ಆಗ್ರಾದಲ್ಲಿ ಮುಸಲ್ಮಾನನೊಂದಿಗೆ ವಿವಾಹವಾದ ಹಿಂದೂ ಯುವತಿಯ ಸಂದೇಹಾಸ್ಪದ ಸಾವು

ಎರಡು ಗುಂಪುಗಳ ನಡುವೆ ಹಿಂಸಾಚಾರ

ಕಲ್ಲುತೂರಾಟ ಮತ್ತು ಗುಂಡುಹಾರಾಟ

ಲವ್ ಜಿಹಾದ್‍ಗೆ ಮತ್ತೊಂದು ಬಲಿ, ಎಂದೇ ಈ ಘಟನೆಯನ್ನು ಹೇಳಬಹುದು ! ಇಂತಹ ಘಟನೆಗಳನ್ನು ಯಾವಾಗ ತಡೆಯಲಾಗುವುದು ? – ಸಂಪಾದಕರು

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ಶಾಹಗಂಜ ಪ್ರದೇಶದಲ್ಲಿ ಹಿಂದೂ ಯುವತಿಯೊಬ್ಬಳು ವರ್ಷದ ಹಿಂದೆಯಷ್ಟೇ ಓರ್ವ ಮುಸಲ್ಮಾನ ಯುವಕಯೊಂದಿಗೆ ವಿವಾಹವಾದ ಬಳಿಕ ಈಗ ಸಂದೇಹಾಸ್ಪದವಾಗಿ ಸಾವನ್ನಪ್ಪಿದ ಕಾರಣ ಅಲ್ಲಿ ಹಿಂಸಾಚಾರದ ಘಟನೆ ನಡೆದಿದೆ. ಆ ಸಮಯದಲ್ಲಿ ಕಲ್ಲುತೂರಾಟ ಮತ್ತು ಗುಂಡುಹಾರಾಟ ನಡೆಸಲಾಯಿತು.

1. ವರ್ಷಾ ಎಂಬ ಹಿಂದೂ ಯುವತಿಯೊಬ್ಬಳು ಅರಮಾನ ಎಂಬ ಮುಸಲ್ಮಾನ ಯುವಕನೊಂದಿಗೆ ಪ್ರೇಮವಿವಾಹವಾದಳು. ಇಬ್ಬರೂ ಮನೆಯಿಂದ ಓಡಿಹೋಗಿದ್ದರು. ಅವರಿಬ್ಬರೂ ಆಗ್ರಾದ ಚಿಲ್ಲಿ ಪಾಡಾದಲ್ಲಿ ವಾಸಿಸುತ್ತಿದ್ದರು. ಅಲ್ಲಿಯೇ ವರ್ಷಾಳ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು ಮತ್ತು ಅರಮಾನ ಅಲ್ಲಿಂದ ಪರಾರಿಯಾಗಿರುವುದು ತಿಳಿದು ಬಂದಿದೆ. ವರ್ಷಾಳ ಸಹೋದರ ದುಷ್ಯಂತನು, ನನ್ನ ಸಹೋದರಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವಳ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾನೆ.

2. ಪೊಲೀಸ್ ಅಧೀಕ್ಷಕರಾದ ಸುಧೀರ ಕುಮಾರ ಇವರು, ಈ ಹತ್ಯೆಯ ವಿಚಾರಣೆ ನಡೆಸಲಾಗುತ್ತಿದ್ದು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.