ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡಿ ! – ಸೌ. ಲಕ್ಷ್ಮೀ ಪೈ

ಸನಾತನ ಸಂಸ್ಥೆಯ ವತಿಯಿಂದ ಮಂಗಳೂರಿನಲ್ಲಿ ಯುವ ಸಾಧಕರಿಗಾಗಿನ ಶಿಬಿರವು ಭಾವಪೂರ್ಣವಾಗಿ ಸಂಪನ್ನ !

ಸೌ. ಲಕ್ಷ್ಮೀ ಪೈ

‘ನಿಜವಾದ ಆನಂದವು ಆಧ್ಯಾತ್ಮಿಕ ಸಾಧನೆಯಿಂದ ಸಿಗುತ್ತದೆ. ನಾಮಜಪದಿಂದ ನಮ್ಮಲ್ಲಿ ಸಾತ್ತ್ವಿಕತೆ ನಿರ್ಮಾಣವಾಗುತ್ತದೆ. ಸಾತ್ತ್ವಿಕತೆಯಿಂದ ಸದ್ಗುಣಗಳ ವೃದ್ಧಿಯಾಗುತ್ತದೆ. ತಮ್ಮಲ್ಲಿ ಗುಣವೃದ್ಧಿಯಾಗಲು ಮತ್ತು ಸ್ವಭಾವದೋಷಗಳ ನಿರ್ಮೂಲನೆಯಾಗಲು ಸಾಧನೆಯ ಪ್ರಯತ್ನಗಳನ್ನು ತಳಮಳದಿಂದ ಮಾಡಿ’, ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈಯವರು ಮಾರ್ಗದರ್ಶನ ಮಾಡಿದರು. ಅವರು ಇಲ್ಲಿನ ಬಾಲಂಭಟ್ ಸಭಾಗೃಹದಲ್ಲಿ ೩೧ ಅಕ್ಟೋಬರ್ ೨೦೨೧ ಈ ದಿನದಂದು ಸನಾತನ ಸಂಸ್ಥೆಯ ವತಿಯಿಂದ ಸನಾತನದ ಯುವ ಸಾಧಕರಿಗಾಗಿ ಆಯೋಜಿಸಿದ ಯುವಾ ಶಿಬಿರದಲ್ಲಿ ಮಾತನಾಡುತ್ತಿದ್ದರು. ಸನಾತನದ ಸಾಧಕಿ  ಸೌ. ಸಂಗೀತಾ ಪ್ರಭು ಇವರು ಶಿಬಿರದ ಉದ್ದೇಶವನ್ನು ತಿಳಿಸಿದರು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಪರಿಚಯ, ಹಾಗೆಯೇ ಸನಾತನ ಸಂಸ್ಥೆಯು ಮಾಡುತ್ತಿರುವ ಅಧ್ಯಾತ್ಮ ಪ್ರಸಾರದ ಕಾರ್ಯದ ಮಾಹಿತಿಯನ್ನು ಸೌ. ಪವಿತ್ರಾ ಕುಡ್ವಾ ಇವರು ನೀಡಿದರು. ಕು. ಪುಷ್ಪಾ ಮೆಸ್ತಾ ಇವರು ‘ಕೊರೊನಾ ಮಹಾಮಾರಿಯ ಸಮಯದಲ್ಲಿ ಪಾಲಿಸುವ ನಿಯಮ ಮತ್ತು ಆಧ್ಯಾತ್ಮಿಕ ಉಪಾಯ’ ಇವುಗಳ ಕುರಿತು ಮಾರ್ಗದರ್ಶನವನ್ನು ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೆರ ಇವರು ಶಿಬಿರಾರ್ಥಿಗಳಿಗೆ ಹಿಂದೂ ಜನಜಾಗೃತಿ ಸಮಿತಿಯ ಉದ್ದೇಶ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಸಮಿತಿಯು ಮಾಡುತ್ತಿರುವ ವಿವಿಧ ಉಪಕ್ರಮಗಳು, ಧರ್ಮಶಿಕ್ಷಣವರ್ಗ, ರಾಷ್ಟ್ರ ಮತ್ತು ಧರ್ಮ ಜಾಗೃತಿ ಮಾಡುವ ಫಲಕಗಳ ಪ್ರದರ್ಶನಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಆಗುವ ಪ್ರಸಾರ ಇತ್ಯಾದಿ ವಿಷಯಗಳ ಮಾಹಿತಿಯನ್ನು ನೀಡಿದರು. ಜನಪ್ರಬೋಧನೆಗಾಗಿ ತೆಗೆದುಕೊಳ್ಳಲಾಗುವ ಹಿಂದೂ ರಾಷ್ಟ್ರ-ಜಾಗೃತಿ ಸಭೆ, ವಿವಿಧ ಆಂದೋಲನಗಳು ಮತ್ತು ಅದರಿಂದ ದೊರಕಿದ ಯಶಸ್ಸನ್ನು ಕೇಳಿ ಶಿಬಿರಾರ್ಥಿಗಳು ಪ್ರಭಾವಿತರಾದರು. ‘ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ’, ಎಂದು ಶ್ರೀ. ಚಂದ್ರ ಮೊಗೆರ ಇವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಶಿಬಿರಾರ್ಥಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳು 

೧. ‘ಈ ವರ್ಷ ನಾನು ಯುವಾ ಸಾಧಕ ಶಿಬಿರಕ್ಕೆಂದು ಬರುವಾಗ ನನ್ನ ಕುಟುಂಬದವರ ಮನಸ್ಸಿನಲ್ಲಿ ‘ನಾನು ಒಳ್ಳೆಯ ಕಾರ್ಯಕ್ಕಾಗಿ ಹೋಗುತ್ತಿದ್ದೇನೆ’, ಎಂಬ ವಿಚಾರ ಇರುವುದರಿಂದ ಅವರು ಶಿಬಿರಕ್ಕೆ ಹೋಗಲು ಒಪ್ಪಿಗೆ ಕೊಟ್ಟರು. ಇದು ಕೇವಲ ಗುರುಕೃಪೆಯಿಂದಲೇ ಸಾಧ್ಯವಾಯಿತು. ಈ ಶಿಬಿರದಲ್ಲಿ ‘ಯೋಗ್ಯ ರೀತಿಯಿಂದ ನಾಮಜಪವನ್ನು ಹೇಗೆ ಮಾಡಬೇಕು ?’, ‘ನಾಮಜಪ ಮುಂತಾದ ಉಪಾಯಗಳನ್ನು ಏಕೆ ಮಾಡಬೇಕು ?’ ಮುಂತಾದವುಗಳನ್ನು ಕಲಿಯಲು ಸಿಕ್ಕಿತು.’ – ಕು. ಮಾನಸಾ ಪ್ರಭು, ಉಜಿರೆ. (೧೮ ವರ್ಷ)

೨. ‘ಈ ಆಪತ್ಕಾಲದಲ್ಲಿಯೂ ಶಿಬಿರದಲ್ಲಿ ಉಪಸ್ಥಿತರಿರಲು ಅವಕಾಶ ಸಿಕ್ಕಿರುವುದರಿಂದ ಕೃತಜ್ಞತೆ ಎನಿಸಿತು. ಶಿಬಿರದಿಂದ ಆಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕು ? ಎಂಬುದು ಕಲಿಯಲು ಸಿಕ್ಕಿತು; ಹಾಗೆಯೇ ಸಾಧನೆ ಮತ್ತು ಸೇವೆಯನ್ನು ಮಾಡಲು ತುಂಬಾ ಉತ್ಸಾಹವೆನಿಸಿತು.’ – ಕು. ದೀಕ್ಷಾ ವಳಚಿಲ, ಮಂಗಳೂರು (೧೭ ವರ್ಷ)

೩. ‘ವ್ಯಷ್ಟಿ ಸಾಧನೆಯನ್ನು ಉತ್ತಮ ರೀತಿಯಲ್ಲಿ ಮಾಡುವ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಸೇವೆ ಮಾಡಲು ಉತ್ಸಾಹವೆನಿಸಿತು.’ – ಕು. ಸೌಮ್ಯ, ಪುತ್ತೂರು (೨೨ ವರ್ಷ)