ಪಾಕಿಸ್ತಾನದಲ್ಲಿ ಬಲಾತ್ಕಾರಿಗಳಿಗೆ ನಪುಂಸಕರನ್ನಾಗಿಸುವ ಶಿಕ್ಷೆ ವಿಧಿಸಲಾಗುವುದು !

ಪಾಕನ ಸಂಸತ್ತಿನಲ್ಲಿ ಕಾನೂನಿಗೆ ಸಮ್ಮತಿ

ಪಾಕಿಸ್ತಾನದಲ್ಲಿ ಇಂತಹ ಕಾನೂನು ಮಾಡಲು ಸಾಧ್ಯವಿದ್ದಲ್ಲಿ, ಭಾರತದಲ್ಲೇಕೆ ಸಾಧ್ಯವಿಲ್ಲ?- ಸಂಪಾದಕರು 

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕನ ಸಂಸತ್ತು ಬಲಾತ್ಕಾರದ ಘಟನೆಯನ್ನು ತಡೆಗಟ್ಟಲು ಹೊಸ ಕಾನೂನನ್ನು ಸಮ್ಮತಿಸಿದೆ. ಈ ಕಾನೂನಿಗನುಸಾರವಾಗಿ ಬಲಾತ್ಕಾರಿಗಳನ್ನು ನಪುಂಸಕರನ್ನಾಗಿಸುವ ಶಿಕ್ಷೆಯನ್ನು ವಿಧಿಸಲಾಗುವುದು. ಕಳೆದ ಕೆಲವು ತಿಂಗಳುಗಳಲ್ಲಿ ಪಾಕನಲ್ಲಿ ಬಲಾತ್ಕಾರದ ಘಟನೆಗಳಲ್ಲಿ ಹೆಚ್ಚಳವಾಗುತ್ತಿರುವುದರಿಂದ ಈ ಕಾನೂನನ್ನು ತರಲಾಗಿದೆ.

ಈ ಕಾನೂನಿಗನುಸಾರ ದೇಶದಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು ಮತ್ತು ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳದ ಘಟನೆಯ ವಿಷಯವಾಗಿ ಆಲಿಕೆ ನಡೆಸಲಾಗುವುದು. ಪ್ರತಿಯೊಂದು ಖಟ್ಲೆಯ ವಿಚಾರಣೆಯನ್ನು ೪ ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಒಮ್ಮೆ ಅಥವಾ ಅನೇಕ ಬಾರಿ ಬತಾತ್ಕಾರ ಮಾಡಿರುವ ಆರೋಪಿಗಳನ್ನು ನಪುಂಸಕರನ್ನಾಗಿ ಮಾಡಲಾಗುವುದು. ಆಗ ಅವರ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ವಿಶೇಷವೆಂದರೆ ಇಂತಹ ಘಟನೆಗಳಲ್ಲಿ ನಿಷ್ಕಾಳಜಿ ಮಾಡುವ ಪೊಲೀಸರು ಮತ್ತು ಸರಕಾರೀ ಅಧಿಕಾರಿಗಳಿಗೆ ೩ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗುವುದು. ಸಂತ್ರಸ್ತರ ಪರಿಚಯವನ್ನು ಬಹಿರಂಗ ಪಡಿಸುವವರಿಗೂ ಶಿಕ್ಷೆ ವಿಧಿಸಲಾಗುವುದು.