ಕಳೆದ ವಾರ ಜಗತ್ತಿನ 53 ದೇಶಗಳಲ್ಲಿ ಕೊರೋನಾದ ಹೊಸ ಅಲೆಯ ಅಪಾಯ ! – ವಿಶ್ವ ಆರೋಗ್ಯ ಸಂಘಟನೆ

ನವ ದೆಹಲಿ – ಕೊರೋನಾದ ಹೊಸ ಅಲೆಯ ಅಪಾಯ ಜಗತ್ತಿನಾದ್ಯಂತ 53 ದೇಶಗಳಲ್ಲಿ ನಿರ್ಮಾಣವಾಗಿ ಆ ದೇಶದಲ್ಲಿ ಕೋರೋನಾ ರೋಗಿಗಳ ಸಂಖ್ಯೆ ಎರಡರಷ್ಟು ಹೆಚ್ಚಿದೆ. ಅಂತರಾಷ್ಟ್ರೀಯ ಆರೋಗ್ಯ ಸಂಘಟನೆಯ ಈ ವಿಷಯವಾಗಿ ಎಚ್ಚರಿಕೆ ನೀಡಿದೆ.

ವಿಶ್ವ ಆರೋಗ್ಯ ಸಂಘಟನೆಯ ಪ್ರಾದೇಶಿಕ ಕಾರ್ಯಾಲಯದ ಮುಖ್ಯಸ್ಥ ಡಾ. ಹ್ಯಾನ್ಸ್ ಕ್ಲೂಸ್ ಇವರು ಪತ್ರಕರ್ತರಿಗೆ ಹೇಳುತ್ತಾ, ಯೂರೋಪನಲ್ಲಿ ರೋಗಿಗಳ ಸಂಖ್ಯೆ ಪುನಃ ಹೆಚ್ಚುತ್ತಿದೆ. ಇದು ಹೀಗೆ ಮುಂದುವರಿದರೆ ಫೆಬ್ರುವರಿ ವರೆಗೆ ಇನ್ನು 5 ಲಕ್ಷ ಜನರು ಕೊರೋನಾದಿಂದ ಸಾವನ್ನಪ್ಪುವ ಸಾಧ್ಯತೆಯಿದೆ. ನಾವು ಈ ಮಹಾಮಾರಿಯ ಹೆಚ್ಚುವಿಕೆಯ ಒಂದು ಗಂಭೀರ ಹಂತದಲ್ಲಿದ್ದೇವೆ. ಯುರೋಪ್ ಮತ್ತೊಮ್ಮೆ ಸಾಂಕ್ರಾಮಿಕ ರೋಗದ ಕೇಂದ್ರಸ್ಥಾನವಾಗಿದೆ. ಎಲ್ಲಿ ನಾವು ಒಂದು ವರ್ಷದ ಮೊದಲು ಇದ್ದೇವೆ, ಕೋರೋನಾ ಸಂಸರ್ಗ ತಡೆಯುವುದ್ದಕ್ಕಾಗಿ ಉಪಾಯಗಳು ಯೋಗ್ಯ ಪದ್ಧತಿಯಿಂದ ಮಾಡದೆ ಅದು ಪುನಃ ಹೆಚ್ಚಿದೆ. ಕೆಲವು ಭಾಗದಲ್ಲಿ ಲಸಿಕೆಯ ಪ್ರಮಾಣ ಕಡಿಮೆ ಇರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.