ಅಹಿಂದೂಗಳಿಗೆ ಮಂದಿರದ ಅಂಗಡಿಗಳ ಹರಾಜಿನ ಪ್ರಕ್ರಿಯೆಯಲ್ಲಿ ಧರ್ಮದ ಆಧಾರದಲ್ಲಿ ನಿಷೇಧಿಸಲು ಸಾಧ್ಯವಿಲ್ಲ!- ಸರ್ವೋಚ್ಚ ನ್ಯಾಯಾಲಯದ ನಿರ್ಣಯ

12 ಜ್ಯೋತಿಲಿಂಗಗಳಲ್ಲಿ ಒಂದು ಆಗಿರುವ ಆಂಧ್ರಪ್ರದೇಶದ ಮಲ್ಲಿಕಾರ್ಜುನ ಮಂದಿರದ ಪ್ರಕರಣ

ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಆದೇಶ ರದ್ದು

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಮಂದಿರದ ಸಂದರ್ಭದಲ್ಲಿ ಮಹತ್ವಪೂರ್ಣ ತೀರ್ಪು ನೀಡಿದೆ. ನ್ಯಾಯಾಲಯವು ಇಲ್ಲಿಯ ವ್ಯಾಪಾರಿ ಮುಂಗಟ್ಟುಗಳ ಅಂಗಡಿಗಳ ಹರಾಜಿನ ಪ್ರಕ್ರಿಯೆಯಲ್ಲಿ ಅಹಿಂದುಗಳಿಗೆ ಅವಕಾಶಕ್ಕೆ ನಿರ್ಬಂಧ ಹೇರುವ ಅಧಿಸೂಚನೆಯನ್ನು ರದ್ದುಗೊಳಿಸಿದೆ. ಎಲ್ಲ ಅಂಗಡಿಗಳ ಹರಾಜಿನ ಪ್ರಕ್ರಿಯೆಯಲ್ಲಿ ಎಲ್ಲ ಧರ್ಮದ ಜನರಿಗೆ ಭಾಗವಹಿಸಲು ಅನುಮತಿ ನೀಡಲಾಗಿದೆ. `ಅಹಿಂದೂಗಳನ್ನು ಮಂದಿರದ ಹರಾಜಿನ ಪ್ರಕ್ರಿಯೆಯಲ್ಲಿ ಧರ್ಮದ ಆಧಾರದಲ್ಲಿ ನಿಷೇಧಿಸಲು ಸಾಧ್ಯವಾಗುವುದಿಲ್ಲ’, ಎಂದು ನ್ಯಾಯಾಲಯವು ತಿಳಿಸಿದೆ. ಈ ಹಿಂದೆಯೂ ಮಂದಿರ ವ್ಯವಸ್ಥಾಪಕ ಮತ್ತು ಜಿಲ್ಲಾಡಳಿತದಿಂದ ಅಧಿಸೂಚನೆಯನ್ನು ಜಾರಿಗೊಳಿಸಲಾಗಿತ್ತು. ಅದರಲ್ಲಿ `ಮಂದಿರದ ವ್ಯಾಪಾರಿ ಮುಂಗಟ್ಟುಗಳ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಹಿಂದೂ ಧರ್ಮದ ಜನರು ಮಾತ್ರ ಭಾಗವಹಿಸಬಹುದು’, ಎಂದು ಹೇಳಲಾಗಿತ್ತು. ಈ ಅಧಿಸೂಚನೆಯನ್ನು ಸೈಯದ ಜಾನಿ ಬಾಶಾ ಇವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಉಚ್ಚ ನ್ಯಾಯಾಲಯವು ಈ ದೂರನ್ನು ತಿರಸ್ಕರಿಸಿತ್ತು. ತದನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು.

ಸರ್ವೋಚ್ಚ ನ್ಯಾಯಾಲಯವು ಹೇಳಿರುವುದೇನೆಂದರೆ, ಅಹಿಂದೂಗಳಿಗೆ ವ್ಯಾಪಾರಿ ಮುಂಗಟ್ಟುಗಳಲ್ಲಿ ಅಂಗಡಿ ಹಾಕಲು ಅನುಮತಿ ನೀಡಿದ್ದರೂ ಮಂದಿರದ ಪರಿಸರದ ಒಳಗೆ ಯಾರಿಗೂ ಹೋಗಲು ಅವಕಾಶವಿಲ್ಲ, ಇದರಿಂದ ಮಂದಿರ ಮತ್ತು ಭಕ್ತರ ಶ್ರದ್ಧೆಯ ಅಪಮಾನವಾಗುವುದು. ಅಲ್ಲಿ ಮದ್ಯಪಾನ ಮತ್ತು ಜೂಜಾಡಲು ಅವಕಾಶವಿಲ್ಲ, ಆದರೆ ನೀವು ಯಾರಿಗೂ `ನೀವು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲವಾದುದರಿಂದ ಹೂವು, ಆಟಿಗೆ ಮತ್ತು ಮೂರ್ತಿಗಳನ್ನು ಮಾರಾಟ ಮಾಡಬಾರದು’ ಎಂದು ಹೇಳಲು ಸಾಧ್ಯವಿಲ್ಲ. ನಾವು ಆದೇಶಿಸುವುದೇನೆಂದರೆ, ಮಂದಿರದ ಅಂಗಡಿಗಳ ಹರಾಜು ಮತ್ತು ಬಾಡಿಗೆ ಪ್ರಕ್ರಿಯೆಯಿಂದ ಅಹಿಂದುಗಳನ್ನು ಪ್ರತ್ಯೇಕಿಸಲು ಆಗುವುದಿಲ್ಲ.