ವೈಚಾರಿಕ ಭಯೋತ್ಪಾದನೆ : ಹಿಂದೂ ಧರ್ಮದ ಮೇಲಿನ ಬಹುದೊಡ್ಡ ಆಕ್ರಮಣ !

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಹಿಂದೂಗಳನ್ನು ದುಷ್ಟರು ಅಥವಾ ಭಯೋತ್ಪಾದಕರು ಎಂದು ನಿರ್ಧರಿಸಲು ಮತ್ತು ಅವರ ಮೇಲೆ ಭಯೋತ್ಪಾದನೆಯ ಮೊಹರು ಒತ್ತಲು ಜಾಗತಿಕ ಸ್ತರದಲ್ಲಿ ಪ್ರಯತ್ನವಾಗುತ್ತಿದೆ. ಹೀಗಾಗುವುದು ಹಿಂದೂಗಳ ವಿರುದ್ಧದ ಒಂದು ಷಡ್ಯಂತ್ರವೇ ಆಗಿದೆ. ವಿವಿಧ ದಿನಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ದೂರದರ್ಶನವಾಹಿನಿಗಳು ಮುಂತಾದ ವೇದಿಕೆಗಳ ಮೂಲಕ ಹಿಂದೂಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಬಿಂಬಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗುತ್ತಿದೆ. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಿದ್ದು, ಈ ರೀತಿ ಮಾಡಲಾಗುತ್ತಿರುವ ವೈಚಾರಿಕ ಭಯೋತ್ಪಾದನೆಗೆ ತೇಜಸ್ವಿ ವಿಚಾರಗಳಿಂದ ಪ್ರತ್ಯುತ್ತರವನ್ನು ನೀಡಬೇಕು.

೧. ವೈಚಾರಿಕ ಭಯೋತ್ಪಾದನೆಯ ಉದಾಹರಣೆಗಳು

೧ ಅ. ಹಿಂದೂ ರಾಷ್ಟ್ರದ ಬೇಡಿಕೆ : ಯಾವಾಗ ನಾವು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಂಡಿಸುತ್ತೇವೆಯೋ, ಆಗ ವಿರೋಧಿಗಳು, ಈ ಬೇಡಿಕೆಯು ಸಂವಿಧಾನ ವಿರೋಧಿಯಾಗಿದೆ; ಏಕೆಂದರೆ, ಸಂವಿಧಾನದಲ್ಲಿ ‘ನಾವು ‘ಸೆಕ್ಯುಲರ್’ (ಜಾತ್ಯತೀತರು) ಆಗಿದ್ದೇವೆ’, ಎಂದು ಹೇಳಲಾಗಿದೆ ಎನ್ನುತ್ತಾರೆ. ಆಗ ಅವರು ಉದ್ದೇಶಪೂರ್ವಕವಾಗಿ ಈ ‘ಸೆಕ್ಯುಲರ್’ ಶಬ್ದ ಮೂಲ ಸಂವಿಧಾನದಲ್ಲಿರಲಿಲ್ಲ ಎನ್ನುವುದನ್ನು ಮುಚ್ಚಿಡುತ್ತಾರೆ. ವಾಸ್ತವದಲ್ಲಿ ಅದನ್ನು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತುರುಕಿದ್ದರು. ‘ಒಂದು ವೇಳೆ ತುರ್ತುಪರಿಸ್ಥಿತಿಯು ಪ್ರಜಾಪ್ರಭುತ್ವದ ಮೇಲಿನ ಆಕ್ರಮಣವಾಗಿತ್ತು’ ಎಂದು ಪರಿಗಣಿಸಿದರೆ ಆ ‘ಸೆಕ್ಯುಲರ್’ ಪದ ನಮಗೇಕೆ(ಹಿಂದೂಗಳಿಗೆ ಮಾತ್ರ) ಕಡ್ಡಾಯವಾಗಿದೆ ? ಆಗ ಅವರು ‘ನಮ್ಮದು ಕಾನೂನಿನ ರಾಜ್ಯವಾಗಿದೆ ಮತ್ತು ಸಂವಿಧಾನವೇ ಕಾನೂನಿನ ಮೂಲವಾಗಿದೆ’ ಎನ್ನುತ್ತಾರೆ.

೧ ಆ. ಸಮಾನ ನಾಗರಿಕ ಕಾನೂನು, ಲವ್  ಜಿಹಾದ್ ಮತ್ತು ಕಲಂ ೩೭೦ : ‘ಸಮಾನ ನಾಗರಿಕ ಕಾನೂನು ಅಸ್ತಿತ್ವಕ್ಕೆ ಬರಬೇಕು’, ಎಂದು ನಾವು ಹೇಳುತ್ತೇವೆ; ಏಕೆಂದರೆ ಅದನ್ನು ಸಂವಿಧಾನದಲ್ಲಿ ಬರೆಯಲಾಗಿದೆ. ಆಗ ವಿರೋಧಿಗಳು, ಇಲ್ಲ, ಒಂದು ವೇಳೆ ಅದನ್ನು ಸಂವಿಧಾನದಲ್ಲಿ ಬರೆದಿದ್ದರೂ, ಅದು ಭಾವನೆಯ ಮತ್ತು ಅಲ್ಪಸಂಖ್ಯಾತರನ್ನು ಸಂಭಾಳಿಸಿಕೊಳ್ಳುವ ಪ್ರಶ್ನೆಯಾಗಿದೆ ಎನ್ನುತ್ತಾರೆ.

ಯಾವಾಗ ನಾವು ‘ಲವ್ ಜಿಹಾದ್’ ತಪ್ಪಾಗಿದೆ. ಅದು ನಮ್ಮ (ಹಿಂದೂ) ಸಂಸ್ಕೃತಿಯ ರಕ್ಷಣೆ ಮತ್ತು ಭಾವನೆಯ ಪ್ರಶ್ನೆಯಾಗಿದೆ ಎಂದು ಹೇಳುತ್ತೇವೆಯೋ ಆಗ ಅವರು ಪುನಃ ಹೇಳುವುದೇನೆಂದರೆ, ಇಲ್ಲ ಇಲ್ಲ, ನಿಮ್ಮ ಬೇಡಿಕೆಯೇ ಅವಾಸ್ತವವಾಗಿದೆ; ಏಕೆಂದರೆ ಅದು ಸಂವಿಧಾನವಿರೋಧಿಯಾಗಿದೆ, ಎನ್ನುತ್ತಾರೆ.

ಯಾವಾಗ ನಾವು ‘ಸಂವಿಧಾನದ ಕಲಂ ೩೭೦ ಅನ್ನು ರದ್ದುಗೊಳಿಸಬೇಕು, ಏಕೆಂದರೆ ಅದು  ದೇಶದ ಅಸ್ಮಿತೆಗೆ(ಏಕಾತ್ಮತೆಗೆ) ಅಪಾಯಕಾರಿಯಾಗಿದೆ ಎಂದು ನಾವು ಹೇಳಿದರೆ’, ಆಗ ಅವರು ಇಲ್ಲ, ಆ ಕಲಂ ೩೭೦ ಅಂದರೆ ಸರ್ವಧರ್ಮಸಮಭಾವ ಮತ್ತು ಕಾಶ್ಮೀರಿ ಜನತೆಯ ಸಂಸ್ಕೃತಿಯ ಪ್ರಶ್ನೆಯಾಗಿದೆ ಎನ್ನುತ್ತಾರೆ. (ಕಲಂ ೩೭೦ ರಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನವಿತ್ತು, ಅಂದರೆ ಈ ರಾಜ್ಯವು ವಿಶೇಷ ಸ್ವಾಯತ್ತತೆಯನ್ನು ಹೊಂದಿರುವ ರಾಜ್ಯವಾಗಿತ್ತು ! ಕಲಂ ೩೭೦ ರ ವಿಶೇಷ ಅಧಿಕಾರದಿಂದಾಗಿ ರಾಷ್ಟ್ರಪತಿಗಳಿಗೂ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಅಧಿಕಾರ ಇರಲಿಲ್ಲ. ಈ ಕಲಂನ್ನು ಕೇಂದ್ರ ಸರಕಾರವು ಈಗ ರದ್ದುಗೊಳಿಸಿದೆ. – ಸಂಕಲನಕಾರರು)

೧ ಇ. ಗೋಮಾತೆ : ಯಾವಾಗ ನಾವು ‘ಗೋವು ನಮ್ಮ ಭಾವನೆಯ ಪ್ರಶ್ನೆಯಾಗಿದೆ ಮತ್ತು ಗೋವುಗಳ ಪಾಲನೆ ಮತ್ತು ರಕ್ಷಣೆಯ ವಿಷಯದಲ್ಲಿ ಸಂವಿಧಾನದಲ್ಲಿ ಬರೆಯಲಾಗಿದೆ’ ಎಂದು ಹೇಳಿದರೆ, ಆಗ ವಿರೋಧಿಗಳು, ಗೋವು ಭಾವನೆಯ ಪ್ರಶ್ನೆಯಲ್ಲ, ಅದು ಹಸಿವಿನ ಪ್ರಶ್ನೆಯಾಗಿದೆ; ಏಕೆಂದರೆ ಗೋಮಾಂಸವು ಅತಿ ಕಡಿಮೆ ಬೆಲೆಗೆ ಸಿಗುವಂತಹ ‘ಪ್ರೋಟೀನ್’ ಆಗಿದೆ ಎನ್ನುತ್ತಾರೆ. ಅವರು ಹೇಳುವುದೇನೆಂದರೆ, ಹಾಲು ಕೊಡದ ವಯಸ್ಸಾದ ಗೋವನ್ನು ಪೋಷಣೆ ಮಾಡಿ ಎಂದು ರೈತರಿಗೆ ಹೇಳುವುದೆಂದರೆ ಅವರಿಗೆ ಅನ್ಯಾಯ ಮಾಡಿದಂತಾಗಿದೆ ಎನ್ನುತ್ತಾರೆ. ಆದರೆ ರೈತರ ಆತ್ಮಹತ್ಯೆ ನಿಲ್ಲಿಸಲು ವಿರೋಧಿಗಳು ಯಾವತ್ತೂ ಹೋಗುವುದಿಲ್ಲ.

೧ ಇ. ಒಂದು (ಅಖಂಡ) ರಾಷ್ಟ್ರ : ಯಾವಾಗ ನಾವು ‘ಇದು ಒಂದು ರಾಷ್ಟ್ರವಾಗಿದೆ ಮತ್ತು ಇದರ ವಿಭಜನೆಯಾಗಬಾರದು ಎಂದು ಹೇಳುತ್ತೇವೆಯೋ ಆಗ ಅವರು ‘ಇಲ್ಲ ಇದು ಒಂದು ರಾಷ್ಟ್ರವಲ್ಲ. ಇದು ಅನೇಕ ಸಂಸ್ಥಾನಗಳು, ಭಾಷೆ ಮತ್ತು ಸಂಸ್ಕೃತಿಗಳಿರುವ ಜನರ ಗುಂಪಾಗಿದೆ.  ಇದನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಮುಸಲ್ಮಾನರಿಗೆ ಅವರದ್ದೇ ಆದ ಪ್ರತ್ಯೇಕ ರಾಷ್ಟ್ರ ಸಿಗಬೇಕು, ಎಂದು ಹೇಳುತ್ತಾರೆ. ಯಾವಾಗ ಮುಸಲ್ಮಾನರು ಪ್ರತ್ಯೇಕ ರಾಷ್ಟ್ರದ ಕಡೆಗೆ ಹೋದರೋ, ಆಗ ‘ಇದು ಹಿಂದೂ ರಾಷ್ಟ್ರವಾಗಬೇಕು, ಎಂದು ನಾವು ಹೇಳಿದರೆ, ಆಗ ಅವರು, ಇಲ್ಲ. ಇದು ಎಂತಹ ರಾಷ್ಟ್ರವಾಗಿದೆಯೆಂದರೆ, ಅದರ ಸಂಸ್ಕೃತಿ ಸರ್ವಸಮಾವೇಶಕ ಮತ್ತು ಸಮಾನತೆ ಹೊಂದಿರುವ ಒಂದು ರಾಷ್ಟ್ರವಾಗಿದೆ. ಆದುದರಿಂದ ಹಿಂದೂ ರಾಷ್ಟ್ರದ ಬೇಡಿಕೆ ಮಂಡಿಸುವುದು ಅಯೋಗ್ಯವಾಗಿದೆ ಎನ್ನುತ್ತಾರೆ.

೧ ಉ. ಪಾಕಿಸ್ತಾನಿ ಹಿಂದೂಗಳು : ಯಾವಾಗ ನಾವು ಪಾಕಿಸ್ತಾನಿ ಹಿಂದೂಗಳ ವೇದನೆಯನ್ನು ನೋಡಿ ಅವರಿಗಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತೇವೆಯೋ, ಆಗ ವಿರೋಧಿಗಳು, ಅದು ಅವರ ದೇಶದ ಆಂತರಿಕ ಸಮಸ್ಯೆಯಾಗಿದೆ ಎನ್ನುತ್ತಾರೆ. ಆದರೆ ಯಾವಾಗ ಇಸ್ರೈಲ್ ಪ್ಯಾಲೆಸ್ಟೈನ್ ಮೇಲೆ ಆಕ್ರಮಣ ಮಾಡುತ್ತದೆಯೋ, ಆಗ ಅದು ಜಾಗತಿಕ ಮಾನವಾಧಿಕಾರದ ಪ್ರಶ್ನೆಯಾಗಿರುತ್ತದೆ ಮತ್ತು ‘ನಾವು ಅವರಿಗೆ ಸಹಾಯ ಮಾಡಬೇಕು’, ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ.

೧ ಊ. ನಮಸ್ಕಾರ ಮತ್ತು ಅಂಧಶ್ರದ್ಧೆ : ಯಾವಾಗ ನಾವು ಸಂತರಿಗೆ ಅಥವಾ ದೇವಸ್ಥಾನದಲ್ಲಿರುವ ದೇವರಿಗೆ ನಮಸ್ಕಾರ ಮಾಡುತ್ತೇವೆಯೋ, ಆಗ ಅವರು ಇದು ಅಂಧಶ್ರದ್ಧೆಯಾಗಿದೆ ಎನ್ನುತ್ತಾರೆ. ಯಾವಾಗ ನಾವು, ‘ಯಾರಾದರೊಬ್ಬ ಮುಖಂಡನ ಮಗ, ಮೊಮ್ಮಗ, ಅಣ್ಣನ ಮಗ, ಅಳಿಯನಾದ ಮಾತ್ರಕ್ಕೆ ಅವನು ಹೇಗೆ ಮುಖಂಡನಾಗುತ್ತಾನೆ ? ಅವನಿಗೆ ಏನೆಂದು ಪರಿಗಣಿಸಿ ಮತಗಳನ್ನು ಹಾಕಬೇಕು ?’, ಎಂದು ಕೇಳುತ್ತೇವೆ ಆಗ ಈ ಮುಖಂಡರು ದೇಶವನ್ನು ಬದಲಾಯಿಸಬಲ್ಲರು, ಎಂದು ನಾವೇಕೆ ನಂಬಬೇಕು ? ಶೇ. ೪೯ ರಷ್ಟು ಮತಗಳನ್ನು ಪಡೆಯುವವನು ಸೋಲುತ್ತಾನೆ ಮತ್ತು ಶೇ. ೫೧ ರಷ್ಟು ಮತಗಳನ್ನು ಪಡೆಯುವವನು ಚುನಾಯಿತನಾಗುತ್ತಾನೆ, ಇದು ಹೇಗೆ ? ಹೀಗಿರುವಾಗ ಇದು ಶೇ. ೪೯ ರಷ್ಟು ಮತ ಪಡೆಯುವವನ ಮೇಲಿನ ಅನ್ಯಾಯವಲ್ಲವೇ ? ‘ಅಲ್ಪಸಂಖ್ಯಾತರನ್ನು ಸಂಭಾಳಿಸಬೇಕಾಗುತ್ತದೆ, ಎಂದು ಹೇಳುವವರು ಶೇ. ೪೯ ರಷ್ಟು ಮತ ಪಡೆದವರನ್ನು ಹೇಗೆ ಸಂಭಾಳಿಸುವರು ?’ ಎಂದು ಕೇಳಿದರೆ ಆಗ ‘ಇದು ಅಂಧಶ್ರದ್ಧೆಯಲ್ಲ’ ಎಂದು ಅವರು ಹೇಳುತ್ತಾರೆ.

೧ ಎ. ಐತಿಹಾಸಿಕ ವಿಷಯ ಮತ್ತು ರಾಜಕಾರಣ : ನಾವು ‘ನೂರಾರು ವರ್ಷಗಳಿಂದ ಮುಸಲ್ಮಾನರಿಂದಾದ ಲೂಟಿ, ಅತ್ಯಾಚಾರ, ಮತಾಂತರ ಮತ್ತು ಬಲವಂತ, ಅದೇ ರೀತಿ ‘ಕಾಶಿಯ ಮಂದಿರವನ್ನು ಮಸೀದಿಯನ್ನಾಗಿಸಲಾಗಿದೆ, ತಾಜಮಹಲ ಶಿವಮಂದಿರವಾಗಿತ್ತು’, ಎನ್ನುವ ವಿಷಯದಲ್ಲಿ ಮಾತನಾಡಿದರೆ, ಆಗ ವಿರೋಧಿಗಳು ‘ಇದು ಹಳೆಯ ವಿಷಯವಾಗಿದೆ. ಇದು ಸರ್ವಧರ್ಮ ಸಮಭಾವದ ‘ಇಂಡಿಯಾ’ ಆಗಿದೆ. ಇತಿಹಾಸದ ನಿರರ್ಥಕ ವಿಷಯವನ್ನು ಕೆದಕಿ ನೀವು ರಾಜಕಾರಣವನ್ನು ಮಾಡಬೇಡಿರಿ’ ಎಂದು ಹೇಳುತ್ತಾರೆ.

ಕೆಲವೊಮ್ಮೆ ಇಸ್ಲಾಮೀ ಆಕ್ರಮಣದ ಮೊದಲು ಆರ್ಯರು ಡ್ರಾವಿಡರ ಮೇಲೆ ಆಕ್ರಮಣ ಮಾಡಿರುವ ಕುರಿತು ಹೇಳಲಾಗುತ್ತದೆ, ಅದರ ಬಗ್ಗೆ ಯಾವುದೇ ದಾಖಲೆಗಳಿಲ್ಲ ಮತ್ತು ಆ ಸಿದ್ಧಾಂತ ಎಷ್ಟರ ಮಟ್ಟಿಗೆ ಸತ್ಯವಾಗಿದೆ ಎನ್ನುವ ಬಗ್ಗೆಯೂ ಸಂಶಯವೂ ಮೂಡುತ್ತದೆ. ಆದಾಗ್ಯೂ ಅನಾರ್ಯ ಅಸ್ಮಿತೆಯನ್ನು ಜೀವಂತವಾಗಿಡಲು ಪ್ರಯತ್ನಿಸಲಾಗುತ್ತಿದೆ. ‘ಆರ್ಯರು ದ್ರಾವಿಡರ ಮೇಲೆ ಆಕ್ರಮಣ ಮಾಡಿದ ಬಗ್ಗೆ ಸಮಾಜದ ಮನಸ್ಸಿನಲ್ಲಿ ಕೀಳರಿಮೆ ಹುಟ್ಟಬೇಕು’, ಎಂದು ಪ್ರಯತ್ನಿಸಲಾಗುತ್ತಿದೆ. ಆಗ ಮಾತ್ರ ಈ ಜನರು ‘ಇತಿಹಾಸವನ್ನು ಬಿಟ್ಟುಬಿಡಿ, ಅದರ ರಾಜಕಾರಣ ಮಾಡಬಾರದು, ಇದು ಹೊಸ ಭಾರತವಾಗಿದೆ’, ಎಂದು ತಪ್ಪಿಯೂ ಹೇಳುವುದಿಲ್ಲ.

೧ ಎ. ಹಿಂದೂ ಮತ್ತು ಇಸ್ಲಾಂ ಧರ್ಮ : ಹಿಂದೂವಿರೋಧಿಗಳು, ‘ಧರ್ಮವು ಅಫೀಮಿನ ಗುಳಿಗೆಯಾಗಿದೆ ಆದುದರಿಂದ ಮಹಿಳೆಯರಿಗೆ ಮಂದಿರದ ಗರ್ಭಗುಡಿಯೊಳಗೆ ಪ್ರವೇಶ ಸಿಗಬೇಕು’, ಎಂದು ಹೇಳುತ್ತಾರೆ. ಆಗ ನಾವು ‘ಮುಸಲ್ಮಾನ ಮಹಿಳೆಯರಿಗೂ ಮಸೀದಿ ಅಥವಾ ದರ್ಗಾಗಳಲ್ಲಿ ಪ್ರವೇಶ ಸಿಗಬೇಕು’ ಎಂದು ಒಗ್ಗಟ್ಟಿನಿಂದ ಚಳುವಳಿ ಮಾಡೋಣ ಎನ್ನುತ್ತೇವೆ. ಆಗ ಅವರು, ‘ನೀವು ಹಿಂದೂಗಳಾಗಿದ್ದೀರಿ. ಆದುದರಿಂದ ನಿಮ್ಮ ಧರ್ಮದಲ್ಲಿರುವ ಅಂಧಶ್ರದ್ಧೆಯನ್ನು ನಿರ್ಮೂಲನೆಗೆ ಮೊದಲು ಪ್ರಯತ್ನಿಸಬೇಕು, ಎನ್ನುತ್ತಾರೆ’. ಇದರ ಅರ್ಥ ಹಿಂದೂಗಳ ಸಂದರ್ಭದಲ್ಲಿ ‘ಧರ್ಮವು ಅಫೀಮಿನ ಗುಳಿಗೆಯಾಗಿದೆ ಮತ್ತು ಇಸ್ಲಾಂ ಸಂದರ್ಭದಲ್ಲಿನ ವಿಷಯ ಬಂದರೆ ದ್ವಿಮುಖ ಭೂಮಿಕೆಯನ್ನು ವಹಿಸಲಾಗುತ್ತದೆ.

೨. ಹಿಂದೂಗಳು ಪ್ರತಿಯೊಂದು ಘಟನೆಯತ್ತ ಹಿಂದೂ ರಾಷ್ಟ್ರದ ದೃಷ್ಟಿಯಿಂದ ನೋಡಲು ಮತ್ತು ಕೃತಿಯನ್ನು ಮಾಡಲು ಕಲಿಯಬೇಕು !

ಇಂತಹ ಅನೇಕ ಉದಾಹರಣೆಗಳನ್ನು ನಾವು ಕೊಡಬಹುದು. ಇದರಲ್ಲಿ ಒಂದೇ ರೀತಿಯ ಪ್ರಕ್ರಿಯೆಯಿದೆ. ಶ್ರೀ ಗಣೇಶಮೂರ್ತಿ ವಿಸರ್ಜನೆ ವಿಷಯ ಬಂದ ಕೂಡಲೇ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿರಲಿ ಅಥವಾ ಎಲ್ಲ ಹಬ್ಬ ಹರಿದಿನಗಳಿರಲಿ, ಅವರಿಗೆ ಜಲ ಮಾಲಿನ್ಯ ಕಾಣಿಸುತ್ತದೆ. ಒಂದು ರೀತಿಯಲ್ಲಿ ಜಗತ್ತಿನ ಎಲ್ಲ ಸ್ಥಳಗಳ ಮಾಲಿನ್ಯಕ್ಕೆ ಹಿಂದೂಗಳು ವರ್ಷದಲ್ಲಿ ಒಂದು ಸಲ ವಿಸರ್ಜಿಸಿರುವ ಕೆಲವು ಟನ್‌ಗಳಷ್ಟು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಎಲೆ-ಪುಷ್ಪಗಳೇ ಜವಾಬ್ದಾರವಾಗಿದೆ ! ಕ್ರೂರ ತಮಾಷೆಯೆಂದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನುಳಿದ ಸಮಯದಲ್ಲಿ ನಿಶ್ಚಿಂತವಾಗಿ ಮಲಗಿರುತ್ತದೆ. ಶ್ರೀ ಗಣೇಶಮೂರ್ತಿ ವಿಸರ್ಜನೆಯ ಹೆಸರಿನಲ್ಲಿ ಧ್ವನಿಯೆತ್ತುವವರು ವರ್ಷವಿಡೀ ಏನೂ ಮಾಡುವುದಿಲ್ಲ; ಆದರೆ ಅವರ ಧ್ವನಿ ದೊಡ್ಡದಾಗಿರುತ್ತದೆ. ನಾವು ಅವರಿಗೆ ಮರುಪ್ರಶ್ನೆ ವಿಚಾರಿಸುವುದಿಲ್ಲ; ಏಕೆಂದರೆ ಹಿಂದೂಗಳಿಗೆ ತಮ್ಮ ಮಿತಿಯನ್ನು ಕಾಪಾಡಿಕೊಳ್ಳುವ ರೂಢಿಯಿದೆ. ಇತರರಂತೆ ಆಕ್ರಮಣ ಮಾಡಿ ಪ್ರದೇಶವನ್ನು ಕಬಳಿಸುವುದಿಲ್ಲ !

ಇಂತಹ ಸಮಯದಲ್ಲಿ ನಾವು (ಹಿಂದೂ) ಗಲಿಬಿಲಿಗೊಳ್ಳುತ್ತೇವೆ; ಏಕೆಂದರೆ ನಾವು ಪ್ರಶ್ನೆಯನ್ನು ಮೆಲುಧ್ವನಿಯಲ್ಲಿ ಕೇಳುತ್ತೇವೆ ಮತ್ತು ಅದರ ಉತ್ತರ ಮಾತ್ರ ಏರುಧ್ವನಿಯಲ್ಲಿ ಅಥವಾ ಒಂದೇ ರಾಗದಲ್ಲಿ ನಾಲ್ಕೂ ದಿಕ್ಕುಗಳಿಂದ ನೀಡಲಾಗುತ್ತದೆ. ಗಲಾಟೆ ಅವರು ಮಾಡುತ್ತಾರೆ. ಆದರೆ ನಾವು ಗಲಿಬಿಲಿಗೊಳ್ಳುತ್ತೇವೆ. ಬಹುತೇಕವಾಗಿ ಸಾಮಾನ್ಯ ಹಿಂದೂವಿನ ಸ್ಥಿತಿ ಅಭಿಮನ್ಯುವಿನಂತಿರಬಹುದು ! ಅವನಿಗೆ ಚಕ್ರವ್ಯೂಹ ಭೇದಿಸುವ ಕಲೆ ತಿಳಿದಿರುವುದಿಲ್ಲ ಮತ್ತು ಎಲ್ಲ ಕಡೆಗಳಿಂದಲೂ ಮಹಾರಥಿಗಳ ಆಕ್ರಮಣಗಳು; ಆದರೆ ಇಂದಲ್ಲ ನಾಳೆ ಈ ಆಕ್ರಮಣಗಳನ್ನು ಮರಳಿಸಿ, ಆ ಜಯದ್ರಥನಿಗೆ ಸೂರ್ಯನು ಕಂಡೇ ಕಾಣುವನು. ಅವನ ತಲೆ ಅವನ ತಂದೆಯ ತೊಡೆಯ ಮೇಲೆ ಹೋಗಿ ಬಿದ್ದೇ ಬೀಳುವುದು ಮತ್ತು ಹತ್ಯೆಯ ಸೇಡನ್ನು ತೀರಿಸಿಕೊಳ್ಳಲಿದೆ. ಹೀಗಿರುವಾಗ ನಾವೇನು ಮಾಡಬೇಕಾಗಿದೆ ?

ಇದನ್ನು ಬದಲಾಯಿಸಲು ಹಿಂದೂಗಳು ಪ್ರತಿಯೊಂದು ಪ್ರಕರಣವನ್ನು ಹಿಂದೂ ರಾಷ್ಟ್ರದ ದೃಷ್ಟಿಯಿಂದ ನೋಡಲು ಮತ್ತು ಕೃತಿಯನ್ನು ಮಾಡಲು ಕಲಿಯಬೇಕು, ಆಗಲೇ ನಾವು ನಿಜವಾದ ಹಿಂದೂ ಆಗುತ್ತೇವೆ !

೩. ಭಯೋತ್ಪಾದನೆ ಮತ್ತು ಅದರ ಘಟಕಗಳು

ಸದ್ಯ ನಮ್ಮ ಕಡೆಗೆ ಬಂದಿರುವ ನಾಸ್ತಿಕವಾದವನ್ನು ವಿದೇಶದಿಂದ ಆಮದು ಮಾಡಲಾಗಿದೆ. ಅನೇಕ ನಾಸ್ತಿಕವಾದಿಗಳ ಲೇಖನದಲ್ಲಿ ಚರ್ಚ್ ಗೆಲಿಲಿಯೋನಿಗೆ ಹೇಗೆ ಮತ್ತು ಏಕೆ ಶಿಕ್ಷೆ ವಿಧಿಸಿತು ? ಇತ್ಯಾದಿ ಅದೇ ಪುನಃ ಪುನಃ ಬರುತ್ತದೆ. ಜಾಗತಿಕ ಸ್ತರದಲ್ಲಿ ಭಯೋತ್ಪಾದನೆಯ ಕುರಿತು ಮಾಡಿರುವ ಸಾಮಾನ್ಯ ವ್ಯಾಖ್ಯಾನ ಇಂದಿಗೂ ಮೇಲುಮೇಲಿನದ್ದಾಗಿದೆ. ಅದರಲ್ಲಿ ಪ್ರಮುಖವಾಗಿ ಕೆಳಗಿನ ವಿಷಯಗಳು ಕಂಡು ಬರುತ್ತವೆ.

ಅ. ಒಂದು ಸಮೂಹದ (ಅದು ಭಾಷೀಯ, ಜಾತೀಯ, ಪ್ರಾದೇಶಿಕ ಅಥವಾ ಧಾರ್ಮಿಕ ಇರಲಿ) ಬೇಡಿಕೆಗಾಗಿ ಸಾವು ನೋವಿನ ಕೃತ್ಯಗಳನ್ನು ಮಾಡುವುದು.

ಆ. ಈ ಕೃತ್ಯಗಳನ್ನು ಮಾಡಿ, ಆ ಸಮೂಹದ ಬೇಡಿಕೆಗಳ ಕುರಿತು ಪ್ರಚಾರ ಪಡೆಯುವುದು.

ಇ. ಈ ಸಾವುನೋವಿನ ಕೃತ್ಯಗಳಲ್ಲಿ ವಿರೋಧಕರು, ತಟಸ್ಥರು ಅಥವಾ ‘ಯಾರೂ’ ಇರಬಹುದು. ರೈಲ್ವೆಯಲ್ಲಿ ಸ್ಫೋಟ ನಡೆಸುವಾಗ ಅಥವಾ ದೇವಸ್ಥಾನಗಳಲ್ಲಿ ಗೋಲಿಬಾರ ಮಾಡುವಾಗ ರೈಲ್ವೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಯಾರ‍್ಯಾರಿದ್ದಾರೆಂದು ನೋಡುವುದಿಲ್ಲ. ಅವರು ಯಾರೆಂದು ಗುಂಪಿನಲ್ಲಿ ಯಾರಿಗೂ ತಿಳಿದಿಲ್ಲ.

ಈ. ಇದರಿಂದ ಭಯದ ವಾತಾವರಣವನ್ನು ಹುಟ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸುವ ಅಥವಾ ಅಂತಹುದೇ ಉದ್ದೇಶವನ್ನು ಸಾಧಿಸಲಾಗುತ್ತದೆ.

೪. ವೈಚಾರಿಕ ಭಯೋತ್ಪಾದನೆಯಿಂದ ಹಿಂದೂ ಧರ್ಮವನ್ನು ರಕ್ಷಿಸಲು ಅವರ ಆಕ್ರಮಣಕಾರಿ ವಿಚಾರದ ಟೊಳ್ಳುತನವನ್ನು ನಿರಂತರ ಬಹಿರಂಗಗೊಳಿಸುವ ಆವಶ್ಯಕತೆ !

ಸೈದ್ಧಾಂತಿಕ ಭಯೋತ್ಪಾದನೆ ಇಂದು ಈ ಪರೀಕ್ಷೆಗಳಿಗೆ ಸರಿಹೊಂದುವುದಿಲ್ಲ; ಏಕೆಂದರೆ ಇದರಲ್ಲಿ ಸಾವು ನೋವು ಇರುವುದಿಲ್ಲ; ಆದರೆ ವಿಶಿಷ್ಟ ಸಮೂಹವು ತಮ್ಮ ಧ್ಯೇಯ, ವಿಚಾರಸರಣಿ ಮತ್ತು ಜೀವನಶೈಲಿಯನ್ನು ಇತರ ಸಮಾಜದವರ ಮೇಲೆ ಹೇರಲು ಪಸರಿಸಿದ ವಿಚಾರವೆಂದರೆ ಸಂಸ್ಕೃತಿ ಮತ್ತು ಮೌಲ್ಯಗಳ ಮೇಲಿನ ಆಕ್ರಮಣವೆನಿಸುತ್ತದೆಯಲ್ಲವೇ ? ಅದರಲ್ಲಿ ಒಬ್ಬ ವ್ಯಕ್ತಿಯ ಮೇಲೆ ಅಲ್ಲ, ಅದು ಆ ಸಮಾಜದ ಮೇಲೆ ಆ ವಿಚಾರವನ್ನು ಹೇರಲು ಸುಳ್ಳು ತತ್ತ್ವಗಳನ್ನು ಉಪಯೋಗಿಸಿ ಮೊದಲು ಆ ಸಮಾಜದ ವಿಚಾರಧಾರೆ ಸಮೃದ್ಧಗೊಳ್ಳಲು ಬಿಡದೇ ಇರುವುದು, ಬಳಿಕ ಆ ವಿಚಾರಧಾರೆಯನ್ನು ಗಾಯಗೊಳಿಸುವುದು ಮತ್ತು ಬಳಿಕ ಅದನ್ನು ನಷ್ಟಗೊಳಿಸಿ ಆ ಸ್ಥಳದಲ್ಲಿ ತಮ್ಮ ವಿಚಾರಧಾರೆಯನ್ನು ಆಕ್ರಮಣ ಮಾಡಿ ಬೆಳೆಸುವುದು. ಒಮ್ಮೆ ಈ ವಿಚಾರಸರಣಿ ಬಿತ್ತಿದರೆ, ಮೊದಲಿನ ವಿಚಾರಸರಣಿಯನ್ನು ನಾಶಗೊಳಿಸಲು ಅಭಿಮಾನ ವ್ಯಕ್ತಪಡಿಸಲಾಗುತ್ತದೆ. ಈ ಪ್ರಕ್ರಿಯೆ ಸಾವುನೋವಿನಷ್ಟೇ ಒತ್ತಾಯಪೂರ್ವಕವಾಗಿ ನಡೆಸುತ್ತಿರಬಹುದಲ್ಲವೇ ?

ಇದನ್ನು ನಮಗೆ ನಿಲ್ಲಿಸಬೇಕಾಗಿದ್ದರೆ, ನಾವೂ ಮಾತನಾಡುತ್ತ ಇರಬೇಕಾಗಿದೆ ‘ಅವರ’ ಪ್ರಶ್ನೆಗಳಲ್ಲಿರುವ ಸತ್ಯಾಂಶವನ್ನು ಬಯಲಿಗೆಳೆಯುವಾಗಲೇ ಅವರ ಸಿದ್ಧಾಂತದಲ್ಲಿರುವ ಮತ್ತು ಕೃತಿಯಲ್ಲಿರುವ ನಿರರ್ಥಕತೆಯನ್ನು ನಾವು ಖಂಡಿಸಬೇಕಾಗಬಹುದು.

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು (ಮೇ ೨೦೨೧)