3 ತಿಂಗಳು ವೇತನ ನೀಡದ್ದರಿಂದ ಮಕ್ಕಳಿಗೆ ಶಾಲೆಯ ಶಿಕ್ಷಣದ ಶುಲ್ಕ ಕಟ್ಟಲಿಲ್ಲವೆಂದು ಅವರನ್ನು ಶಾಲೆಯಿಂದ ತೆಗೆದು ಹಾಕಲಾಗಿದೆ, ಇದೇನಾ `ಹೊಸ ಪಾಕಿಸ್ತಾನ’ ?

ಸರ್ಬಿಯಾದಲ್ಲಿರುವ ಪಾಕ್.ನ ರಾಯಭಾರಿ ಕಛೇರಿಯ ಸಿಬ್ಬಂದಿಯ ಟ್ವಿಟ್ !

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್‍ಗೆ ಪಾಕಿಸ್ತಾನಿಯಿಂದಲೇ ಚಾಟಿ !

*ಪಾಕಿಸ್ತಾನವು ದೀವಾಳಿಯಾಗಿರುವ ದೇಶ’, ಎಂದು ಘೋಷಿಸುವುದಷ್ಟೇ ಈಗ ಬಾಕಿ ಉಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !- ಸಂಪಾದಕರು 

* ಪಾಕ್‍ನ ಸರಕಾರಿ ಸಿಬ್ಬಂದಿವರ್ಗವು `ಪಾಕ್ ಉಗ್ರಗಾಮಿಗಳನ್ನು ಸಾಕಲು ಹಣ ಖರ್ಚು ಮಾಡುವುದರ ಬದಲು ಸರಕಾರಿ ಸಿಬ್ಬಂದಿವರ್ಗಕ್ಕೆ ವೇತನ ನೀಡಲಿ’, ಎಂದು ಟ್ವಿಟ್ ಮಾಡುವುದು ಅಪೇಕ್ಷಿತವಾಗಿದೆ !- ಸಂಪಾದಕರು 

ಇಸ್ಲಾಮಾಬಾದ (ಪಾಕಿಸ್ತಾನ) – ಸರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಛೇರಿಯು ಪ್ರಧಾನ ಮಂತ್ರಿ ಇಮ್ರಾನ್ ಖಾನ್‍ರವರನ್ನು ಟೀಕಿಸುವಂತಹ ಟ್ವಿಟ್ ಮಾಡಿದೆ. ‘ಬೆಲೆಯೇರಿಕೆಯು ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರುವಾಗ ಕಳೆದ 3 ತಿಂಗಳು ನಮಗೆ ವೇತನ ನೀಡದೆ ಇರುವಾಗ ನಾವು (ಸರಕಾರಿ ಸಿಬ್ಬಂದಿವರ್ಗ) ಸುಮ್ಮನಿದ್ದುಕೊಂಡು ನಿಮಗೋಸ್ಕರ ಕೆಲಸ ಮಾಡುತ್ತಿರುತ್ತೇವೆ’, ಎಂದು ನೀವೆಷ್ಟು ಕಾಲ ಅಪೇಕ್ಷಿಸುವಿರಿ ? ನಮ್ಮ ಮಕ್ಕಳ ಶಾಲಾ ಶಿಕ್ಷಣ ಶುಲ್ಕ ಪಾವತಿಸದಿರುವುದರಿಂದ ಅವರನ್ನು ಶಾಲೆಯಿಂದ ತೆಗೆದು ಹಾಕಲಾಗಿದೆ. ಇದೇನಾ ‘ಹೊಸ ಪಾಕಿಸ್ತಾನ?’, ಎಂದು ಈ ಟ್ವಿಟ್‍ನಲ್ಲಿ ಇಮ್ರಾನ್ ಖಾನರವರನ್ನು ಉದ್ದೇಶಿಸಿ ಹೇಳಲಾಗಿದೆ. ಈ ಟ್ವಿಟ್‍ನ ಬಳಿಕ ಇನ್ನೂ ಒಂದು ಟ್ವಿಟ್ ಮಾಡಲಾಗಿದೆ. ಅದರಲ್ಲಿ ‘ನಮ್ಮನ್ನು ಕ್ಷಮಿಸಿ, ಇಮ್ರಾನ್ ಖಾನ್‍, ನಮ್ಮ ಬಳಿ ಬೇರೆ ಪರ್ಯಾಯ ಉಳಿದಿಲ್ಲ’, ಎಂದು ಹೇಳಲಾಗಿದೆ. ಅದೇ ರೀತಿ ಒಂದು ಚಿತ್ರವನ್ನು ಪೋಸ್ಟ್ ಮಾಡಿ ‘ನೀವು ಹೆದರಬೇಡಿ’, ಎಂದು ಕೂಡ ಬರೆಯಲಾಗಿದೆ. ಪಾಕಿಸ್ತಾನದ ರಾಯಭಾರಿ ಕಛೇರಿಯು ತನ್ನ ಅಧಿಕೃತ ಖಾತೆಯಿಂದ ಈ ಟ್ವಿಟ್ ಮಾಡಿದೆ. ಆದರೆ ಪಾಕಿಸ್ತಾನ ಸರಕಾರವು ಮಾತ್ರ ಪಾಕಿಸ್ತಾನಿ ರಾಯಭಾರಿ ಕಛೇರಿಯ ಟ್ವಿಟರ್ ಖಾತೆಯನ್ನು ‘ಹ್ಯಾಕ್’ ಮಾಡಲಾಗಿದೆ’ ಎಂದು ಹೇಳಿದೆ.