ಮಹಾರಾಜಗಂಜ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ಮಹಿಳಾ ಮತ್ತು ಪುರುಷ ಅರ್ಚಕರ ಹತ್ಯೆ

ಉತ್ತರಪ್ರದೇಶದಲ್ಲಿ ಈವರೆಗೆ ಅನೇಕ ಅರ್ಚಕರು, ಮಹಂತರು, ಸಾಧುಗಳ ಹತ್ಯೆಯಾಗಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಸರಕಾರವು ಇದರ ಕಡೆ ಗಂಭೀರ್ಯತೆಯಿಂದ ನೋಡುವ ಅವಶ್ಯಕತೆ ಇದೆ !- ಸಂಪಾದಕರು 

ಮಹಾರಾಜಗಂಜ (ಉತ್ತರಪ್ರದೇಶ) – ಇಲ್ಲಿ ದೇವಿಯ ದೇವಸ್ಥಾನದಲ್ಲಿ 68 ವಯಸ್ಸಿನ ಮಹಿಳಾ ಅರ್ಚಕ ಕಲಾವತಿ ದೇವಿ ಮತ್ತು 23 ವಯಸ್ಸಿನ ಅರ್ಚಕ ರಾಮರತನ ಮಿಶ್ರ ಇವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಮಹದೇಯಿಯಾ ಈ ಊರಿನಲ್ಲಿ ನಡೆದಿದೆ. ಈ ಗ್ರಾಮ ನೇಪಾಳ ಗಡಿಯ ಹತ್ತಿರದಲ್ಲಿದೆ. ಈ ಹತ್ಯೆಯ ಕಾರಣ ಈವರೆಗೂ ಸ್ಪಷ್ಟವಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ತಿಂಗಳ ಹಿಂದೆ ಅರ್ಚಕ ರಾಮರತನ ಮಿಶ್ರ ಇವರ ಕೃಷಿ ಭೂಮಿ ಸರಕಾರಿ ಕಾರ್ಯಕ್ಕಾಗಿ ವಶಪಡಿಸಿಕೊಳ್ಳಲಾಗಿತ್ತು. ಅದಕ್ಕಾಗಿ ಮಿಶ್ರ ಇವರಿಗೆ 14 ಲಕ್ಷ ರೂಪಾಯಿ ನೀಡಿದ್ದರು. ಈ ದುಡ್ಡಿಗಾಗಿ ಅವರ ಹತ್ಯೆ ಮಾಡಿರಬಹುದೇ ? ಎಂಬ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸಿದ್ದಾರೆ.