|
ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರವು ಈ ಪ್ರಕರಣದ ವಿಚಾರಣೆ ನಡೆಸಿ ಸತ್ಯವನ್ನು ಹಿಂದೂಗಳ ಮುಂದಿಡಬೇಕು, ಎಂಬುದು ಹಿಂದೂಗಳ ಬೇಡಿಕೆಯಾಗಿದೆ !
ವಿದಿಶಾ (ಮಧ್ಯಪ್ರದೇಶ) – ಇಲ್ಲಿನ ಗಂಜ ಬಸೋಡಾನಲ್ಲಿರುವ ‘ಸೆಂಟ ಜೊಸೆಫ’ ಎಂಬ ಕ್ಯಾಥೊಲಿಕ ಶಾಲೆಯಲ್ಲಿ ಹಿಂದೂ ವಿಧ್ಯಾರ್ಥಿನಿಯರನ್ನು ಮತಾಂತರಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಕಲ್ಲುತೂರಾಟದ ಪ್ರಕರಣದಲ್ಲಿ ಪೊಲೀಸರು ೪ ಜನರನ್ನು ವಶ ಪಡಿಸಿಕೊಂಡಿದ್ದು ಉಳಿದವರನ್ನು ಪತ್ತೆ ಹಚ್ಚ ಲಾಗುತ್ತಿದೆ. ಈ ಶಾಲೆ ೧೧ ವರ್ಷಗಳ ಹಿಂದೆ ಆರಂಭವಾಗಿತ್ತು. ಭೂಪಾಲದ ‘ಮಲಬಾರ ಮಿಶನರಿ ಸೊಸೈಟಿ’ನಿಂದ ಶಾಲೆ ನಡೆಸಲಾಗುತ್ತಿದೆ. ೧ ಸಾವಿರ ೫೦೦ ವಿಧ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಅವರ ಪೈಕಿ ಹೆಚ್ಚಿನ ವಿಧ್ಯಾರ್ಥಿಗಳು ಹಿಂದೂಗಳಾಗಿದ್ದಾರೆ.
೧. ಡಿಸಂಬರ ೬ ರಂದು ಮಧ್ಯಾಹ್ನ ಸುಮಾರು ೩೦೦ ಜನರು ಆ ಶಾಲೆಯ ಹೊರಗೆ ಜಮಾಯಿಸಿದರು ಮತ್ತು ಆಂದೋಲನ ಮಾಡಲಾರಂಭಿಸಿದರು. ಈ ಸಮಯದಲ್ಲಿ ಶಾಲೆಯ ೧೨ನೇಯ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಗುಂಪು ಆಕ್ರಮಣಕಾರಿ ಆಯಿತು. ಮತ್ತು ಶಾಲೆಯ ಮೇಲೆ ಕಲ್ಲುತೂರಾಟ ನಡೆಸಿತು.
೨. ಶಾಲೆಯ ಮುಖ್ಯೋಪಾಧ್ಯಾಯರಾದ ಬ್ರದರ ಆಂಥನೀ ಟಾಯನ್ಮಯುಮಕಲ್‌ರವರು, ಈ ಗುಂಪಿನವರ ಬಳಿ ಕಬ್ಬಿಣದ ರಾಡ್ ಹಾಗೂ ಕಲ್ಲುಗಳಿದ್ದವು. ಶಾಲೆಯ ಮೇಲೆ ಕಲ್ಲುತೂರಾಟ ನಡೆಸುವಾಗ ಈ ಗುಂಪಿನವರು ‘ಜಯ ಶ್ರೀರಾಮ’ನ ಘೋಷಣೆಗಳನ್ನು ನೀಡುತ್ತಿದ್ದರು. ನಾವು ಪೊಲೀಸರಲ್ಲಿ ಸುರಕ್ಷೆ ಒದಗಿಸಿಕೊಡಲು ಬೇಡಿಕೆ ನೀಡಿದ್ದೆವು; ಆದರೆ ಅವರು ನಮಗೆ ಆ ಗುಂಪು ಕೇವಲ ಘೋಷಣೆ ಕೂಗುತ್ತಾರೆ ಮತ್ತು ಶಾಂತಿಯಿಂದ ಹೋಗುವರು; ಎಂದು ಹೇಳಿದರು. ಆದರೆ ಗುಂಪು ಧ್ವಂಸ ಮಾಡಿ ಹೋದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದರು ಎಂದು ಹೇಳಿದರು.
೩. ಬ್ರದರ ಆಂಥನೀಯವರ ಆರೋಪವನ್ನು ತಳ್ಳಿಹಾಕಿ ಗಂಜ ಬಸೋಡದ ಉಪವಿಭಾಗ ಪೊಲೀಸ್ ಅಧಿಕಾರಿಗಳಾದ ಭರತ ಭೂಷಣರವರು, ಅದು ಶಾಂತಿಯುತವಾದ ಆಂದೋಲನವಾಗಿತ್ತು; ಆದರೆ ಕೆಲವು ಸಮಾಜಕಂಟಕರು ಅವಕಾಶವನ್ನು ಬಳಸಿಕೊಂಡು ಶಾಲೆಯ ಮೇಲೆ ಕಲ್ಲುತೂರಾಟ ನಡೆಸಿದರು. ಆದ್ದರಿಂದ ಶಾಲೆಯ ಕಟ್ಟಡದಲ್ಲಿ ಕೆಲವು ಗಾಜುಗಳು ಮುರಿಯಿತು. ಶಾಲೆಗೆ ಪೊಲೀಸು ಸಂರಕ್ಷಣೆ ಒದಗಿಸಲಾಗಿದ್ದು ಆರೋಪಿಗಳ ಮೇಲೆ ಕಾರ್ಯಾಚರಣೆ ಮಾಡಲಾಗಿದೆ. ಬಜರಂಗ ದಳದ ೪ ಜನರನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ
ಶಾಲೆಯಲ್ಲಿ ೮ ಹಿಂದೂ ಹೆಣ್ಣುಮಕ್ಕಳ ಮತಾಂತರ !
ವಿಶ್ವ ಹಿಂದು ಪರಿಷತ್ತಿನ ಮುಖಂಡರಾದ ನಿಲೇಶ ಅಗ್ರವಾಲರವರು ಈ ಆಂದೋಲನದ ಮುಂದಾಳತ್ವ ವಹಿಸಿದ್ದರು. ಅವರು, ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ, ಅಕ್ಟೋಬರ್ ೩೧ ರಂದು ಶಾಲೆಯಲ್ಲಿರುವ ೮ ಹಿಂದು ಹೆಣ್ಣು ಮಕ್ಕಳನ್ನು ಮತಾಂತರಿಸಲಾಗಿತ್ತು. ಮಕ್ಕಳ ಹಕ್ಕು ಸಂರಕ್ಷಣೆಗೋಸ್ಕರ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಪಿರ್ಯಾಂಕ ಕನುಗೊರವರು ಈ ವಿಷಯವಾಗಿ ವಿದಿಶಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕೂಡ ಬರೆದಿದ್ದರು ಎಂದು ಹೇಳಿದ್ದಾರೆ
ಅಗ್ರವಾಲರವರ ಈ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಬ್ರದರ್ ಆಂಥನಿ, ಮತ್ತು ಪೊಲೀಸ್ ಅಧಿಕಾರಿಗಳಾದ ಭೂಷಣರವರು ತಳ್ಳಿಹಾಕಿದ್ದು ಇದು ಸುಳ್ಳು ಮಾಹಿತಿಯಾಗಿದೆ ಎಂದು ಹೇಳಿದ್ದಾರೆ.