ಸ್ವಿಜಲ್ರ್ಯಾಂಡ್ ಸರಕಾರದಿಂದ ದಯಾಮರಣ ನೀಡುವ ಯಂತ್ರಕ್ಕೆ ಕಾನೂನುರೀತ್ಯ ಮಾನ್ಯತೆ

ಯಂತ್ರದ ಸಹಾಯದಿಂದ ಯಾವುದೇ ತೊಂದರೆ ಇಲ್ಲದೆ ಒಂದೇ ನಿಮಿಷದಲ್ಲಾಗುವ ಮೃತ್ಯು

ಬರ್ನ (ಜರ್ಮನಿ) – ಸ್ವಿಜಲ್ರ್ಯಾಂಡ್ ನಲ್ಲಿ 1942 ರಿಂದ ದಯಾಮರಣ ಕಾನೂನು ಬದ್ಧವಾಗಿದೆ. ಸ್ವಿಜಲ್ರ್ಯಾಂಡ್ ಸರಕಾರವು ಈಗ ‘ದಯಾಮರಣ ಯಂತ್ರ’ಕ್ಕೆ (`ಸೂಸೈಡ್ ಪ್ಯಾಡ’ಗೆ) ಕಾನೂನುಬದ್ಧ ಮಾನ್ಯತೆ ನೀಡಿದೆ. ಈ ಯಂತ್ರದ ಸಹಾಯದಿಂದ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ವೇದನೆ ಇಲ್ಲದೆ ಶಾಂತವಾಗಿ ಮೃತ್ಯು ಸ್ವೀಕಾರ ಮಾಡಬಹುದು. ಈ ಯಂತ್ರ ನಿರ್ಮಿಸಿದ ಕಂಪನಿಯು, ಯಂತ್ರದಲ್ಲಿ ಆಮ್ಲಜನಕದ ಪ್ರಮಾಣವನ್ನು ಅತ್ಯಂತ ಕಡಿಮೆ ಮಾಡಲಾಗುತ್ತದೆ, ಇದರಿಂದ ಒಂದು ನಿಮಿಷದ ಒಳಗೆ ವ್ಯಕ್ತಿಯ ಮೃತ್ಯು ಆಗುತ್ತದೆ. ಶವಪೆಟ್ಟಿಗೆ ಆಕಾರದ ಯಂತ್ರದ ಹೆಸರು ‘ಸರಕೊ’ ಎಂದಾಗಿದೆ. ಈ ಯಂತ್ರದ ಒಳಗೆ ಇರುವ ವ್ಯಕ್ತಿ ಕಣ್ಣು ಮಿಟುಕಿಸಿ ಯಂತ್ರವನ್ನು ಆರಂಭಿಸಬಹುದು. ಯಾವ ರೋಗಿಗೆ ಕಾಯಿಲೆಯಿಂದ ಯಾವುದೇ ಚಟುವಟಿಕೆಗಳನ್ನು ಮಾಡಲಾಗುವುದಿಲ್ಲವೋ, ಅವರಿಗಾಗಿ ಈ ಯಂತ್ರ ಉಪಯುಕ್ತವಾಗಿದೆ ಎಂದು ಹೇಳಲಾಗಿದೆ. ಅನೇಕ ಜನರು ‘ಈ ಯಂತ್ರ ಆತ್ಮಹತ್ಯೆ ಮಾಡಲು ಉತ್ತೇಜಿಸುತ್ತಿದೆ’, ಎಂದು ಹೇಳುತ್ತಾ ಯಂತ್ರಕ್ಕೆ ವಿರೋಧಿಸಿದ್ದಾರೆ.