ಹಿಂದೂ ಹಬ್ಬಗಳಲ್ಲಿ ಮಾತ್ರವಲ್ಲದೇ, ಕ್ರೈಸ್ತರ ಹೊಸ ವರ್ಷವೂ ಸಹಿತ ಉಳಿದೆಲ್ಲ ಕಾರ್ಯಕ್ರಮಗಳಲ್ಲಿ ಪಟಾಕಿಗಳನ್ನು ನಿಷೇಧಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ ಕೋಟ್ಯಂತರ ರೂಪಾಯಿ ಪಟಾಕಿ ಸಿಡಿಸುವ ಬದಲು ಆ ಹಣವನ್ನು ಕುಟುಂಬಕ್ಕೆ ಬಳಸಿ !

ಶ್ರೀ. ರಮೇಶ ಶಿಂದೆ

ಪಟಾಕಿಗಳ ಮೇಲಿನ ನಿಷೇಧವನ್ನು ಹಿಂದೂ ಹಬ್ಬಗಳಾದ ದೀಪಾವಳಿ ಇತ್ಯಾದಿಗಳಿಗೆ ಮಾತ್ರವಲ್ಲದೆ ಕ್ರಿಕೆಟ್ ಪಂದ್ಯಗಳು, ‘ಐಪಿಎಲ್’ ಪಂದ್ಯಗಳು, ಚಲನಚಿತ್ರ ತಾರೆಯರ ಕಾರ್ಯಕ್ರಮಗಳು ಮತ್ತು ಕ್ರೈಸ್ತರ ಹೊಸ ವರ್ಷದ ಸಂದರ್ಭದಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮೇಲೆ ನಿಷೇಧ ಹೇರಬೇಕು. ಪಟಾಕಿಯನ್ನು ನಿಷೇಧಿಸುವ ಸಂದರ್ಭದಲ್ಲಿ ಆಡಳಿತಗಾರರು ಹಾಗೂ ನ್ಯಾಯಾಲಯಗಳು ಜಾತಿ-ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂಪೂರ್ಣವಾಗಿ ಅನುಚಿತವಾಗಿದೆ. ಪ್ರಸ್ತುತ ದೇಶದ ಗಡಿಯಲ್ಲಿ ಯುದ್ಧದ ಉದ್ವಿಗ್ನತೆ ಇದೆ. ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿದೆ ಮತ್ತು ಬೆಲೆಯೇರಿಕೆಯೂ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಹಿಂದೂ ಸಮಾಜವೂ ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದಕ್ಕಿಂತ ಅ ಹಣವನ್ನು ಹಬ್ಬಗಳಂದು ಕುಟುಂಬದ ಶ್ರೇಯೋಭಿವೃದ್ಧಿಗೆ ಉಪಯೋಗಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯು ಕಳೆದ ೧೯ ವರ್ಷಗಳಿಂದ ಪಟಾಕಿಗಳಿಂದ ಉಂಟಾಗುವ ಮಾಲಿನ್ಯ ಮತ್ತು ದೇವತೆಗಳ ಚಿತ್ರಗಳನ್ನು ವಿಡಂಬನೆಯನ್ನು ತಡೆಯಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ, ಕರಪತ್ರಗಳನ್ನು ವಿತರಣೆ, ಆಡಳಿತಕ್ಕೆ ಮನವಿ ನೀಡುವುದು, ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವುದು, ಜನಪ್ರಬೋಧನೆಗಾಗಿ ಆನ್‌ಲೈನ್ ಚರ್ಚಾಕೂಟಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ದೇಶಾದ್ಯಂತದ ಅನೇಕ ದೇಶಭಕ್ತ ನಾಗರಿಕರು ಭಾಗವಹಿಸುತ್ತಾರೆ. ಪಟಾಕಿಯ ಹೊದಿಕೆಯ (ಕವರ್) ಮೇಲೆ ಶ್ರೀಲಕ್ಷ್ಮಿ, ಶ್ರೀಕೃಷ್ಣ, ಶ್ರೀವಿಷ್ಣು ಮುಂತಾದ ದೇವತೆಗಳ, ಹಾಗೆಯೇ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಇತರ ರಾಷ್ಟ್ರಪುರುಷರ ಅಥವಾ ಶ್ರದ್ಧಾಸ್ಥಾನಗಳ ಚಿತ್ರಗಳನ್ನು ಮುದ್ರಿಸಿದ್ದರಿಂದ ಅವರ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ವಿಡಂಬನೆಯಾಗುತ್ತದೆ. ದೀಪಾವಳಿಯಂದು ನಾವು ಪೂಜಿಸುವ ಶ್ರೀ ಲಕ್ಷ್ಮೀ ಮಾತೆಯ ಚಿತ್ರವಿರುವ ‘ಲಕ್ಷ್ಮೀ ಬಾಂಬ್’ ಅನ್ನು ಸಿಡಿಸಿ ಆ ಚಿತ್ರವನ್ನು ಚಿಂದಿಯಾಗಿಸುವುದು ಇದು ಶ್ರೀ ಲಕ್ಷ್ಮೀದೇವಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಇದರಿಂದ ಶ್ರೀ ಲಕ್ಷ್ಮೀದೇವಿಯ ಕೃಪೆ ಎಂದಾದರೂ ಸಿಗುತ್ತದೆಯೇ ? ಎಂದು ಹಿಂದೂಗಳು ಯೋಚಿಸಬೇಕು. ಇದಲ್ಲದೇ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಪಟಾಕಿಗಳು ಬೃಹತ್ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲಿ ಗಳಿಸಿದ ಹಣವನ್ನು ಚೀನಾ ಗಡಿಯಲ್ಲಿ ಭಾರತದ ವಿರುದ್ಧ ಬಳಸುತ್ತಿದೆ. ಆದ್ದರಿಂದ ಶತ್ರು ರಾಷ್ಟ್ರಕ್ಕೆ ನೆರವಾಗುವ ಯಾವುದೇ ಕ್ರಮವನ್ನು ದೇಶವಾಸಿಗಳು ತಡೆಗಟ್ಟಬೇಕು.