ಪಂಜಾಬ ಸಹಿತ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಅನೇಕ ಜಿಲ್ಲೆಗಳ ಸೇರ್ಪಡೆ
ವಾಷಿಂಗ್ಟನ(ಅಮೇರಿಕ) – ಅಮೇರಿಕಾದಲ್ಲಿನ ‘ಸಿಕ್ಖ್ ಫಾರ್ ಜಸ್ಟಿಸ್’ ಹೆಸರಿನ ನಿಷೇಧಿತ ಖಲಿಸ್ತಾನಿವಾದಿ ಸಂಘಟನೆಯು ಖಲಿಸ್ತಾನಿ ರಾಷ್ಟ್ರದ ಭೂಪಟವನ್ನು ಪ್ರಕಟಿಸಿದೆ. ಇದರಲ್ಲಿ ಪಂಜಾಬ್ ಅಷ್ಟೇ ಅಲ್ಲದೆ, ಹರಿಯಾಣ, ಹಿಮಾಚಲಪ್ರದೇಶ, ಉತ್ತರಪ್ರದೇಶ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿನ ಅನೇಕ ಜಿಲ್ಲೆಗಳು ಖಲಿಸ್ತಾನದ ಭಾಗವಾಗಿದೆ ಎಂದು ತೋರಿಸಲಾಗಿದೆ. ಕುಖ್ಯಾತ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಈ ಸಂಘಟನೆಯ ಮುಖ್ಯಸ್ಥನಾಗಿದ್ದಾರೆ. ‘ಖಲಿಸ್ತಾನ’ ಸ್ಥಾಪನೆಯ ಬೇಡಿಕೆಗಾಗಿ 2019 ರಲ್ಲಿ `ಸ್ವತಂತ್ರ ಪಂಜಾಬ ಜನಮತ ಸಂಗ್ರಹ ಅಭಿಯಾನ’ ಆರಂಭಿಸಿದ ನಂತರ ಈ ಸಂಘಟನೆಯ ಮೇಲೆ ಭಾರತವು ನಿರ್ಬಂಧ ಹೇರಿತ್ತು. ಭೂಪಟವನ್ನು ಪ್ರಕಾಶನ ಮಾಡಿ ಈ ಸಂಘಟನೆಯು, ಸದ್ಯದಲ್ಲೇ ಭಾರತದ ಈ ಭಾಗಗಳ ಮೇಲೆ ನಿಯಂತ್ರಣ ಪಡೆದು ಖಲಿಸ್ತಾನವನ್ನು ಸ್ಥಾಪಿಸಲಾಗುವುದು ಎಂದು ಹೇಳಿಕೊಂಡಿದೆ.
‘Where the sun don’t shine’: Terrorist organisation Sikhs For Justice (SFJ) releases a new map of ‘Khalistan’, gets mockedhttps://t.co/st0pf83ObN
— OpIndia.com (@OpIndia_com) October 23, 2021