… ಹಾಗಿದ್ದರೆ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿ ಕೇಳಿಬರುವುದು ! – ಶ್ಯಾಮ ಸಿಂಹ ಠಾಕೂರ, ಪ್ರದೇಶಾಧ್ಯಕ್ಷ, ಮಹಾರಾಷ್ಟ್ರ ಕರಣಿ ಸೇನಾ

ಚಲನಚಿತ್ರಕ್ಕೆ `ಪೃಥ್ವಿರಾಜ’ಎಂದು ನಾಮಕರಣ ಮಾಡಿ ಸಾಮ್ರಾಟ ಪೃಥ್ವಿರಾಜ ಚೌಹಾನರ ಅವಮಾನಿಸಿದ ಪ್ರಕರಣ

ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು ! – ಸಂಪಾದಕರು

ಮುಂಬಯಿ – ಸಾಮ್ರಾಟ ಪೃಥ್ವಿರಾಜ ಚೌಹಾನರು ಹಿಂದೂಗಳ ಕೊನೆಯ ಸಮ್ರಾಟರಾಗಿದ್ದರು. ಅವರ ಬಗ್ಗೆ ಎಲ್ಲ ಭಾರತೀಯರು ಮತ್ತು ಹಿಂದೂ ಸಮಾಜದ ಮನಸ್ಸಿನಲ್ಲಿ ಗೌರವವಿದೆ. ಅವರ ಹೆಸರನ್ನು ಏಕವಚನದಿಂದ ಉಲ್ಲೇಖಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಇದರಿಂದ ಎಲ್ಲ ಹಿಂದೂಗಳ ಭಾವನೆಗೆ ನೋವಾಗಿದೆ. `ಪೃಥ್ವಿರಾಜ’ ಎಂಬ ಚಲನಚಿತ್ರದಲ್ಲಿ ಸಾಮ್ರಾಟ ಪೃಥ್ವಿರಾಜ ಚೌಹಾನರನ್ನು ಏಕವಚನದಲ್ಲಿ ಉಲ್ಲೇಖಿಸಿದ್ದಲ್ಲಿ ಅದರ ಪರಿಣಾಮವು ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿಸುವುದು, ಎಂದು ಮಹಾರಾಷ್ಟ್ರ ಕರಣಿ ಸೇನೆಯ ಪ್ರದೇಶಾಧ್ಯಕ್ಷರಾದ ಶ್ರೀ. ಶ್ಯಾಮಸಿಂಹ ಠಾಕೂರರು ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಕರಣಿ ಸೇನೆಯವತಿಯಿಂದ ಡಿಸೆಂಬರ್ 15 ರಂದು ಮುಂಬಯಿಯ ಮರಾಠಿ ಪತ್ರಕರ್ತರ ಸಂಘದಲ್ಲಿ ತೆಗೆದುಕೊಳ್ಳಲಾದ ಪತ್ರಿಕಾ ಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದರು. `ಪೃಥ್ವಿರಾಜ’ ಚಲನಚಿತ್ರವು `ಯಶ ರಾಜ ಫಿಲಂಸ್’ನದ್ದಾಗಿದೆ.

ಜನವರಿ 21, 2022 ರಂದು ಈ ಚಲನಚಿತ್ರವು ಪ್ರದರ್ಶಿತವಾಗಲಿದೆ.

ಈ ಸಮಯದಲ್ಲಿ ಶ್ರೀ. ಶ್ಯಾಮಸಿಂಹ ಠಾಕೂರರು, “ಸಮ್ರಾಟ್ ಪೃಥ್ವಿರಾಜ್ ಚೌಹಾನರ ಏಕವಚನದಲ್ಲಿನ ಹೆಸರಿನ ಮೇಲೆ ನಮ್ಮ ಆಕ್ಷೇಪವಿದೆ. ಚಲನಚಿತ್ರವನ್ನು ವಿರೋಧಿಸಲು ನಾವು ರಸ್ತೆಗಿಳಿದು ಕಾನೂನುಬದ್ಧ ಮಾರ್ಗದಿಂದ ಆಂದೋಲನ ಮಾಡುವೆವು. ಈ ವಿಷಯದಲ್ಲಿ ನಾವು ರಾಜ್ಯಪಾಲರನ್ನು ಭೇಟಿಯಾಗುವೆವು. ಇತಿಹಾಸವನ್ನು ತಿರುಚುತ್ತಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ಕಡೆಗೆ ದುರ್ಲಕ್ಷ್ಯ ತೋರಿಸುವುದು ಅನುಚಿತವಾಗಿದೆ. ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯಾಚರಣೆ ಮಾಡಬೇಕು” ಎಂದು ಹೇಳಿದರು.

… ಹಾಗಿದ್ದರೆ ಮಹಾರಾಷ್ಟ್ರದಲ್ಲಿ ಚಲನಚಿತ್ರದ ಪ್ರದರ್ಶನವಾಗಲು ಬಿಡುವುದಿಲ್ಲ ! – ಅಜಯಸಿಂಹ ಸೆಂಗರ, ಪ್ರಮುಖರು, ಮಹಾರಾಷ್ಟ್ರ ಕರಣಿ ಸೇನಾ

‘ಪೃಥ್ವಿರಾಜ ಚೌಹಾಣ’ ಎಂದು ಏಕವಚನದಲ್ಲಿ ಚಲನಚಿತ್ರದ ಉಲ್ಲೇಖವಿದೆ. ಈ ಚಲನಚಿತ್ರದಲ್ಲಿ ರಾಣಿ ಸಂಯೋಗಿತಾರವರನ್ನು ನೃತ್ಯ ಮಾಡುತ್ತಿರುವಂತೆ ತೋರಿಸಲಾಗಿದೆ. ಈ ಚಲನಚಿತ್ರದಲ್ಲಿ ಮಹಮ್ಮದ್ ಘೋರಿಯನ್ನು ವೈಭವಿಕರಿಸಲಾಗಿದೆ. ಈ ಹಿಂದೆ ಮುಸಲ್ಮಾನ ಇತಿಹಾಸಕಾರರು ಬರೆದ ಲೇಖನದ ಮೇಲೆ `ಪದ್ಮಾವತಿ’ ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿತ್ತು. `ಪೃಥ್ವಿರಾಜ್ ಚೌಹಾನ’ ಈ ಚಲನಚಿತ್ರವನ್ನೂ ಮುಸಲ್ಮಾನ ಇತಿಹಾಸಕಾರರ ಲೇಖನದಿಂದಲೇ ಸಿದ್ಧಪಡಿಸಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ಧರ್ಮವನ್ನು ಕಡೆಗಣಿಸಲಾಗಿದೆ. ಹಿಂದೂ ಸಾಮ್ರಾಟರಾಗಿದ್ದ ರಾಜರ ಮೇಲೆ ಚಲನಚಿತ್ರ ಕಥೆಯನ್ನು ಬರೆಯಲು ಹಿಂದೂ ಇತಿಹಾಸಕಾರರು ಸಿಗುವುದಿಲ್ಲವೇ ?

ನ್ಯಾಯಾಲಯಕ್ಕೆ ಹೋಗಿ ಚಲನಚಿತ್ರ ಪ್ರದರ್ಶನದ ಮೇಲೆ ನಿಷೇಧ ತರುವೆವು ! – ನ್ಯಾಯವಾದಿ ರಾಘವೇಂದ್ರ ಮಲ್ಹೊತ್ರಾ

`ಪೃಥ್ವಿರಾಜ ಚೌಹಾನ’ ಈ ಚಲನಚಿತ್ರದ `ಟ್ರೆಲರ್’ (ಚಲನಚಿತ್ರ ಪ್ರದರ್ಶನಗೊಳ್ಳುವ ಮುನ್ನ ಅದರ ಪ್ರಚಾರಕ್ಕಾಗಿ ಮಾಡಲಾಗುವ ಜಾಹೀರಾತು) ನಾವು ನೋಡಿದ್ದೇವೆ. ಆ ವಿಷಯವಾಗಿ ನಿರ್ಮಾಪಕರಿಗೆ ನಾವು ಡಿಸೆಂಬರ್ 1 ರಂದು ಕಾನೂನುರೀತ್ಯಾ ನೋಟಿಸ್ ಕಳಿಸಿದ್ದೆವು. ಅದರ ಉತ್ತರಕ್ಕಾಗಿ ಏಳು ದಿನದ ಸಮಯ ನಿಗದಿಪಡಿಸಲಾಗಿತ್ತು; ಆದರೆ ಅದಕ್ಕೆ ಯಾವುದೇ ಉತ್ತರ ಬಂದಿಲ್ಲ. ಆದ್ದರಿಂದ ಈಗ ನ್ಯಾಯಾಲಯಕ್ಕೆ ಹೋಗಿ ನಾವು ಚಲನಚಿತ್ರ ಪ್ರದರ್ಶನದ ಮೇಲೆ ನಿಷೇಧ ಹಾಕುವೆವು. ಚಲನಚಿತ್ರದಲ್ಲಿ `ಸಮ್ರಾಟ್ ಪೃಥ್ವಿರಾಜ ಚೌಹಾನ್ ಅಥವಾ ಗೌರವಾನ್ವಿತ ಹೇಗೆ ಯಾವುದಾದರೂ ಹೆಸರು ನೀಡಬೇಕು. `ಟ್ರೇಲರ್’ನಲ್ಲಿ ಮಹಾರಾಣಿ ಸಂಯೊಗಿತಾ ಇವರ ಶರೀರದ ಅಂಗ ತೋರಿಸಲಾಗಿದೆ. `ಚಲನಚಿತ್ರಕ್ಕೆ ನೀಡಿರುವ `ಗ್ಲಾಮರ್’ಅನ್ನು ನಿಲ್ಲಿಸಬೇಕು. ಹಾಗೂ ಅದರಲ್ಲಿ ತೋರಿಸಿರುವ ಮಾಹಿತಿ ಯೋಗ್ಯವಾಗಿದೆಯೇ ? ಈ ವಿಷಯವಾಗಿ ಇತಿಹಾಸಕಾರರಿಂದ ಪರೀಕ್ಷಿಸಿ ಅದರ ನಂತರ ಚಲನಚಿತ್ರ ಪ್ರದರ್ಶನ ಮಾಡಬೇಕು’, ಎಂದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.