‘ಹಿಂದೂಗಳೇ, ಹದ್ದುಬಸ್ತಿನಲ್ಲಿರಿ ಅಖಿಲೇಶ ಯಾದವ್ (ಚುನಾವಣೆಯಲ್ಲಿ) ಗೆದ್ದು ಬರಲಿ, ಎಲ್ಲರೂ ಒಳಗೆ (ಸೆರೆಮನೆಗೆ) ಹೋಗುತ್ತೀರಿ !’ (ಅಂತೆ)

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅದನಾನ್ ಖಾನ್‍ರಿಂದ ಹಿಂದೂಗಳಿಗೆ ಬೆದರಿಕೆ

‘ನಿಮ್ಮ ಸ್ತ್ರೀಯರು ನಮ್ಮ ‘ಹರಮ್’ನ (ಜಾನಾನಖಾನಾದ) ಭಾಗವಾಗಿದ್ದರು, ದಾಸಿಗಳಾಗಿದ್ದರು !’, ಎಂದೂ ಅಕ್ಷೇಪಾರ್ಹ ಹಾಗೂ ವಾಸನಾಂಧ ಹೇಳಿಕೆ !

ಹಿಂದೂಗಳು ಸಂಘಟಿತ ಇಲ್ಲದ್ದರಿಂದ ಮತಾಂಧ ಮುಖಂಡರು ಹಿಂದೂಗಳಿಗೆ ಈ ರೀತಿ ಬೆದರಿಕೆಯೊಡ್ಡಲು ಧೈರ್ಯ ಮಾಡುತ್ತಾರೆ. ಇಂದು ಬೆದರಿಕೆಯೊಡ್ಡುವವರು ನಾಳೆ ನಿಮ್ಮನ್ನು ಬೇರು ಸಮೇತ ಕಿತ್ತೊಗೆಯುವರು, ಎಂಬುದನ್ನು ಗಮನದಲ್ಲಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಈಗಲೇ ಪ್ರಯತ್ನಿಸಿ ! – ಸಂಪಾದಕರು

ಲಕ್ಷ್ಮಣಪುರಿ – ಸಮಾಜವಾದಿ ಪಕ್ಷದ ಉತ್ತರಪ್ರದೇಶದ ಯುವ ಶಾಖೆಯ ಮುಖಂಡ ಅದನಾನ ಖಾನರವರ ಒಂದು ಆಕ್ಷೇಪಾರ್ಹ ‘ಪೋಸ್ಟ್’ ಫೇಸ್‍ಬುಕ್‍ನಲ್ಲಿ ಪ್ರಸಾರವಾಗಿದೆ. ಅದರಲ್ಲಿ ಅವರು ‘ಹಿಂದೂಗಳು ಹದ್ದುಬಸ್ತಿನಲ್ಲಿರಿ ಇಲ್ಲದಿದ್ದರೆ ಅಖಿಲೇಶ ಯಾದವರವರು ಅಧಿಕಾರಕ್ಕೆ ಬಂದ ಮೇಲೆ (ನೀವು) ಎಲ್ಲರೂ ಒಳಗೆ (ಸೆರೆಮನೆಗೆ) ಹೋಗುತ್ತೀರಿ. ಆಗ ಯೋಗಿ (ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ)ಯವರು ಘಂಟೆ ಬಾರಿಸುತ್ತಿರುವರು. ಸಮಾಜವಾದ ಜಿಂದಾಬಾದ, ಅಖಿಲೇಶ ಯಾದವ ಜಿಂದಾಬಾದ !’, ಎಂದು ಬೆದರಿಕೆಯೊಡ್ಡಿದ್ದಾರೆ. ಅದೇ ರೀತಿ ‘ಹಿಂದೂ ಸ್ತ್ರೀಯರು ನಮ್ಮ ‘ಹರಮ್’ನ (ಜನಾನಖಾನೆಯ) ಒಂದು ಭಾಗವಾಗಿದ್ದರು, ದಾಸಿಗಳಾಗಿದ್ದರು. ಪ್ರಾಣಿಗಳನ್ನು ಪೂಜೆ ಮಾಡುವವರು ಪ್ರಾಣಿಗಳೇ ಆಗಿರುತ್ತಾರೆ’, ಎಂದು ಅವಾಚ್ಯವಾಗಿ ಹಿಂದೂ ಮಹಿಳೆಯರನ್ನು ಹಾಗೂ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಈ ಪ್ರಕರಣದಲ್ಲಿ ಉತ್ತರಪ್ರದೇಶ ಪೊಲೀಸರು ಅದನಾನ ಖಾನ್ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಬಂಧಿಸಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ ಯಾದವರವರ ನಿಕಟವರ್ತಿಯಾಗಿರುವ ಅದನಾನ ಖಾನ ಸಮಾಜವಾದಿ ಪಕ್ಷದ ಟಾಂಡಾ ವಿಧಾನಸಭೆ ಕ್ಷೇತ್ರದಲ್ಲಿ ಯುವ ಶಾಖೆಯ ಅಧ್ಯಕ್ಷನಾಗಿದ್ದಾರೆ. (ಅಖಿಲೇಶ ಯಾದವರವರು ಈ ಪ್ರಕರಣದಲ್ಲಿ ಮೌನವಾಗಿರುವುದು ಅವರಲ್ಲಿರುವ ಹಿಂದೂದ್ರೋಹವು ಸ್ಪಷ್ಟ ಪಡಿಸುತ್ತದೆ ! – ಸಂಪಾದಕರು)

ಪ್ರಕರಣ ಮೈಮೇಲೆ ಬಂದನಂತರ ಅದನಾನ ಖಾನನಿಂದ ಜಾರಿಕೊಳ್ಳಲು ಪ್ರಯತ್ನ !

ಪ್ರಕರಣ ಮೈ ಮೇಲೆ ಬರುತ್ತಿರುವುದು ತಿಳಿದ ತಕ್ಷಣ ಅದನಾನ ಇವರು ಈ ‘ಪೋಸ್ಟ್’ ಬರೆದಿರುವುದನ್ನು ನಿರಾಕರಿಸಿದರು. ಈ ಬಗ್ಗೆ ಅವರು ಪೊಲೀಸರಿಗೆ, ‘ನನ್ನ ‘ಫೇಸ್‍ಬುಕ್’ ಖಾತೆ ‘ಹ್ಯಾಕ್’ ಆಗಿತ್ತು (ಬೇರೆಯವರು ನಿಯಂತ್ರಣ ಪಡೆದುಕೊಂಡಿದ್ದರು). ಬೇರೆಯವರು ನನ್ನ ಖಾತೆಯನ್ನು ಬಳಸಿಕೊಂಡು ಈ ರೀತಿ ಅಕ್ಷೇಪಾರ್ಹ ಪೋಸ್ಟ್ ಅನ್ನು ಪ್ರಸಾರ ಮಾಡಿದ್ದಾರೆ. ತೊಂದರೆಯಾದ ಬಗ್ಗೆ ನನಗೆ ಸಂತಾಪವಿದೆ. ಇನ್ನು ಮುಂದೆ ಆ ರೀತಿ ಆಗುವುದಿಲ್ಲ”ಎಂದು ಹೇಳಿದರು. (ಹಾಸ್ಯಾಸ್ಪದ ಸ್ಪಷ್ಟೀಕರಣ ನೀಡಿ ಜಾರಿಕೊಳ್ಳುವ ಹಿಂದೂದ್ವೇಷಿ ಅದನಾನ ಖಾನ್ ! – ಸಂಪಾದಕರು)