‘ಸೂರ್ಯವಂಶಿ’ಯ ನಿಮಿತ್ತ !

ಸಂಪಾದಕೀಯ

ಚಲನಚಿತ್ರಗಳು ಸಮಾಜದ ಮನಸ್ಸಿನ ಮೇಲೆ ಆಳವಾಗಿ ಮತ್ತು ತಕ್ಷಣ ಪರಿಣಾಮ ಬೀರುವ ಮಾಧ್ಯಮವಾಗಿವೆ. ಜನರು ಚಲನಚಿತ್ರಗಳಲ್ಲಿ ತೋರಿಸಲಾಗುವ ಜೀವನವನ್ನೇ ನಿಜವಾದ ಜೀವನವೆಂದು ತಿಳಿದು ಬದುಕುತ್ತಾರೆ. ಹಾಗಾದರೆ ಚಲನಚಿತ್ರಗಳಲ್ಲಿ ಏನು ಮಂಡಿಸಬೇಕು ? ಎಂಬುದು ಚಲನಚಿತ್ರ ನಿರ್ದೇಶಕರ ದೊಡ್ಡ ಜವಾಬ್ದಾರಿಯಾಗಿರುತ್ತದೆ. ಕಳೆದ ಕೆಲವು ದಶಕಗಳಲ್ಲಿ ಅನೇಕ ನಿರ್ದೇಶಕರು ಈ ಸಾಮಾಜಿಕ ಪ್ರಜ್ಞೆಯನ್ನು ಉಳಿಸಿಕೊಂಡಿಲ್ಲ, ವಿಶೇಷವಾಗಿ ಹಿಂದೂಗಳನ್ನು ನಕಾರಾತ್ಮಕವಾಗಿ ಬಿಂಬಿಸಿರುವ ಅನುಭವವಿದೆ. ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿ ಬಹುತೇಕ ಚಲನಚಿತ್ರಗಳಲ್ಲಿ ಹಿಂದೂ ಪಂಡಿತರನ್ನು ಉದ್ದೇಶಪೂರ್ವಕವಾಗಿ ಅಪಹಾಸ್ಯ ಮಾಡಲಾಗುತ್ತದೆ. ಈ ಸಮಾಜಪ್ರವಾಹದ ವಿರುದ್ಧ ಹೋಗಿ ಒಬ್ಬ ಚಲನಚಿತ್ರ ನಿರ್ದೇಶಕರು ತಮ್ಮ ಚಲನಚಿತ್ರದಲ್ಲಿ ಖಳನಾಯಕನನ್ನು ಮುಸಲ್ಮಾನ ಎಂದು ಬಿಂಬಿಸಿದರೆ ಅವನ ಮೇಲೆ ಜಿಹಾದಿಪ್ರೇಮಿಗಳು ತಿರುಗಿ ಬೀಳುತ್ತಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಸೂರ್ಯವಂಶಿ’ ಈ ಚಲನಚಿತ್ರದ ಉದಾಹರಣೆ ಈ ವರ್ಗಕ್ಕೆ ಸೇರುತ್ತದೆ. ಈ ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಬರುವ ಭಯೋತ್ಪಾದಕನ ಹೆಸರು ಮುಸಲ್ಮಾನನಾಗಿರುವ ಬಗ್ಗೆ ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಇವರು ಆಕ್ಷೇಪಿಸಿದ್ದಾರೆ. ಇದಕ್ಕೆ ‘ಸೂರ್ಯವಂಶಿ’ ಈ ಚಲನಚಿತ್ರದ ನಿರ್ದೇಶಕ ರೋಹಿತ ಶೆಟ್ಟಿ ಇವರು, ‘ಹಿಂದೂ ಖಳನಾಯಕನನ್ನು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ?’, ಎಂದು ಖಂಡತುಂಡವಾಗಿ ಉತ್ತರಿಸಿದರು. ಸತ್ಯವನ್ನು ತೋರಿಸಲು ಆಕ್ಷೇಪವೇಕೆ ? ಎಂಬುದು ಇಲ್ಲಿ ಪ್ರಮುಖ ಅಂಶವಾಗಿದೆ.

ಚಲನಚಿತ್ರಗಳ ಮೂಲಕ ಹಬ್ಬುವ ‘ಜಿಹಾದ್’!

ದೇಶದಲ್ಲಿ ಭಯೋತ್ಪಾದನೆಯ ವಿರುದ್ಧ ಜನಾಭಿಪ್ರಾಯವು ಪ್ರಕ್ಷುಬ್ಧವಾಗಿದೆ. ಆದರು ಸಹ ಭಾರತದಲ್ಲಿ ಭಯೋತ್ಪಾದನೆಯು ಬೇರುಸಹಿತ ನಾಶವಾಗಿಲ್ಲ. ಕೆಲವು ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ‘ಭಾರತದಲ್ಲಿ ಅಲ್ಪಸಂಖ್ಯಾತರ, ವಿಶೇಷವಾಗಿ ಮುಸಲ್ಮಾನರ ವಿರುದ್ಧ ನಡೆಯುವ ಹಿಂಸೆಯನ್ನು ತಡೆಗಟ್ಟಬೇಕು. ಮುಸಲ್ಮಾನರ ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕು’, ಎಂಬ ಪುಕ್ಕಟೆ ಸಲಹೆ ನೀಡಿತ್ತು. ತಮ್ಮ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ಅತ್ಯಾಚಾರವಾಗುತ್ತಿರುವಾಗ ಮತ್ತು ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸುತ್ತಿರುವಾಗ ಇಂತಹ ಹೇಳಿಕೆಯನ್ನು ನೀಡುವ ಹಕ್ಕನ್ನು ಪಾಕ್‍ಗೆ ಯಾರು ನೀಡಿದರು ? ಜಿಹಾದಿ ಭಯೋತ್ಪಾದನೆಯ ಬಗ್ಗೆ ಇರುವ ವಸ್ತುಸ್ಥಿತಿಯನ್ನು ನಿರಾಕರಿಸುವುದು ಇದೂ ಒಂದು ರೀತಿಯ ವೈಚಾರಿಕ ಭಯೋತ್ಪಾದನೆಯೇ ಆಗಿದೆ. ದುರದೃಷ್ಟವಶಾತ್ ಭಾರತದಲ್ಲಿ ಇದನ್ನು ಪೋಷಿಸುವವರ ಸಂಖ್ಯೆ ಹೆಚ್ಚಿದೆ. ಕಳೆದ ಅನೇಕ ದಶಕಗಳಿಂದ ಜನಮಾನಸದಲ್ಲಿ ಭಯೋತ್ಪಾದನೆಯ ಬಗ್ಗೆ ಆಕ್ರೋಶವಿದ್ದರೂ ಭಯೋತ್ಪಾದನೆ ನಿರ್ಮೂಲನೆಯಾಗದಿರುವುದಕ್ಕೆ ಇದೇ ಕಾರಣವಾಗಿದೆ. ಕಣ್ಣಿಗೆ ಕಾಣುವ ಭಯೋತ್ಪಾದಕ ದಾಳಿಗಳ ಜೊತೆಗೆ ಜಿಹಾದಿ ಮತಾಂಧರು ನಾನಾ ಕಡೆಗಳಲ್ಲಿ ಬೇರೂರಿ ವ್ಯವಸ್ಥಿತವಾಗಿ ಸಮಾಜದ ತಲೆಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ನಿರ್ಮಿಸಲಾದ ಚಲನಚಿತ್ರಗಳಲ್ಲಿ ನಿರ್ದಿಷ್ಟವಾಗಿ ಇದನ್ನೇ ಮಾಡಲಾಗುತ್ತಿದೆ. ಜಿಹಾದಿ ಭಯೋತ್ಪಾದನೆಯನ್ನು ಪೋಷಿಸುವ ಪಂಥವು ಇಡೀ ಮನುಕುಲಕ್ಕೆ ಕಂಟಕವಾಗಿದೆ. ಚಲನಚಿತ್ರಗಳಲ್ಲಿ ಮಾತ್ರ ಈ ಪಂಥದ ಬಗ್ಗೆ ಆಭಾಸ ಮೂಡಿಸುವ ಪ್ರಯತ್ನ ದಶಕಗಳಿಂದ ನಡೆಯುತ್ತಲೇ ಇದೆ. ಅಮಾಯಕ ನಾಗರಿಕರನ್ನು ಬರ್ಬರವಾಗಿ ಕೊಲ್ಲುವವರನ್ನು ‘ಮುಗ್ಧರು’ (ಅಮಾಯಕರು) ಎಂದು ಬಿಂಬಿಸುವ ಹೇಯ ಪದ್ಧತಿಯನ್ನು ಚಲನಚಿತ್ರಗಳ ಮೂಲಕ ರೂಢಿಸಿಕೊಳ್ಳುತ್ತಿದ್ದಾರೆ. ಇಂತಹ ಚಲನಚಿತ್ರಗಳಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ದೊರಕಿ ಎಷ್ಟೋ ಹಿಂದೂ ಯುವತಿಯರ ಮತ್ತು ಮಹಿಳೆಯರ ಜೀವನವು ಧ್ವಂಸವಾಗಿದೆ. ಸಮಾಜದ ದಾರಿ ತಪ್ಪಿಸುವ ಮೂಲಕ ಜಿಹಾದಿ ಭಯೋತ್ಪಾದಕರು ರಕ್ಷಣೆಯನ್ನು ಪಡೆಯುತ್ತಾರೆ. ಈ ಭಯಾನಕ ವಾಸ್ತವದ ಬಗ್ಗೆ ಯಾರೂ ಮಾತನಾಡುವುದಿಲ್ಲ, ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು. ತದ್ವಿರುದ್ಧ ವಸ್ತುಸ್ಥಿತಿಯನ್ನು ಸಾರುವ ಚಲನಚಿತ್ರಗಳಿಗೆ ವಿರೋಧವಾಗುತ್ತದೆ. ಪಾಕಿಸ್ತಾನವು ಭಯೋತ್ಪಾದಕರ ಕಾರಖಾನೆಯಾಗಿರುವುದರಿಂದ ಪಾಕಿಸ್ತಾನದ ನಾಯಕರು ಭಾರತದ ವಿರುದ್ಧ ಮತ್ತು ಭಯೋತ್ಪಾದನಾವಿರೋಧಿ ಹೇಳಿಕೆಗಳನ್ನು ನೀಡುತ್ತಾರೆ; ಆದರೆ ಭಾರತದಿಂದ ಅವರ ಹೇಳಿಕೆಗಳ ಬಗ್ಗೆ ಬಹಿರಂಗವಾಗಿ ಪ್ರತಿವಾದವನ್ನು ಮಾಡಲಾಗುವುದಿಲ್ಲ, ಇದು ನಿಗೂಢ ಮತ್ತು ಚಿಂತಾಜನಕವಾಗಿದೆ. ಈ ಹೇಡಿತನದ ಮಾನಸಿಕತೆಯಿಂದಲೇ ಭಾರತದಲ್ಲಿ `ಚಲನಚಿತ್ರ ಜಿಹಾದ್’ ಪಸರಿಸಿದೆ.

ಚಲನಚಿತ್ರಗಳಲ್ಲಿ ವಸ್ತುಸ್ಥಿತಿಯನ್ನೇ ಮಂಡಿಸಬೇಕು !

ಈ ಹಿಂದೆಯೂ ಭಾರತದಲ್ಲಿ ಭಯೋತ್ಪಾದನೆಯ ಮೇಲೆ ಅನೇಕ ಚಲನಚಿತ್ರಗಳನ್ನು ತಯಾರಿಸಲಾಗಿದೆ; ಆದರೆ ಅನೇಕ ಚಲನಚಿತ್ರಗಳಲ್ಲಿ ‘ಭಯೋತ್ಪಾದನೆಯು ಭಯೋತ್ಪಾದನೆಯಾಗಿರುತ್ತದೆ, ಅದಕ್ಕೆ ಯಾವುದೇ ಧರ್ಮವಿರುವುದಿಲ್ಲ’, ಎಂಬ ಸಮರ್ಥನೆ ಮಾಡಲಾಗುತ್ತದೆ. ನಿಜವಾಗಿಯೂ ಭಯೋತ್ಪಾದನೆ ವಿಚಾರಸರಣಿಯ ಉಗಮಸ್ಥಾನ ಯಾವುದು ? ಎಂಬುದು ಜಗತ್ತಿಗೆ ತಿಳಿದಿದೆ. ಹೀಗಿರುವಾಗಲೂ ಜಿಹಾದಿ ಮತಾಂಧರ ವೃತ್ತಿಯನ್ನು ಹೇಳುವಾಗ ಅವರ (ಜಿಹಾದಿಗಳ) ತಥಾಕಥಿತ ಹಿಂದುಳಿಯುವಿಕೆ ಮತ್ತು ಅನ್ಯಾಯಪೀಡಿತ ಪರಿಸ್ಥಿತಿಯನ್ನು ಉಲ್ಲೇಖಿಸಿ  ಅಂತಹವರನ್ನು ಸಕಾರಾತ್ಮಕವಾಗಿ ಪ್ರಸ್ತುತ ಪಡಿಸಲಾಗುತ್ತದೆ. ಇದರಿಂದ ಕೆಲವೇ ಕೆಲವರ ಮನಸ್ಸಿನಲ್ಲಿ ಭಯೋತ್ಪಾದನೆ ಬಗ್ಗೆ ಆಕ್ರೋಶವು ಉತ್ಪನ್ನವಾಗುತ್ತದೆ; ಆದರೆ ಭಯೋತ್ಪಾದನೆಯ ಮೂಲ ಕಾರಣವನ್ನು ಬದಿಗಿಟ್ಟು ಈ ಸಮಸ್ಯೆಯನ್ನು ಬೇರೆ ಆಯಾಮದಲ್ಲಿ ಮಂಡಿಸುವುದರಿಂದ ಜನರ ಮನಸ್ಸಿನಲ್ಲಿ ಆಕ್ರೋಶವು ಅಪ್ರಸ್ತುತವೆನಿಸುತ್ತದೆ. ಇಂತಹ ನಾಗರಿಕರು ವೈಚಾರಿಕ ಗೊಂದಲದಲ್ಲಿ ಜೀವಿಸುತ್ತಾರೆ. ಈ ವಾತಾವರಣವು ಭಯೋತ್ಪಾದನೆಯನ್ನು ಹೆಚ್ಚಿಸಲು ಪೋಷಕ ಮತ್ತು ಭಯೋತ್ಪಾದನೆಯ ವಿರುದ್ಧ ಜಾಗೃತಿ ನಿರ್ಮಾಣಮಾಡಲು ಬಾಧಕವಾಗುತ್ತದೆ. ಹಲವಾರು ವಿದ್ಯಾವಂತ ಮತಾಂಧರು ಜಿಹಾದಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ‘ಅನಕ್ಷರತೆ ಮತ್ತು ಮೂಲಸೌಕರ್ಯಗಳ ಕೊರತೆಯು ಭಯೋತ್ಪಾದಕರನ್ನು ಸೃಷ್ಟಿಸುತ್ತದೆ’, ಎಂಬ ಹೇಳಿಕೆಯ ನಿರರ್ಥಕತೆಯನ್ನು ಬಹಿರಂಗಪಡಿಸುತ್ತದೆ. ಚಲನಚಿತ್ರಗಳು ಸೃಷ್ಟಿಸಿದ ಮಾಯಾಲೋಕದಿಂದಾಗಿ ಸತ್ಯಸ್ಥಿತಿಯು ಜನರವರೆಗೆ ತಲುಪುವುದಿಲ್ಲ. ಇದಕ್ಕೆ ಮಾಧ್ಯಮಗಳು ಪೂರಕವಾಗಿವೆ. ಚಲನಚಿತ್ರಗಳ ಕಥೆಯನ್ನು ವರದಿ ಮಾಡುವಾಗ ಸರ್ಮಧರ್ಮಸಮಭಾವನ್ನು ಹಾಡಿಹೊಗಳಲಾಗುತ್ತದೆ. ಭಾರತೀಯರು, ವಿಶೇಷವಾಗಿ ಭಾರತದಲ್ಲಿನ ಹಿಂದೂಗಳು ಸತ್ಯ ಪರಿಸ್ಥಿತಿಯ ಬಗ್ಗೆ ಅಜ್ಞಾನಿಯಾಗಿದ್ದಾರೆ; ಏಕೆಂದರೆ ಜಿಹಾದಿ ಭಯೋತ್ಪಾದಕರ ಸತ್ಯ ಸ್ವರೂಪವನ್ನು ಹಿಂದೂಗಳೆದುರು ಬರಲು ಬೀಡುವುದೇ ಇಲ್ಲ. ಆದುದರಿಂದ ಹಿಂದೂ ಜನರ ಮನಸ್ಸಿನಲ್ಲಿ ಕೇವಲ ಭಯೋತ್ಪಾದನೆಯ ವಿರುದ್ಧ ಜಾಗೃತಿ ಮಾಡುವುದು ಸಾಕಾಗದೇ, ಭಯೋತ್ಪಾದನೆ ಎಂದರೆ ‘ಜಿಹಾದಿ ಭಯೋತ್ಪಾದನೆ’ಯಾಗಿದ್ದು ಅದನ್ನು ಪೋಷಿಸುವವರು ಯಾರು ? ಎಂಬ ಸತ್ಯವನ್ನು ಬೆಳಕಿಗೆ ತರುವ ಧೈರ್ಯಬೇಕು, ಅದು ಚಲನಚಿತ್ರಗಳಲ್ಲಾಗಲಿ ಅಥವಾ ಪ್ರಸಾರಮಾಧ್ಯಮಗಳಲ್ಲಾಗಲಿ !

ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

ಸಮಾಜವನ್ನು ರೂಪಿಸುವಲ್ಲಿ ಸರಕಾರದ ಪಾತ್ರವು ಮಹತ್ತರವಾಗಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಓಲೈಕೆಯ ನೀತಿಯನ್ನು ಸ್ವೀಕರಿಸಿದುದರಿಂದ ಸಮಾಜದಲ್ಲಿ ಎಲ್ಲ ರೀತಿಯ ಜಿಹಾದಿ ಚಟುವಟಿಕೆಗಳನ್ನು ಹರಡಿತು. ಅದನ್ನು ಕಿತ್ತೊಗೆಯಲು ಇಂದಿನ ರಾಷ್ಟ್ರಪ್ರೇಮಿ ಸರಕಾರವು ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುವುದು. ಭಯೋತ್ಪಾದಕರ ವಿರುದ್ಧ ಸೇನಾಕ್ರಮವನ್ನು ಕೈಗೊಳ್ಳಬೇಕು, ಅದರೊಂದಿಗೆ ಜಿಹಾದಿ ಮತಾಂಧರ ಬಗ್ಗೆ ವಸ್ತುಸ್ಥಿತಿಯನ್ನು ಹೇಳುವ ಚಲನಚಿತ್ರಗಳನ್ನು ಸೃಷ್ಟಿಸಲು ಸರಕಾರವು ಪ್ರೋತ್ಸಾಹ ನೀಡಬೇಕು, ಇದುವೇ `ಸೂರ್ಯವಂಶಿ’ ಚಲನಚಿತ್ರದ ನಿಮಿತ್ತ ರಾಷ್ಟ್ರಪ್ರೇಮಿ ನಾಗರಿಕರ ಅಭಿಪ್ರಾಯವಾಗಿದೆ !