‘ಅವರು ಚಿಕ್ಕ ಹುಡುಗರಾಗಿದ್ದಾರೆ, ಅವರು ಆವೇಶಕ್ಕೊಳಗಾಗುತ್ತಾರೆ ಮತ್ತು ಉತ್ಸಾಹದಿಂದ ಇಂತಹ ಕೆಲಸ ಮಾಡಿಬಿಡುತ್ತಾರೆ !’ (ಅಂತೆ)

ಪಾಕಿಸ್ತಾನದ ರಕ್ಷಣಾ ಸಚಿವರಿಂದ ಶ್ರೀಲಂಕಾದ ನಾಗರಿಕರ ಹತ್ಯೆ ಗೈದವರನ್ನು ಬೆಂಬಲಿಸುವ ಹೇಳಿಕೆ

ಇಂತಹ ರಾಜ್ಯಕರ್ತರಿರುವ ದೇಶದಲ್ಲಿ ನಿರಪರಾಧಿಗಳ ಹತ್ಯೆ ಬಿಟ್ಟು, ಬೇರೆ ಇನ್ನೇನಾಗಲು ಸಾಧ್ಯ? ಇದರ ಬಗ್ಗೆ ವಿಚಾರ ಮಾಡಿ ಜಾಗತಿಕ ಸಮುದಾಯವು ಪಾಕಿಸ್ತಾನವನ್ನು ಬಹಿಷ್ಕರಿಸುವುದು, ಏಕೈಕ ಉಪಾಯವಾಗಿದೆ ! ಶ್ರೀಲಂಕಾ ಮತ್ತು ಭಾರತವು ಈಗಲಾದರೂ ಈ ನಿರ್ಧಾರ ತೆಗೆದುಕೊಳ್ಳಬೇಕು !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ‘ಈಶ ನಿಂದನೆ’ಯ ಆರೋಪದಿಂದ ಮತಾಂಧರ ಗುಂಪು ಶ್ರೀಲಂಕಾದ ನಾಗರಿಕ ಪ್ರಿಯಾಂಥಾ ಕುಮಾರಾ ಇವರನ್ನು ಅಮಾನುಷವಾಗಿ ಹತ್ಯೆಮಾಡಿತ್ತು. ಈ ಘಟನೆಯ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ ಇವರು ಹಂತಕರನ್ನು ಬೆಂಬಲಿಸುವ ಹೇಳಿಕೆ ನೀಡಿದ್ದಾರೆ. ಅವರು, “ಅವರು ಚಿಕ್ಕ ಹುಡುಗರಾಗಿದ್ದಾರೆ, ಅವರು ಆವೇಶದಲ್ಲಿ ಹಾಗೂ ಉತ್ಸಾಹದಿಂದ ಇಂತಹ ಕೆಲಸ ಮಾಡಿ ಬಿಡುತ್ತಾರೆ. ಇದರ ಅರ್ಥ ‘ದೇಶ ವಿನಾಶದ ದಾರಿ ತುಳಿಯುತ್ತಿದೆ’, ಹೀಗಲ್ಲ. ಪ್ರತಿಯೊಬ್ಬರ ವಿಚಾರವು ಬೇರೆಯಾಗಿರುತ್ತದೆ’ ಎಂದರು. (ಪಾಕಿಸ್ತಾನದ ರಾಜ್ಯಕರ್ತರು ಎಷ್ಟು ನಿರಾಕರಿಸಿದರೂ, ಪಾಕಿಸ್ತಾನ ವಿನಾಶದತ್ತ ಸಾಗುತ್ತಿದೆ ಮತ್ತು ಯಾವ ದಿನ ಪಾಕಿಸ್ತಾನ ಸಂಪೂರ್ಣ ನಾಶವಾಗುತ್ತದೆಯೋ, ಆಗ ಈ ರಾಜ್ಯಕರ್ತರೂ ವಿನಾಶವಾಗುವರು, ಇದೇ ಸತ್ಯವಾಗಿದೆ ! – ಸಂಪಾದಕರು)