ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ
ದೇಶಾದ್ಯಂತದ ನ್ಯಾಯಾಲಯಗಳಲ್ಲಿ 3 ಕೋಟಿಗಿಂತಲೂ ಹೆಚ್ಚಿನ ಪ್ರಕರಣಗಳು ಬಾಕಿ ಇವೆ, ಅದನ್ನು ಬಗೆಹರಿಸುವ ಪ್ರಯತ್ನ ಯಾವಾಗ ನಡೆಯುವುದು ?- ಸಂಪಾದಕರು
ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯ ಒಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಬಳಿ ಕ್ಷಮೆ ಯಾಚಿಸಿದೆ. ಆರ್ಥಿಕ ಅಪರಾಧದ ಪ್ರಕರಣದಲ್ಲಿ ಸಹಭಾಗಿಯಾಗಿರುವ ಮಹಿಳೆಯಿಂದ ಮೂರು ಕೋಟಿ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಅರ್ಜಿಯ ಆಲಿಕೆ ನಡೆಸಲು 6 ವರ್ಷದ ಸಮಯ ತೆಗೆದುಕೊಂಡಿರುವ ಮದ್ರಾಸ್ ಉಚ್ಚ ನ್ಯಾಯಾಲಯ ಕ್ಷಮೆ ಯಾಚಿಸಿದೆ. 2015 ರಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಅರ್ಜಿಯನ್ನು ಆದಷ್ಟು ಬೇಗ ಆಲಿಕೆ ನಡೆಸಲು ಹೇಳಿತ್ತು; ಆದರೆ ಮದ್ರಾಸ್ ಉಚ್ಚ ನ್ಯಾಯಾಲಯ ಇದಕ್ಕಾಗಿ ಆರು ವರ್ಷದ ಕಾಲಾವಧಿ ತೆಗೆದುಕೊಂಡಿತ್ತು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ವಿ.ಕಾರ್ತಿಕೇಯನ್ ಇವರು ಈ ಅರ್ಜಿಯನ್ನು ವಜಾಗೊಳಿಸುತ್ತಾ, ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ ಭರವಸೆ ಮತ್ತು ವಿಶ್ವಾಸಕ್ಕೆ ಪಾತ್ರರಾಗಲಿಲ್ಲ ಎಂದು ಹೇಳಿದರು.
“Couldn’t Keep Up The Hope & Trust Of Supreme Court”: Madras High Court Apologises To Supreme Court For Delay In Deciding A Case @ISparshUpadhyay https://t.co/LW6dflbfBn
— Live Law (@LiveLawIndia) November 6, 2021