ಭಾರತದ ಪರಿಚಯ ರಾಜರಿಂದಲ್ಲ ಋಷಿಮುನಿಗಳಿಂದಿದೆ ! – ಕೇರಳದ ರಾಜ್ಯಪಾಲ ಆರೀಫ ಮಹಮ್ಮದ ಖಾನ್

ಕೇರಳದ ರಾಜ್ಯಪಾಲ ಆರೀಫ ಮಹಮ್ಮದ ಖಾನ್

ವಾರಣಾಸಿ (ಉತ್ತರಪ್ರದೇಶ) – ಭಾರತದ ಪರಿಚಯವು ರಾಜರಿಂದಲ್ಲ ಋಷಿಮುನಿಗಳಿಂದಾಗಿ ಇದೆ. ಅವರು ಭಾರತೀಯ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಸಾವಿರಾರು ವರ್ಷಗಳ ವರೆಗೆ ಸಾಧನೆ ಮಾಡಿದ್ದರು. ಅದರ ಫಲವಾಗಿ ನಮ್ಮ ಸನಾತನ ಸಂಸ್ಕೃತಿಯಿದೆ, ಇದರಲ್ಲಿ ಸಂಪೂರ್ಣ ಜಗತ್ತಿಗೆ ದಾರಿ ತೋರಿಸುವ ಕ್ಷಮತೆಯಿದೆ, ಎಂದು ಕೇರಳದ ರಾಜ್ಯಪಾಲರಾದ ಆರೀಫ ಮಹಮ್ಮದ ಖಾನರವರು ಅಖಿಲ ಭಾರತೀಯ ಸಂತ ಸಮಿತಿ ಮತ್ತು ಗಂಗಾ ಮಹಾಸಭಾವು ಇಲ್ಲಿನ ‘ರುದ್ರಾಕ್ಷ ಕನ್ವೆನ್ಷನ್ ಸೆಂಟರ್’ನಲ್ಲಿ ಆಯೋಜಿಸಿದ ‘ಸಂಸ್ಕೃತಿ ಸಂಸದೆ’ಯಲ್ಲಿ ಗೌರವೋದ್ಗಾರ ತೆಗೆದರು.

1. ರಾಜ್ಯಪಾಲ ಖಾನರವರು ಮುಂದುವರಿದು, ನಾವು ಪ್ರತಿಯೊಂದು ಜೀವದಲ್ಲಿ ಶಂಕರನನ್ನು ನೋಡಲು ಸಾಧ್ಯವಾಗಬೇಕು. `ಮಾನವ ಸೇವೆ’ಯೇ `ಮಾಧವ ಸೇವೆ’ಯಾಗಿದೆ. ಭಾರತದ ಆಧ್ಯಾತ್ಮಿಕ ಸಂಸ್ಕೃತಿಯಿಂದಾಗಿಯೇ ಸ್ವಾಮಿ ವಿವೇಕಾನಂದರನ್ನು ವಿದೇಶದಲ್ಲಿ ಸನ್ಮಾನಿಸಲಾಯಿತು. ಮಹಮ್ಮದ ಪೈಗಂಬರರು `ನಾನು ಮೆಕ್ಕಾದಲ್ಲಿ ವಾಸಿಸುತ್ತಿದ್ದೇನೆ. ನಾನು ಎಂದಿಗೂ ಭಾರತಕ್ಕೆ ಹೋಗಿಲ್ಲ; ಆದರೆ ಭಾರತದ ಭೂಮಿಯ ಶೀತಲ ಗಾಳಿಯನ್ನು ಇಲ್ಲಿ ಅನುಭವಿಸುತ್ತಿದ್ದೇನೆ’ ಎಂದು ಹೇಳಿದ್ದರು’ ಎಂದು ಹೇಳಿದರು.

2. ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಅಲೋಕ ಕುಮಾರರವರು ಮಾತನಾಡುತ್ತಾ, `ದೇವಸ್ಥಾನ ಸರಕಾರಿಕರಣ ಕಾನೂನನ್ನು ಒಮ್ಮಿಂದೊಮ್ಮೆಲೇ ಮಾಡಲಾಯಿತು. ಅದನ್ನು ಜನರು ಸ್ವೀಕರಿಸಿಲ್ಲ. ಅದರಲ್ಲಿ ಬದಲಾವಣೆಯಾಗುವುದು ಆವಶ್ಯಕವಾಗಿದೆ. ಕೆಲವು ಸಾಮ್ಯವಾದಿ ಸ್ವಯಂಸೇವಾ ಸಂಘಟನೆಗಳು ಮತ್ತು ಚರ್ಚಗಳು ‘ಹಿಂದೂಗಳು ಸರಿಯಿಲ್ಲ’ ಎಂಬ ಭಾವನೆಯನ್ನು ಹಿಂದೂಗಳಲ್ಲಿ ಮೂಡಿಸಿವೆ’ ಎಂದು ಹೇಳಿದರು.

3. ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಂದ ಸ್ವರಸ್ವತಿಯವರು ಮಾತನಾಡುತ್ತಾ, ದೇವಸ್ಥಾನ ಸರಕಾರಿಕರಣ ಕಾನೂನು ‘ಕರಾಳ ಕಾನೂನು’ ಆಗಿದೆ’ ಎಂದು ಹೇಳಿದರು.