‘ಹಲಾಲ್ ಜಿಹಾದ್’ನ ಷಡ್ಯಂತ್ರ ತಿಳಿದು ಅದಕ್ಕನುಸಾರ ಕೃತಿ ಮಾಡುವುದು ಅನಿವಾರ್ಯವಾಗಿದೆ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹಲಾಲ್ ಅರ್ಥವ್ಯವಸ್ಥೆಯ ಷಡ್ಯಂತ್ರ ಕುರಿತು ವಿಶೇಷ ‘ಆನ್‌ಲೈನ್’ ಸಂವಾದ

ಶ್ರೀ. ಗುರುಪ್ರಸಾದ ಗೌಡ

ಜಿಹಾದ್‌ನ ಹೆಸರಿನಲ್ಲಿ ಇಂದು ಹಿಂದೂ ಸಮಾಜದ ಮೇಲೆ, ರಾಷ್ಟ್ರದ ಮೇಲೆ ಬಹುದೊಡ್ಡ ಆಘಾತವಾಗುತ್ತಿದೆ. ಸುಮಾರು ೧೫ ಕ್ಕೂ ಹೆಚ್ಚು ವಿಧದ ಜಿಹಾದ್‌ಗಳು ಸದ್ಯ ಪ್ರಚಲಿತವಾಗಿದೆ. ಇದರಲ್ಲಿ ಪ್ರಮುಖವಾಗಿ ಇಂದು ‘ಹಲಾಲ್ ಜಿಹಾದ್ ಮೂಲಕ ಭಾರತವನ್ನು ಇಸ್ಲಾಮೀಕರಣ ಮಾಡುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲಾಲ್ ಆಧಾರಿತ ಪ್ರತ್ಯೇಕ ಅರ್ಥವ್ಯವಸ್ಥೆ ನಿರ್ಮಾಣವಾಗಿರುವುದು ತುಂಬಾ ಆಘಾತಕಾರಿಯಾಗಿದೆ ಎಂದರು. ಈ ‘ಹಲಾಲ್ ಜಿಹಾದ್ ಕೇವಲ ಮಾಂಸಕ್ಕೆ ಸೀಮಿತವಾಗಿರದೆ ಸೌಂದರ್ಯವರ್ಧಕ, ದಿನಬಳಕೆ ವಸ್ತುಗಳಲ್ಲಿ ಅಲ್ಲದೆ ಕಟ್ಟಡ ಮತ್ತು ಆಸ್ಪತ್ರೆಗಳನ್ನು ಇಂದು ಹಲಾಲ್ ಸರ್ಟಿಫಿಕೇಟ್ ಮೂಲಕ ನಿರ್ಮಾಣ ಆಗಿರುವುದು ತುಂಬಾ ಆಘಾತಕಾರಿ ವಿಷಯವಾಗಿದೆ. ಇಂದು ವಿಶ್ವದ ಸುಮಾರು ೫೭ ಕ್ಕೂ ಅಧಿಕ ಇಸ್ಲಾಂ ರಾಷ್ಟ್ರಗಳಲ್ಲಿ ‘ಹಲಾಲ್ ಸರ್ಟಿಫಿಕೇಟ್ ಇಲ್ಲದೆ ದೇಶೀಯ ವಸ್ತುಗಳ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಇಂದು ನಮ್ಮ ಸ್ವದೇಶಿ ವಸ್ತುಗಳು ಸಹ ‘ಹಲಾಲ್ ಸರ್ಟಿಫಿಕೇಟ್ ಪಡೆಯುವುದರ ಮೂಲಕ ಹಲಾಲ್ ಲೋಗೋವನ್ನು ಹಾಕಿ ವಸ್ತುಗಳನ್ನು ವಿತರಣೆ ಮಾಡುತ್ತಿವೆ. ಬಹುಸಂಖ್ಯಾತ ಹಿಂದೂಗಳು ಇದನ್ನು ಬಳಕೆ ಮಾಡುತ್ತಿದ್ದು ಹಲಾಲ್ ಜಿಹಾದ್ ಗೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಖೇದ ವ್ಯಕ್ತಪಡಿಸಿದರು,ಅವರು ನವೆಂಬರ್ ೧೪ ರಂದು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಉದ್ಯಮಿಗಳಿಗೆ ‘ಹಲಾಲ್ ಜಿಹಾದ್ ನ ಭೀಕರತೆ ಮತ್ತು ಇದರ ಪರಿಣಾಮ ತಿಳಿಸುವ ಸಲುವಾಗಿ ಹಿಂದೂ ಜನಜಾಗೃತಿ ಸಮಿತಿಯು ಅಯೋಜಿಸಿದ್ದ ‘ಆನ್.ಲೈನ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ ಬೆಳಗಾವಿ, ಧಾರವಾಡ, ಮಂಗಳೂರು, ಬೆಂಗಳೂರು ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು ೫೬ ಕ್ಕೂ ಅಧಿಕ ಉದ್ಯಮಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಉದ್ದೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ ಅವರು ಹೇಳಿದರು.

ಗಮನಾರ್ಹ ಅಂಶಗಳು

. ಹೆಚ್ಚಿನ ಉದ್ಯಮಿಗಳು ಇಂದಿನ ಕಾರ್ಯಕ್ರಮ ತುಂಬಾ ಉತ್ತಮ ಮತ್ತು ಅವಶ್ಯಕ ಮಾಹಿತಿ ನೀಡುವುದಾಗಿತ್ತು ಎಂದರು. ಅಲ್ಲದೇ ನಾವು ಈ ಹಲಾಲ್ ಮಾನ್ಯತೆಯ ವಸ್ತುಗಳ ಬಳಕೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದರು.

೨. ಕೆಲವರು ನಾವು ಇದರ ಬಗ್ಗೆ ಸಮಜದವರಿಗೆ ಜಾಗೃತಿ ಮೂಡಿಸಲು ಹಾಗೂ ಸಂಬಂಧಪಟ್ಟವರಿಗೆ ತಿಳಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

. ಇಂದು ನಮಗೆ ಹಲಾಲ್ ಜಿಹಾದ್‌ನ ಕರಾಳ ಮುಖ ಗಮನಕ್ಕೆ ಬಂದಿತು ಎಂದು ಅನೇಕರು ತಿಳಿಸಿದರು.