‘ಯಾವುದಾದರೊಂದು ರೋಗ ಗುಣಮುಖವಾಗಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಪ್ರಮುಖ ದೇವತೆಗಳಲ್ಲಿ ಯಾವ ದೇವತೆಯ ತತ್ತ್ವ ಎಷ್ಟು ಪ್ರಮಾಣದಲ್ಲಿ ಆವಶ್ಯಕವಿದೆ ? ಎನ್ನುವುದನ್ನು ಧ್ಯಾನದಲ್ಲಿ ಕಂಡುಹಿಡಿದು, ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ಸಿದ್ಧಪಡಿಸಿದೆನು. ‘ಕೊರೊನಾ ವಿಷಾಣುವಿನ ತೊಂದರೆಯ ನಿವಾರಣೆಗೆ ನಾನು ಮೊದಲು ಇಂತಹ ಒಂದು ಜಪವನ್ನು ಕಂಡು ಹಿಡಿದಿದ್ದೆನು. ಅದು ಪರಿಣಾಮಕಾರಿಯಾಗಿರು ವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗೂ ಜಪಗಳನ್ನು ಕಂಡು ಹಿಡಿಯಲು ಸ್ಫೂರ್ತಿ ಸಿಕ್ಕಿತು. ಇದರಲ್ಲಿ ಆವಶ್ಯಕವಿರುವ ಬೇರೆ ಬೇರೆ ದೇವತೆಗಳ ಜಪಗಳನ್ನು ಒಟ್ಟುಗೂಡಿಸಿ ತಯಾರಿಸಲಾಗಿದೆ. ನಾನು ಕಂಡು ಹಿಡಿದ ಈ ಜಪಗಳನ್ನು ಸಾಧಕರಿಗಾಗಿ ಅವರ ರೋಗಗಳಿಗನುಸಾರ ಕೊಡುತ್ತಿದ್ದೇನೆ. ಸಾಧಕರು ಈ ಜಪಗಳಿಂದ ತಮಗೆ ಲಾಭವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರಿಂದ `ಈ ಜಪಗಳಿಂದ ಲಾಭವಾಗುತ್ತದೆ ಎಂಬುದು ನನ್ನ ಗಮನಕ್ಕೆ ಬಂದಿತು. ಕೆಲವು ತಿಂಗಳುಗಳ ಹಿಂದೆ ಕೆಲವು ರೋಗಗಳು, ಅವುಗಳ ಮೇಲಿನ ಜಪಗಳು ಮತ್ತು ಸಾಧಕರು ಆ ಜಪಗಳನ್ನು ಮಾಡಿದ ನಂತರ ಅವರಿಗೆ ಬಂದ ಅನುಭೂತಿಗಳನ್ನು ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇಂದು ಇನ್ನೂ ಕೆಲವು ರೋಗಗಳು ಮತ್ತು ಅವುಗಳ ಮೇಲಿನ ಜಪಗಳನ್ನು ಇಲ್ಲಿ ನೀಡಲಾಗಿದೆ. ಈ ನಾಮಜಪಗಳನ್ನು ಕಳೆದ ೩ ತಿಂಗಳುಗಳಲ್ಲಿ ಕೆಲವು ಸಾಧಕರಿಗೆ ನೀಡಲಾಗಿದೆ. ಸಾಧಕರು ಅವರಿಗೆ ಬಂದಂತಹ ಅನುಭೂತಿಗಳನ್ನು ಗ್ರಂಥ ನಿರ್ಮಾಣಕ್ಕಾಗಿ ಆದಷ್ಟು ಬೇಗನೆ ಬರೆದು, ಈ ಲೇಖನದಲ್ಲಿ ನೀಡಿರುವ ಇ-ಮೇಲ್ ವಿಳಾಸಕ್ಕೆ ಅಥವಾ ಅಂಚೆ ವಿಳಾಸದ ಮೂಲಕ ಕಳುಹಿಸಬೇಕು.
ಟಿಪ್ಪಣಿ : ಯಾವುದಾದರೊಂದು ರೋಗಕ್ಕೆ ನೀಡಿದ ನಾಮಜಪವನ್ನು ಈ ಕ್ರಮದಿಂದ ಮಾಡಿದರೆ ೧ ನಾಮಜಪವಾಯಿತು. ಹೀಗೆ ನಾಮಜಪವನ್ನು ನಿಯೋಜಿಸಿದ ಅವಧಿಯವರೆಗೆ ಪುನಃ ಪುನಃ ಹೇಳುವುದು
೧೩ ನೇ ಪುಟದಲ್ಲಿ ನೀಡಲಾದ ಕೋಷ್ಟಕದಲ್ಲಿ ನೀಡಲಾದ ರೋಗಗಳಲ್ಲಿ ಕೆಲವು ರೋಗಗಳ ವಿಷಯದಲ್ಲಿ ಹೇಳಿದ ಜಪಗಳ ಕುರಿತು ಸಂತರು ಮತ್ತು ಸಾಧಕರು ಇವರಿಗೆ ಬಂದಿರುವ ವಿಶೇಷ ಅನುಭವಗಳು
೧ ಅ. ಮೂತ್ರನಾಳದ ಸೋಂಕು : ಓರ್ವ ಸಂತರ ‘ಪ್ರೊಸ್ಟೇಟ’ ಗ್ರಂಥಿಗೆ ಬಾವು ಬರುತ್ತಿತ್ತು. ಆದ್ದರಿಂದ ಮೂತ್ರನಾಳದಲ್ಲಿ ಅಡಚಣೆಯನ್ನುಂಟು ಮಾಡಿತು ಮತ್ತು ಅಪೂರ್ಣ ಮೂತ್ರ ವಿಸರ್ಜನೆಗೆ ಕಾರಣವಾಯಿತು. ಇದು ಸೋಂಕು ಮತ್ತು ಆಗಾಗ್ಗೆ ಜ್ವರಕ್ಕೆ ಕಾರಣವಾಯಿತು. ಔಷಧಿ ತೆಗೆದುಕೊಂಡರೂ ಪರಿಣಾಮ ಬೀರಲಿಲ್ಲ. ಅವರು ೨ ತಿಂಗಳು ಪ್ರತಿದಿನ ೧ ಗಂಟೆ ಈ ರೋಗಕ್ಕಾಗಿ ನಾನು ಹೇಳಿದ ಜಪ ಮಾಡಿದ ನಂತರ ಅವರ ರೋಗವು ಬಹಳಷ್ಟು ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂತು ಈಗಂತೂ ಜಪ ಮಾಡುವುದನ್ನು ನಿಲ್ಲಿಸಿದಾಗ ಅವರಿಗೆ ಮತ್ತೆ ತೊಂದರೆ ಶುರುವಾಗುತ್ತದೆ; ಹಾಗಾಗಿ ಅರ್ಧ ಗಂಟೆಯಾದರೂ ಜಪ ಮಾಡುತ್ತಲೇ ಇದ್ದಾರೆ.
೧ ಆ. ದೇಹದಲ್ಲಿ ಎಲ್ಲೋ ಒಂದೆಡೆ ಉರಿತ : ಓರ್ವ ಸಾಧಕಿಗೆ (೭೯ ವರ್ಷ) ಮೊದಲು ಪೈಲ್ಸ್ ಶಸ್ತ್ರಚಿಕಿತ್ಸೆಯಾಗಿತ್ತು. ಅಕ್ಟೋಬರದಲ್ಲಿ ತಾಪಮಾನ ಹೆಚ್ಚಾದಂತೆ ದೇಹದ ಉಷ್ಣತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಆ ತಿಂಗಳಲ್ಲಿ ಮಲವಿಸರ್ಜನೆಯ ನಂತರ ಸಾಧಕಿಗೆ ಗುದದ್ವಾರದಲ್ಲಿ ಉರಿ ಉಂಟಾಗುತ್ತದೆ. ಉರಿಯನ್ನು ನಿಲ್ಲಿಸಲು ನಾನು ಅವರಿಗೆ ಜಪ ಮಾಡಲು ಹೇಳಿದೆ. ಈಗ ಜಪಿಸಿದ ನಂತರ ಗುದದ್ವಾರದಲ್ಲಿ ಉರಿಯು ೧೫ ನಿಮಿಷದಲ್ಲಿ ನಿಲ್ಲುತ್ತದೆ. ಹಿಂದೆ ಉರಿಯನ್ನು ನಿಲ್ಲಿಸಲು ೪೫ ನಿಮಿಷದಿಂದ ಒಂದೂವರೆ ಗಂಟೆ ಬೇಕಾಗುತ್ತಿತ್ತು.
೧ ಇ. ಜೀರ್ಣಶಕ್ತಿ ಮತ್ತು ಕರುಳಿನ ಶಕ್ತಿ ಕ್ಷೀಣವಾಗುವುದು : ಓರ್ವ ಸಂತರಿಗೆ ಜೀರ್ಣಕ್ರಿಯೆಯು ವ್ಯವಸ್ಥಿತವಾಗಿ ಆಗದೇ ಹೊಟ್ಟೆಯು ಭಾರವಾಗುತ್ತಿತ್ತು ಮತ್ತು ಮಲವಿಸರ್ಜನೆಯಾಗುತ್ತಿರಲಿಲ್ಲ. ಹಾಗಾಗಿ ಅವರು ಸಣ್ಣಗಾಗಿದ್ದರು. ಅವರು ನಿತ್ಯ ೧ ಗಂಟೆ ಜಪ ಮಾಡಲು ಆರಂಭಿಸಿದಾಗ ೧ ತಿಂಗಳಲ್ಲೇ ಲಾಭವಾಯಿತು. ಈಗ ಅವರಿಗೆ ಹೊಟ್ಟೆನೋವು ಇಲ್ಲ ಎಂದು ಜಪ ಮಾಡುವುದನ್ನು ನಿಲ್ಲಿಸಿದ್ದಾರೆ.
೧ ಈ. ಕುರು (ವ್ರಣ) ಆಗುವುದು : ಓರ್ವ ಸಾಧಕಿಗೆ ಎಡ ಕಂಕುಳಿಗೆ ಕುರು ಆಗಿತ್ತು. ಅವರು ನೋವಿನಿಂದ ತುಂಬಾ ಬಳಲುತ್ತಿದ್ದರು ಮತ್ತು ನೋವು ನಿವಾರಕವನ್ನು ತೆಗೆದುಕೊಂಡರೂ ನೋವು ನಿಲ್ಲಿಸಲು ಸಾಧ್ಯವಾಗಲಿಲ್ಲ. ನಾನು ಹೇಳಿದ ಜಪ ಮಾಡಿದ ೨ ಗಂಟೆಗಳಲ್ಲಿ ಅವರ ಕಂಕುಳಲ್ಲಿನ ನೋವು ನಿಂತಿತು ಮತ್ತು ಅವರ ಆ ಕೈ ಹಗುರವಾಗಲು ಪ್ರಾರಂಭವಾಯಿತು. ಅದರನಂತರ ಕುರು ಒಡೆದು ಕೀವು ಹೊರ ಹಾಕುವಾಗಲೂ ವಿಶೇಷ ನೋವು ಆಗಲಿಲ್ಲ. ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು.
೧ ಉ. ಡೆಂಗ್ಯೂ (ಪ್ಲೇಟ್ಲೆಟ್ಸ್ ಕಡಿಮೆ ಆಗುವುದು) : ‘ಡೆಂಗ್ಯೂ’ದಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ಸಗಳು ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಇರುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ಅವು ೧.೫ ಲಕ್ಷದಿಂದ ೪ ಲಕ್ಷದ ವರೆಗೆ ಇರುತ್ತವೆ. ಓರ್ವ ಸಾಧಕನಿಗೆ ಡೆಂಗ್ಯೂ’ ಬಂದಾಗ ಅವನ ಪ್ಲೇಟ್ಲೆಟ್ಸಗಳ ಸಂಖ್ಯೆ ೬೦,೦೦೦ ಆಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸಂಜೆ ೬ ಗಂಟೆಗೆ ಅವರು ಈ ಬಗ್ಗೆ ಮಾಹಿತಿ ನೀಡಿದರು. ನಾನು ಅವರಿಗೆ ಪ್ಲೇಟ್ಲೆಟ್ಸಗಳನ್ನು ಹೆಚ್ಚಿಸಲು ಜಪ ಹೇಳಿದೆನು. ಅದನ್ನು ಹೆಚ್ಚು ಹೆಚ್ಚು ಮಾಡಲು ಹೇಳಿದೆನು. ಮರುದಿನ ಮಧ್ಯಾಹ್ನ ೧ ಗಂಟೆಗೆ ಮತ್ತೆ ಅವರ ರಕ್ತ ಪರೀಕ್ಷೆ ನಡೆಸಿದಾಗ ಅವರ ರಕ್ತದಲ್ಲಿ ಪ್ಲೇಟ್ಲೆಟ್ಸಗಳ ಸಂಖ್ಯೆ ೧ ಲಕ್ಷ ೨೦ ಸಾವಿರ ಇತ್ತು. ಜಪವು ಕೇವಲ ಅರ್ಧ ದಿನದಲ್ಲಿ ಪ್ಲೇಟ್ಲೆಟ್ಸಗಳಲ್ಲಿ ಅದ್ಭುತ ಹೆಚ್ಚಳವನ್ನುಂಟು ಮಾಡಿತು. ಓರ್ವ ಸಾಧಕಿ ಮತ್ತು ಅವಳ ಸಹೋದರನಿಗೆ ಇದೇ ರೀತಿಯ ಅನುಭವವಾಗಿತ್ತು.
೧ ಊ. ಮೆದುಳಿನಲ್ಲಿ ಗಂಟಿನಿಂದಾಗಿ ಗೊಂದಲ : ಓರ್ವ ಸಾಧಕಿಯ ತಂದೆ (೭೪ ವರ್ಷ) ಯವರಿಗೆ ಮೆದುಳಿನಲ್ಲಿ ಗಂಟು ಆಗಿದ್ದರಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ ನಾನು ರೋಗಕ್ಕಾಗಿ ಜಪ ಮಾಡಲು ಹೇಳಿದೆ. ಅವರಿಗಾಗಿ ಸಾಧಕಿಯ ತಾಯಿ ಪ್ರತಿದಿನ ೨ ಗಂಟೆ ಜಪ ಮಾಡುತ್ತಿದ್ದರು. ಈ ಜಪದಿಂದ ತುಂಬಾ ಲಾಭವಾಯಿತು. ಅವರ ತಂದೆ ಐದನೇ ದಿನದಲ್ಲಿ ಗುಣಮುಖರಾಗತೊಡಗಿದರು. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ನಂತರ ಮೆದುಳನ್ನು ‘ಸ್ಕ್ಯಾನಿಂಗ್’ ಮಾಡಿದ ನಂತರ ಮೆದುಳಿನ ಗಂಟು ಶೇ. ೩೦-೪೦ ರಷ್ಟು ಕರಗಿರುವುದು ಗಮನಕ್ಕೆ ಬಂತು. ಮತ್ತೆ ೮ ದಿನಗ ೧/೪ ನಂತರ ಗಂಟು ಶೇ. ೬೦ ರಷ್ಟು ಕರಗಿತು. ಇನ್ನು೧ ತಿಂಗಳ ನಂತರ ಗಂಟು ಕೇವಲ ಶೇ. ೧೦ ರಷ್ಟಿತ್ತು. ಸಾಧಕನ ತಂದೆ ಈ ವಯಸ್ಸಿನಲ್ಲಿಯೂ ತುಂಬಾ ಚೇತರಿಸಿಕೊಂಡರು. ಅಲ್ಲಿನ ವೈದ್ಯರಿಗೂ ಆಶ್ಚರ್ಯವಾಯಿತು.
ಜಪಗಳ ಮಹತ್ವ
ಆಪತ್ಕಾಲದಲ್ಲಿ ಔಷಧಗಳು ಮತ್ತು ವೈದ್ಯರ ಕೊರತೆ ಉಂಟಾದಾಗ ಈ ಜಪಗಳು ಹೆಚ್ಚು ಉಪಯೋಗಕ್ಕೆ ಬರುತ್ತವೆ.
ಕೃತಜ್ಞತೆ
ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನನಗೆ ಈ ಜಪಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು ಮತ್ತು ಅ ಜಪದಿಂದಾಗುವ ಉತ್ತಮ ಪರಿಣಾಮವು ನನ್ನ ಗಮನಕ್ಕೆ ಬಂತು. ಇದಕ್ಕಾಗಿ ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೮.೧೦.೨೦೨೧)
ರೋಗಗಳಿಗೆ ಸಂಬಂಧಿಸಿದ ನಾಮಜಪ ಮಾಡಿ ಆ ಸಂದರ್ಭದಲ್ಲಿನ ಅನುಭೂತಿಗಳನ್ನು ಕಳುಹಿಸಿರಿ !ಸಾಧಕರಿಗೆ ಇಲ್ಲಿ ನೀಡಿರುವ ರೋಗಗಳಲ್ಲಿ ಯಾವುದಾದರೊಂದು ರೋಗವಿದ್ದರೆ ಅದನ್ನು ಹೋಗಲಾಡಿಸಲು ‘ಇಲ್ಲಿ ನೀಡಿರುವ ನಾಮಜಪವನ್ನು ಮಾಡಿ ನೋಡಬೇಕು, ಎಂದು ಅನಿಸಿದರೆ, ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿದಿನ ೧ ಗಂಟೆ ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳ ಸಂದರ್ಭದಲ್ಲಿ ಬರುವ ಅನುಭೂತಿಗಳನ್ನು ಸಾಧಕರು Sankalak.goa@gmail.com ಇ-ಮೇಲ್ (ವಿ-ಅಂಚೆ) ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಸಾಧಕರ ಈ ಅನುಭೂತಿಗಳನ್ನು ಗ್ರಂಥದಲ್ಲಿ ಸೇರಿಸುವುದರ ದೃಷ್ಟಿಯಿಂದ ಹಾಗೂ ನಾಮಜಪದ ಸಾಮಥ್ರ್ಯ ಸ್ಪಷ್ಟವಾಗಲು ಉಪಯುಕ್ತವಾಗುವವು. ಅಂಚೆ ವಿಳಾಸ : ಸನಾತನ ಆಶ್ರಮ, 24/B ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ, ಪಿನ್ ಕೋಡ : 403401. |