ರಕ್ಷಣೆಯ ‘ಸರ್ವೋಚ್ಚ’ (ಅ)ವ್ಯವಸ್ಥೆ ?

ಸಂಪಾದಕೀಯ

ಯುದ್ಧವಿಮಾನಗಳು ಅಪಘಾತಕ್ಕೀಡಾಗುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಏನು ಪ್ರಯೋಜನ ?

ಭಾರತದ ಸಿ.ಡಿ.ಎಸ್. (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಜನರಲ್ ಬಿಪಿನ್ ರಾವತ್ ಇವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ‘ಎಮ್ ಐ ೧೭ ವಿ-೫’ ಹೆಸರಿನ ಯುದ್ಧ ಹೆಲಿಕಾಪ್ಟರ್ ಡಿಸೆಂಬರ್ ೮ ರ ಮಧ್ಯಾಹ್ನ ಪತನಗೊಂಡಿತು. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಣ್ಣೂರಿನಲ್ಲಿ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್‌ನಲ್ಲಿ ಜನರಲ್ ರಾವತ್ ಅವರ ಪತ್ನಿ ಮತ್ತು ಸೇನೆಯ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ೧೪ ಮಂದಿ ಇದ್ದರು. ಈ ಅಪಘಾತದಲ್ಲಿ ಜನರಲ್ ರಾವತ್ ಸೇರಿದಂತೆ ೧೩ ಮಂದಿ ಸಾವನ್ನಪ್ಪಿದ್ದರು. ಈ ಅಪಘಾತದ ಕುರಿತು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ನೇಮಿಸಲಾಗುವುದು ಎಂದು ತಿಳಿದುಬಂದಿದೆ. ಈ ಪ್ರಕರಣದ ಹಿಂದಿನ ಸತ್ಯ ಬೆಳಕಿಗೆ ಬರಲಿದೆ; ಆದರೆ ಈ ಆಕಸ್ಮಿಕ ಘಟನೆಯು ಈಗ ಅಸ್ತಿತ್ವದಲ್ಲಿರುವ ಭಾರತೀಯ ವ್ಯವಸ್ಥೆಯಲ್ಲಿನ ಅತ್ಯಂತ ಗಂಭೀರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಜಾರಿಗೊಳಿಸದ ಅಕ್ಷಮ್ಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.

ಅದ್ವಿತೀಯ ಕಾರ್ಯ !

ಭೂದಳ, ನೌಕಾದಳ ಮತ್ತು ವಾಯುದಳದ ಜಂಟಿ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸುವ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು ಭಾರತದ ಮೊದಲ ಸಿ.ಡಿ.ಎಸ್. ಆಗಿದ್ದರು. ಮೂಲತಃ ಸಿ.ಡಿ.ಎಸ್. ಈ ಹುದ್ದೆಯನ್ನು ಜನವರಿ ೨೦೨೦ ರಲ್ಲಿ ಅನುಮೋದಿಸಲಾಗಿದ್ದು ಎಲ್ಲಾ ರಕ್ಷಣಾ ಮುಖ್ಯಸ್ಥರು ಈ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ವರದಿಯನ್ನು ನೀಡುತ್ತಾರೆ. ಆಧುನಿಕ ಯುಗದಲ್ಲಿ ವಿವಿಧ ಹಂತಗಳಲ್ಲಿ ವಿವಿಧ ಯುದ್ಧದ ನಿಟ್ಟಿನಲ್ಲಿ ದೃಷ್ಟಿ ಇಟ್ಟು ಸರಕಾರ, ರಕ್ಷಣಾ ಸಚಿವಾಲಯ ಮತ್ತು ರಕ್ಷಣಾ ದಳಗಳ ನಡುವಿನ ಉತ್ತಮ ಸಮನ್ವಯಕ್ಕೆ ಈ ಸ್ಥಾನವು ಅತ್ಯಂತ ಮಹತ್ವದ್ದಾಗಿದೆ. ಸಿ.ಡಿ.ಎಸ್. ಇದು ಈ ಅತ್ಯುನ್ನತ ಹುದ್ದೆಯನ್ನು ಪಡೆಯುವ ಮೊದಲು ೨೦೧೭ ರಿಂದ ೨೦೧೯ ರವರೆಗೆ ೩ ವರ್ಷಗಳ ಅವಧಿಯಲ್ಲಿ ಭೂಸೇನೆಯ ಮುಖ್ಯಸ್ಥರ ಹುದ್ದೆಯಲ್ಲಿರುವಾಗ ಜನರಲ ರಾವತ್ ಅವರು ಧೈರ್ಯದಿಂದ ಸೇನೆಯ ಹಲವು ಕಾರ್ಯ ವಿಧಾನಗಳಲ್ಲಿ ಬಹಳ ಮಹತ್ವದ ಬದಲಾವಣೆಯನ್ನು ತಂದರು. ಪಾಕಿಸ್ತಾನದಲ್ಲಿ ನಡೆಸಿದ ವಿಶ್ವವಿಖ್ಯಾತ ಹೆಜ್ಜೆಯಾಗಿರುವ ಸರ್ಜಿಕಲ್ ಸ್ಟ್ರೈಕ್ ಕೂಡಾ ಅವರ ಅಧಿಕಾರಾವಧಿಯಲ್ಲಿ ನಡೆದಿತ್ತು ! ಆದ್ದರಿಂದಲೇ ರಾವತ್ ಹೆಸರು ಕೇಳಿಯೇ ಪಾಕಿಸ್ತಾನ ಸೇನೆ ಬೆಚ್ಚಿಬೀಳುತ್ತದೆ. ಪಾಕಿಸ್ತಾನದ ಸೇನೆ ಮತ್ತು ಪ್ರಸಾರ ಮಾಧ್ಯಮಗಳ ನಡುವಿನ ಚರ್ಚೆಯಲ್ಲಿ ‘ಜನರಲ್ ರಾವತ್ ಇವರ ನೀತಿ’ ಈ ರೀತಿಯಲ್ಲಿ ಚರ್ಚಿಸಲಾಗುತ್ತದೆ. ಇದರಿಂದ ಜನರಲ್ ಬಿಪಿನ್ ರಾವತ್ ಮತ್ತು ಅವರ ಕಾರ್ಯವೈಖರಿಯ ಅಗತ್ಯತೆ ಹಾಗೂ ಮಹತ್ವವು ನಮ್ಮ ಗಮನಕ್ಕೆ ಬಂದಿರಬಹುದು.

ನಿರುತ್ತರ ಪ್ರಶ್ನೆಗಳು !

ಈ ಅಪಘಾತದಿಂದ ದೇಶದ ರಕ್ಷಣಾವ್ಯವಸ್ಥೆಯಲ್ಲಿ ಆಗಿರುವ ಬಹುದೊಡ್ಡ ಲೋಪಗಳು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. ಜನರಲ್ ರಾವತ್ ಪ್ರಯಾಣಿಸಿದ ಹೆಲಿಕಾಪ್ಟರ್, ಅದು ‘ಎಮ್‌ಐ ೧೭ ವಿ-೫’ ಇದು ವಿಶ್ವದ ಅತ್ಯುತ್ತಮ ಸಾರಿಗೆ ತಂತ್ರಜ್ಞಾನ ಒಳಗೊಂಡಿರುವ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ರಾವತ್ ಮತ್ತು ಅವರಂತಹ ಉನ್ನತ ಸೇನಾಧಿಕಾರಿಗಳು ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಬೇಕಾದರೆ, ಅದಕ್ಕೂ ಮೊದಲು ರಕ್ಷಣೆಗೆ ಬೇಕಾದ ಎಲ್ಲಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಇದರಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ಮಾನವನ ದೋಷ ಇರುವುದಿಲ್ಲ. ‘ಜನರಲ್ ರಾವತ್ ಈ ಹೆಲಿಕಾಪ್ಟರ್‌ನಿಂದ ಪ್ರವಾಸ ಮಾಡುವ ಮುನ್ನ ಎಲ್ಲ ತಾಂತ್ರಿಕ ತಪಾಸಣೆಗೆ ಮಾಡಲಾಗಿತ್ತೇ ?’, ‘ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನವಾಗಿದೆಯೇ?’, ‘ಹೆಲಿಕಾಪ್ಟರ್ ಹಾರಲು ಯೋಗ್ಯವಾಗಿದ್ದರೆ ಅದು ಪತನ ಹೇಗಾಯಿತು ?’, ‘ಇದು ಹತ್ಯೆಯ ಸಂಚಾಗಿದೆಯೇ ?’, ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸಿದೆ. ಈ ಪ್ರಶ್ನೆಗಳಿಗೆ ಸಾರ್ವಜನಿಕರಿಗೆ ಉತ್ತರದ ಅಗತ್ಯವಿದೆ.

ಈ ಅಪಘಾತದಿಂದ ಹಲವು ವಿಷಯಗಳು ಬೆಳಕಿಗೆ ಬಂದಿವೆ. ೨೦೧೨ರಲ್ಲಿ ಅಂದಿನ ಕಾಂಗ್ರೆಸ್‌ನ ಸರಕಾರದ ಸಮಯದಲ್ಲಿ ಆಗಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ೪ ದಶಕಗಳಲ್ಲಿ ವಾಯುಪಡೆಯ ವಿವಿಧ ಅಪಘಾತಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಸತ್ತಿನಲ್ಲಿ ಪ್ರಕಟಿಸಿದ್ದರು. ಏಪ್ರಿಲ್ ೨೦೧೨ ರಲ್ಲಿ ನೀಡಲಾಗಿದ್ದ ವರದಿಯ ಪ್ರಕಾರ ಅಲ್ಲಿಯ ವರೆಗೆ ೪೮೨ ಮಿಗ್ ಹೆಲಿಕಾಪ್ಟರ್‌ಗಳು ಪತನಗೊಂಡಿದ್ದವು. ಅವರಲ್ಲಿ ೧೭೧ ಪೈಲಟ್‌ಗಳು ಮತ್ತು ೩೯ ನಾಗರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹಲವರು ಅನಗತ್ಯವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂದಿನಿಂದ, ಯುದ್ಧ ವಿಮಾನಗಳು ‘ಹಾರುವ ಶವಪೆಟ್ಟಿಗೆಗಳು’ ಅಥವಾ ‘ವಿಧವೆಗಳನ್ನು ಮಾಡುವ ವಿಮಾನಗಳು’ ಎಂದು ‘ಹೆಸರು’ ಪಡೆಯಿತು. ಅಲ್ಲದೆ, ಕಳೆದ ೧೦ ವರ್ಷಗಳಲ್ಲಿ ಪರಿಸ್ಥಿತಿ ಹೆಚ್ಚು ಸುಧಾರಿಸಿಲ್ಲ. ೨೦೧೯ ರ ಒಂದು ವರದಿಯ ಪ್ರಕಾರ, ಆ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ೧೨ ಯುದ್ಧ ವಿಮಾನಗಳು ಅಪಘಾತದಲ್ಲಿ ನಾಶವಾಗಿವೆ. ಕನಿಷ್ಠ ೨೦ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಭಾರತದ ಕಳೆದ ೫ ದಶಕಗಳಿಂದ ಇತಿಹಾಸದಿಂದ ಕಲಿಯದ ಪರಿಣಾಮ ಸಿ.ಡಿ.ಎಸ್. ರಾವತ್ ಅವರ ದುರದೃಷ್ಟಕರ ಅಪಘಾತವು ಬೆಳಕಿಗೆ ಬರುತ್ತದೆ. ಈ ಎಲ್ಲಾ ಘಟನೆಗಳನ್ನು ನೋಡಿದರೆ ರಕ್ಷಣಾ ವ್ಯವಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದರೆ ಅಚ್ಚರಿ ಪಡಬೇಕಿಲ್ಲ.

ಭಾರತದಲ್ಲಿ ಸ್ವಲ್ಪ ಏನಾದರೂ ಹೆಚ್ಚುಕಡಿಮೆಯಾದರೆ ಪಾಶ್ಚಿಮಾತ್ಯ ಮಾಧ್ಯಮಗಳು ಮತ್ತು ಹಿಂದೂದ್ವೇಷಿಗಳಿಗೆ ಕೋಲಾಹಲವೆಬ್ಬಿಸಲು ಅವಕಾಶ ಸಿಕ್ಕಂತಾಗಿದೆ. ಈಗ ಈ ಅಪಘಾತದಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಲು ಪ್ರಯತ್ನ ಮಾಡಬಹುದು. ಈ ಉದಾಹರಣೆಗಳನ್ನು ಬರುವ ಕಾಲದಲ್ಲಿ ಹಲವು ಬಾರಿ ತೆಗೆದುಕೊಳ್ಳುವ ಮೂಲಕ ಭಾರತದ ಸಕಾರಾತ್ಮಕ ಪ್ರಗತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ.

ಚುಚ್ಚುವ ಅನುಪಸ್ಥಿತಿ !

ಸಿ.ಡಿ.ಎಸ್. ಜನರಲ್ ರಾವತ್ ಅವರ ಅಪಘಾತ ಮತ್ತು ಅವರ ಅಕಾಲಿಕ ನಿರ್ಗಮನವು ಆಂತರಿಕ ಮತ್ತು ಬಾಹ್ಯ ಶತ್ರುಗಳಿಗೆ ಅನುಕೂಲವಾಗಿದೆ. ಲಡಾಖ್ ಗಡಿಯಲ್ಲಿ ಚೀನಾ ಪಡೆಗಳು ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಚೀನಾವು ಪರಿಸ್ಥಿತಿಯನ್ನು ದುರುಪಯೋಗ ಪಡಿಸಿ ಭಾರತದ ಮೇಲೆ ದಾಳಿ ಮಾಡಿದರೆ, ಜನರಲ್ ರಾವತ್ ಇವರ ಪಾತ್ರವನ್ನು ಯಾರು ನಿರ್ವಹಿಸಬಹುದು ? ‘ಮೊದಲ ಸಿ.ಡಿ.ಎಸ್. ಎಂದು ೨ ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಜನರಲ್ ರಾವತ್‌ಗೆ ಪರ್ಯಾಯವಾಗಿ ಯಾವ ಅಧಿಕಾರಿ ಇರಲು ಸಾಧ್ಯ?’, ಎಂಬುದು ಇಂದು ಭಾರತದ ಮುಂದಿರುವ ದೊಡ್ಡ ಸವಾಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರಲ್ ರಾವತ್ ಅವರ ಹೆಲಿಕಾಪ್ಟರ್ ಅಪಘಾತ ಮತ್ತು ಅವರ ಸಾವು ರಕ್ಷಣಾ ವ್ಯವಸ್ಥೆಗೆ ಹೊಡೆತವಾಗಿದೆ. ಈ ಆಘಾತವನ್ನು ಸಹಿಸಿಕೊಂಡು ರಕ್ಷಣಾ ವ್ಯವಸ್ಥೆ ಮತ್ತೊಮ್ಮೆ ಉತ್ಸಾಹದಿಂದ ಮತ್ತು ಪೂರ್ಣ ಎದ್ದು ನಿಲ್ಲುವುದು ಭಾರತದ ಭದ್ರತೆಗೆ ಮುಖ್ಯವಾಗಿದೆ.