ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಮುಸಲ್ಮಾನರಿಂದ ನಡೆದಿರುವ ಹಲ್ಲೆಯ ಬಗ್ಗೆ ಬರೆದಿದ್ದರಿಂದ ಫೇಸ್‍ಬುಕ್‍ನಿಂದ ನನ್ನ ಖಾತೆಯನ್ನು 7 ದಿನಗಳ ಕಾಲ ಬಂದ್ ಮಾಡಿದೆ ! – ಲೇಖಕಿ ತಸ್ಲೀಮಾ ನಸ್ರೀನ್

* ಫೇಸ್‍ಬುಕ್‍ನ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮ ತಿಳಿದುಕೊಳ್ಳಿ ! ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಯಾರಾದರೂ ಬಹಿರಂಗವಾಹಿ ಹೇಳಿದರೆ ಅಥವಾ ಅದನ್ನು ವಿರೋಧಿಸಿದರೆ, ಆಗ ಫೇಸ್‍ಬುಕ್‍ಗೆ ಏಕೆ ತೊಂದರೆಯಾಗುತ್ತದೆ ? ‘ಫೇಸಬುಕ್ ಕೂಡ ಮತಾಂಧರಿಗೆ ಸಮರ್ಥನೆ ನೀಡುತ್ತಿದೆ ಮತ್ತು ಹಿಂದೂಗಳ ಮೇಲೆ ನಡೆಯುವ ದಾಳಿಯು ಅದಕ್ಕೆ ಯೋಗ್ಯ ಎನಿಸುತ್ತದೆ’ ಎಂದು ಹಿಂದೂಗಳು ತಿಳಿದುಕೊಳ್ಳಬೇಕೇ ?- ಸಂಪಾದಕರು 

* ಹಿಂದೂಗಳು ಫೇಸಬುಕ್‍ಅನ್ನು ನಿಷೇಧಿಸಿ ತಸ್ಲೀಮಾ ನಸ್ರೀನ್ ಅವರ ಖಾತೆ ಮತ್ತೆ ಆರಂಭಿಸಲು ಅವರ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !- ಸಂಪಾದಕರು 

ಲೇಖಕಿ ತಸ್ಲೀಮಾ ನಸ್ರೀನ್

ನವ ದೆಹಲಿ – ಬಾಂಗ್ಲಾದೇಶದಿಂದ ಸ್ಥಳಾಂತರಗೊಂಡಿರುವ ಲೇಖಕಿ ತಸ್ಲೀಮಾ ನಸ್ರೀನ್ ಇವರ ಫೇಸ್‍ಬುಕ್ ಖಾತೆಯನ್ನು ಏಳು ದಿನಕ್ಕಾಗಿ ಬಂದ್ ಮಾಡಲಾಗಿದೆ. ಸ್ವತಃ ತಸ್ಲೀಮಾ ಇವರು ಟ್ವೀಟ್ ಮಾಡಿ ಈ ವಿಷಯದ ಮಾಹಿತಿ ನೀಡಿದ್ದಾರೆ. ‘ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆಯುವ ದಾಳಿಯ ವಿರೋಧದಲ್ಲಿ ನಾನು ಬರೆದು ಸತ್ಯ ಹೇಳಿದ್ದಕ್ಕೆ ನನ್ನ ಫೇಸಬುಕ್ ಖಾತೆಯನ್ನು ಏಳು ದಿನಗಳ ಕಾಲ ಬಂದ್ ಮಾಡಲಾಗಿದೆ’, ಎಂದು ತಸ್ಲಿಮಾ ಅವರು ಹೇಳಿದ್ದಾರೆ. (ಯಾವಾಗಲೂ ಅಭಿವ್ಯಕ್ತಿಸ್ವಾತಂತ್ರದ ಕಗ್ಗೊಲೆ ಆಗುತ್ತಿದೆ ಎಂದು ಕೂಗಾಡುವವರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ? – ಸಂಪಾದಕರು)