ರಷ್ಯಾದಲ್ಲಿ ಒಂದೇ ದಿನ 35 ಸಾವಿರದ 660 ಕೊರೋನಾ ಸೋಂಕಿತರು ಪತ್ತೆ !

ಮಾಸ್ಕೋ (ರಷ್ಯಾ) – ರಷ್ಯಾದಲ್ಲಿ ಒಂದೇ ದಿನದಲ್ಲಿ 85 ಕಡೆಗಳಲ್ಲಿ 35 ಸಾವಿರದ 660 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ, ಎಂದು ರಷ್ಯಾದ ಆಡಳಿತಗಾರರು ತಿಳಿಸಿದ್ದಾರೆ. ರಷ್ಯಾದಲ್ಲಿ ರೋಗಿಗಳ ಸಂಖ್ಯೆ ಶೇ. 0.43 ರಷ್ಟು ಹೆಚ್ಚಾಗಿದೆ. ಮಾಸ್ಕೋದಲ್ಲಿ ಅತಿಹೆಚ್ಚು 5 ಸಾವಿರದ 279 ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದಾರೆ.

ಕೊರೋನಾದಿಂದಾಗಿ ರಷ್ಯಾದಲ್ಲಿ ದಿನವಿಡಿ 1 ಸಾವಿರದ 72 ಜನರ ಮೃತ್ಯುವಾಗಿದೆ. ರಷ್ಯಾದಲ್ಲಿ ಇಲ್ಲಿಯವರೆಗೆ 2 ಲಕ್ಷದ 30 ಸಾವಿರದ 600 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.