ಫ್ರಾನ್ಸ್ ನಲ್ಲಿ ಜಿಹಾದಿಗೆ ಪ್ರೋತ್ಸಾಹ ನೀಡುವ ಮಸೀದಿ ಆರು ತಿಂಗಳುಗಳ ಕಾಲ ಮುಚ್ಚಲಾಗಿದೆ

ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿರುವಾಗ, ಈ ರೀತಿಯ ಕ್ರಮವನ್ನು ಎಂದಿಗೂ ಕೈಗೊಂಡಿಲ್ಲ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು

ಪ್ಯಾರಿಸ್ (ಫ್ರಾನ್ಸ್) – ಉಗ್ರರ ಆಕ್ರಮಣಗಳನ್ನು ಸಮರ್ಥಿಸುವುದು ಮತ್ತು ಕಟ್ಟರವಾದಿಗಳಿಗೆ ಆಶ್ರಯ ನೀಡುವುದು, ಈ ಕೃತ್ಯಕ್ಕಾಗಿ ಫ್ರಾನ್ಸ್ ನಲ್ಲಿನ ಒಂದು ಮಸೀದಿಯನ್ನು ಹಾಗೂ ಈ ಮಸೀದಿಯ ಮೂಲಕ ನಡೆಸಲಾಗುವ ಇಸ್ಲಾಮಿ ಶಾಲೆಗಳನ್ನು ಆರು ತಿಂಗಳ ಕಾಲ ಮುಚ್ಚಲಾಗಿದೆ. ಫ್ರಾನ್ಸ್ ನ ಗೃಹಸಚಿವ ಗೆರಾಲ್ಡ್ ಡಾರಮೇನಿನ ಇವರು ಈ ಮಾಹಿತಿ ನೀಡಿದರು. ಮಸೀದಿಯ ಆಡಳಿತದವರ ಬ್ಯಾಂಕ್ ಖಾತೆಗಳ ಮೇಲೆ ಮುಟ್ಟುಗೋಲು ಹಾಕಲಾಗಿದೆ. ಶಾಲೆಯಿಂದ ಸಶಸ್ತ್ರ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿದ್ದರು, ಎಂದು ಹೇಳಲಾಗುತ್ತಿದೆ.

ಈ ಮಸೀದಿಯಿಂದ ಫ್ರಾನ್ಸ್, ಕ್ರೈಸ್ತ, ಜ್ಯು ಮುಂತಾದವರ ವಿರುದ್ಧ ದ್ವೇಷ ಹಬ್ಬಿಸಲಾಗುತ್ತಿತ್ತು ಹಾಗೂ ಫ್ರಾನ್ಸ್ ನಲ್ಲಿ ಶರಿಯತ್ ಸ್ಥಾಪನೆ ಮಾಡಲು ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗುತ್ತಿತ್ತು, ಈ ವರ್ಷದ ಕೊನೆಯ ವರೆಗೂ ಇತರ 7 ಧಾರ್ಮಿಕ ಸ್ಥಳಗಳನ್ನು ಮುಚ್ಚುವ ಕಾರ್ಯಾಚರಣೆಯ ನಡೆಯುತ್ತಿದೆ, ಎಂದು ಫ್ರಾನ್ಸ್ ಅಂತರ್ಗತ ಮಂತ್ರಿ ಹೇಳಿದ್ದಾರೆ.