ಖೇಡ್ (ಜಿಲ್ಲೆ ರತ್ನಾಗಿರಿ) ಇಲ್ಲಿಯ ಸನಾತನದ ಸಾಧಕ ಡಾ. ಅಶೋಕ ಶಿಂದೆಯವರು ಆಕ್ಷೇಪಿಸಿದ್ದಕ್ಕೆ ಸಿಕ್ಕ ಉತ್ತರ !
ಹಿಂದೂಗಳ ಸಾಧುಗಳಿಗಾಗುತ್ತಿದ್ದ ಅವಮಾನದ ವಿರುದ್ಧ ಧ್ವನಿ ಎತ್ತಿದ ಸನಾತನದ ಸಾಧಕ ಡಾ. ಅಶೋಕ ಶಿಂದೆ ಅವರಿಗೆ ಅಭಿನಂದನೆಗಳು ! ಎಲ್ಲ ಹಿಂದೂಗಳು ಇದರಿಂದ ಕಲಿಯಬೇಕು !- ಸಂಪಾದಕರು
ಲಕ್ಷ್ಮಣಪುಣಿ (ಉತ್ತರಪ್ರದೇಶ) – ಭಾರತೀಯ ರೈಲ್ವೇ ಇತ್ತೀಚೆಗೆ ಆರಂಭಿಸಿದ `ರಾಮಾಯಣ ಎಕ್ಸ್‍ಪ್ರೆಸ್’ನ ರೈಲಿನಲ್ಲಿ ಪರಿಚಾರಕರಿಗೆ ಸಾಧುನಂತೆ ಸಮವಸ್ತ್ರವನ್ನು ನೀಡಿದೆ. ಇದಕ್ಕೆ ಆಕ್ಷೇಪಿಸಿದ ಸನಾತನದ ಖೇಡ್ (ರತ್ನಾಗಿರಿ ಜಿಲ್ಲೆ)ಯಲ್ಲಿನ ಸಾಧಕ ಡಾ. ಅಶೋಕ ಶಿಂದೆ ಅವರು ಸಮವಸ್ತ್ರ ಬದಲಾವಣೆಗೆ ಒತ್ತಾಯಿಸಿ `ಇಂಡಿಯನ್ ರೇಲ್ವೆ ಕೆಟರಿಂಗ್ ಆಂಡ್ ಟುರಿಸಂ ಕಾರ್ಪೊರೇಶನ್’ನ (ಐ.ಆರ್.ಸಿ.ಟಿ.ಸಿ.ಯ) ಮುಖ್ಯ ವ್ಯವಸ್ಥಾಪಕರಿಗೆ ಪತ್ರವನ್ನು ಕಳುಹಿಸಿದ್ದಾರೆ. ಇದನ್ನು ಗಮನಿಸಿ, ಐ.ಆರ್.ಸಿ.ಟಿ.ಸಿ.ಯ ಸಹ-ಮುಖ್ಯ ವ್ಯವಸ್ಥಾಪಕ ಅಚ್ಯುತ್ ಸಿಂಗ್ ಇವರು ಡಾ. ಶಿಂದೆಯವರ ಪತ್ರಕ್ಕೆ ಉತ್ತರಿಸಿದರು. ಅದರಲ್ಲಿ ಅವರು, ನಾವು ಪರಿಚಾರಕರ ಸಮವಸ್ತ್ರಗಳ ಬಗ್ಗೆ ಈಗಾಗಲೇ ಗಮನ ಹರಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಎಲ್ಲ ಸಿಬ್ಬಂದಿಗಳ ಸಮವಸ್ತ್ರ ಬದಲಾವಣೆ ಮಾಡುವವರಿದ್ದೇವೆ ಎಂದು ಹೇಳಿದರು.