿ ಶ್ರೀಕೃಷ್ಣಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಅಧ್ಯಕ್ಷರು ಆಗ್ರಹಿಸಿದ್ದಾರೆ.