ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಗಳ ಮುಖ್ಯ ಸೂತ್ರಧಾರನ ಸಹಿತ 683 ಜನರ ಬಂಧನ

ಇಂತಹವರಿಗೆ ಕಠಿಣ ಶಿಕ್ಷೆಯಾಗಲು ಭಾರತವು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ಹೇರಬೇಕು !- ಸಂಪಾದಕರು 

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಮಯದಲ್ಲಿ ಮತಾಂಧರಿಂದ ಹಿಂದೂಗಳ ಮೇಲಾದ ದಾಳಿಗೆ ಸಂಬಂಧಿಸಿದಂತೆ ಈವರೆಗೆ 683 ಜನರನ್ನು ಬಂಧಿಸಲಾಗಿದೆ. ಪೊಲೀಸರು ಗೌಪ್ಯ ಮಾಹಿತಿಯ ಆಧಾರದ ಮೇಲೆ ಮಾಮುನ ಮಂಡಲನನ್ನು ಬಂಧಿಸಿದರು. ಆರೋಪಿ ಮಾಮುನ ಮಂಡಲ ‘ಇಸ್ಲಾಮಿ ವಿದ್ಯಾರ್ಥಿ ಶಿಬಿರ’ ಈ ಸಂಘಟನೆಯ ಕಾರ್ಯಕರ್ತನಾಗಿದ್ದಾನೆ. ಈ ಸಂಘಟನೆ ಜಮಾತೆ-ಎ-ಇಸ್ಲಾಮಿ ಈ ಕಟ್ಟರ ಸಂಘಟನೆಯ ಶಾಖೆಯಾಗಿದೆ. ಹಾಗೂ ಸ್ಥಳಿಯ ಮೌಲ್ವಿ ಉಮರ ಫಾರೂಕ್‍ನನ್ನೂ ಬಂಧಿಸಿದ್ದಾರೆ. ಈ ಮೊದಲು ಪೊಲೀಸರು ಮುಖ್ಯ ಸೂತ್ರಧಾರ ಶೌಕತ್ ಮಂಡಲನನ್ನು ಬಂಧಿಸಿದ್ದರು. ಆತ ನ್ಯಾಯಾಲಯದಲ್ಲಿ ಗಲಭೆಗೆ ಪ್ರಚೋದಿಸಿರುವುದನ್ನು ಒಪ್ಪಿಕೊಂಡಿದ್ದಾನೆ.

ಪೀರಗಂಜ ಪೊಲೀಸ್ ಠಾಣೆ ಉಸ್ತುವಾರಿ ಸುರೇಶಚಂದ್ರ ಇವರು, ಆರೋಪಿ ಮಾಮುನನು ಪೆಟ್ರೋಲ್ ಹಾಕಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಿದ್ದನು ಎಂದು ಹೇಳಿದ್ದಾರೆ. ನೋವಾಖಾಲಿಯಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಪೊಲೀಸರು ‘ಬಾಂಗ್ಲಾದೇಶ ನ್ಯಾಷನಲಿಸ್ಟ ಪಕ್ಷ’ದ ಓರ್ವ ನಾಯಕನ ಸಹಿತ 11 ಜನರನ್ನು ಬಂಧಿಸಿದ್ದೇವೆ.