ಗೋರಖಪುರದಲ್ಲಿ (ಉತ್ತರಪ್ರದೇಶ) ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣದಲ್ಲಿ ನಾಲ್ವರ ವಿರುದ್ಧ ದೇಶದ್ರೋಹದ ಆರೋಪ ದಾಖಲು !

* ವಿಭಜನೆಯ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳ ನರಮೇಧ ಆಗುತ್ತಿದ್ದರೇ ಭಾರತದಲ್ಲಿ ವಾಸಿಸುವ ಮತಾಂಧರ ಜನಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಅವರು ದೇಶದ್ರೋಹಿ ಮತ್ತು ಹಿಂದೂದ್ವೇಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ವ್ಯತ್ಯಾಸವನ್ನು ಜಾತ್ಯತೀತ ಹಾಗೂ ಪ್ರಗತಿ(ಅಧೋಗತಿ)ಪರರಿಗೆ ಎಂದು ಗಮನಕ್ಕೆ ಬರುವುದು ? – ಸಂಪಾದಕರು 

* ಇಂತಹ ದೇಶದ್ರೋಹಿಗಳನ್ನು ಬಂಧಿಸಿ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು !- ಸಂಪಾದಕರು 

ಗೋರಖಪುರ (ಉತ್ತರಪ್ರದೇಶ) – ಇಲ್ಲಿಯ ಚೌರಿ ಚೌರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಾಯತ್‍ನ ನಿವಾಸಿ ತಾಲೀಮ್ ಎಂಬ ವ್ಯಕ್ತಿ ತನ್ನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹಾರಿಸಿದ್ದಾನೆ. ಈ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಹಿಂದೂ ಸಂಘಟನೆಗಳು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದರು. ಈ ಗುಂಪು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು, ಅದೇ ರೀತಿ ಶಾಲಿಮ್ ಅವರ ವಾಹನವನ್ನು ಧ್ವಂಸಗೊಳಿಸಿದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿದರು. ಜೊತೆಗೆ ತಾಲಿಮ್, ಪಪ್ಪು, ಆಶಿಕ್ ಮತ್ತು ಆರಿಫ್ ವಿರುದ್ಧ ದೇಶದ್ರೋಹದ ಪ್ರಕರಣವನ್ನೂ ದಾಖಲಿಸಿದ್ದರು. ಅವರ ವಿಚಾರಣೆ ನಡೆಸಲಾಗುತ್ತಿದೆ.

1. ಈ ಬಗ್ಗೆ ಬ್ರಾಹ್ಮಣ ಜನ ಕಲ್ಯಾಣ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಕಲ್ಯಾಣ್ ಪಾಂಡೆ ಅವರು ದೂರು ದಾಖಲಿಸಿದ್ದಾರೆ. ಅವರು ಆರೋಪಿಗಳನ್ನು ಬಂಧಿಸದಿದ್ದಲ್ಲಿ ಅವರ ಮನೆಯನ್ನು ನೆಲಸಮ ಮಾಡಲಾಗುವುದು ಎಂದು ಹೇಳಿದರು.

2. ಪೊಲೀಸರು, ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ವಿದೇಶದಲ್ಲಿ ಯಾರೊಂದಿಗಾದರೂ ಅವರು ಸಂಪರ್ಕ ಹೊಂದಿದ್ದಾರೆಯೇ, ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಾಲಿಮ್ ಹಾರಿಸಿದ ಧ್ವಜ ಇಸ್ಲಾಂದ್ದಾಗಿದೆಯೋ ಅಥವಾ ಪಾಕಿಸ್ತಾನದ್ದಾಗಿದೆಯೋ ? ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.