ಬಾಂಗ್ಲಾದೇಶದಲ್ಲಿ ಕಳೆದ 40 ವರ್ಷಗಳಲ್ಲಿ, ಹಿಂದೂಗಳ ಜನಸಂಖ್ಯೆಯಲ್ಲಿ ಶೇ. 5 ರಷ್ಟು ಇಳಿಕೆ !

ತಥಾಕಥಿತ ಜಾತ್ಯತೀತ ಆಡಳಿತಾರೂಢ ಅವಾಮಿ ಲೀಗ್ ರಾಜ್ಯದಲ್ಲಿ ಹಿಂದೂಗಳು ಅಸುರಕ್ಷಿತ !

ಕಳೆದ 4 ದಶಕಗಳಿಂದ ಈ ಬಗ್ಗೆ ಗಮನ ಹರಿಸದ ಭಾರತದ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ ! ಈಗಲಾದರೂ ಸರಕಾರವು ಬಾಂಗ್ಲಾದೇಶದಲ್ಲಿ ಹಿಂದುಗಳಿಗಾಗಿ ಏನಾದರೂ ಮಾಡುವುದೇನು ? ಎಂಬ ಪ್ರಶ್ನೆಯು ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ ! – ಸಂಪಾದಕರು

ಪ್ರತಿನಿಧಿಕ ಛಾಯಾಚಿತ್ರ

ನವದೆಹಲಿ : ಕಳೆದ 40 ವರ್ಷಗಳಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂ ಜನಸಂಖ್ಯೆಯು ಶೇ. 13 ರಿಂದ ಶೇ. 5 ರಷ್ಟು ಕಡಿಮೆಯಾಗಿ ಈಗ ಶೇ. 8.5 ಉಳಿದಿದೆ. ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶಿ ಹಿಂದೂಗಳು ಭಾರತಕ್ಕೆ ಪಲಾಯನ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಶೇಖ್ ಹಸೀನಾ ತನ್ನನ್ನು ‘ಜಾತ್ಯತೀತ’ ಎಂದು ಗುರುತಿಸಿಕೊಳ್ಳುವ ಮೂಲಕ ಹಿಂದೂಗಳನ್ನು ರಕ್ಷಿಸುವ ಭರವಸೆ ನೀಡುತ್ತಾ ಇರುತ್ತಾರೆ; ಆದರೆ ಸದ್ಯದ ಹಿಂದೂಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ. ಮೊದಲಿನಿಂದಲೂ ಸಾಂಪ್ರದಾಯಿಕ ಹಿಂದೂ ಮತದಾರರು ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿರುವ ಅವಾಮಿ ಲೀಗ್‍ನ ಬೆಂಬಲಿಗರಾಗಿದ್ದಾರೆ. ಹಾಗಿದ್ದರೂ, 2009 ರಿಂದ ಅವಾಮಿ ಲೀಗ್ ಅಧಿಕಾರದಲ್ಲಿದ್ದರೂ, ನಿರಂತರವಾಗಿ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ.

ಸಾಮಾಜಿಕ ಮಾಧ್ಯಮದಿಂದ ಇಸ್ಲಾಮಿಕ್ ವಿರೋಧಿ ಪೋಸ್ಟ್‍ಗಳನ್ನು ಮಾಡಿ ಅದರ ಆರೋಪವನ್ನು ಹಿಂದೂಗಳ ಮೇಲೆ ಹೇರಿ ದಾಳಿ ಮಾಡುವ ಸಂಚು !

ಬಾಂಗ್ಲಾದೇಶದ ಗಣಸಮಿತಿ ಆಂದೋಲನದ ಜುನೈದ್ ಸಾಕಿ ಅವರು, ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ಅಲ್ಪಸಂಖ್ಯಾತರನ್ನು ಅದರಲ್ಲಿಯೂ ಹಿಂದೂಗಳಿಗೆ ರಕ್ಷಣೆ ನೀಡುವ ಬಗ್ಗೆ ಕೊಚ್ಚಿಕೊಳ್ಳುತ್ತದೆ; ಆದರೆ ವಾಸ್ತವದಲ್ಲಿ, ಇಂತಹ ಚಿತ್ರಣವು ದೇಶದಲ್ಲಿ ಕಾಣುವುದಿಲ್ಲ. ಹಿಂದೂಗಳ ಮೇಲೆ ದಾಳಿ ಮಾಡುವ ವಿಶಿಷ್ಟ ಪದ್ದತಿ ಕಂಡು ಬರುತ್ತಿವೆ. ಕೆಲವು ಸಾಹಿತ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿ ಅವುಗಳನ್ನು ಇಸ್ಲಾಮಿಕ್ ವಿರೋಧಿ ಎಂದು ಪರಿಗಣಿಸಲಾಗುತ್ತದೆ. ಅದರ ನಂತರ, ಕಟ್ಟರವಾದಿ ಗುಂಪುಗಳು ಹಿಂದೂಗಳ ಮೇಲೆ ದಾಳಿ ಮಾಡಲು ಆದೇಶಿಸುತ್ತವೆ ಮತ್ತು ಅದರ ನಂತರ ದಾಳಿಗಳನ್ನು ನಡೆಸಲಾಗುತ್ತದೆ. ಈ ವಿಚಾರ ಈಗ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಗಮನಕ್ಕೂ ಬಂದಿದೆ. ರಾಜಕೀಯ ಮಟ್ಟದಲ್ಲಿ ಹಿಂದೂಗಳನ್ನು ಉಪೇಕ್ಷಿಸಲಾಗುತ್ತಿದೆ.

ಅಪರಾಧ ದಾಖಲಿಸಿದ ನಂತರವೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ !

‘ಬಾಂಗ್ಲಾದೇಶ ಹಿಂದೂ, ಬುದ್ಧಿಸ್ಟ್ ಕ್ರೈಸ್ತ ಯೂನಿಟಿ ಕೌನ್ಸಿಲ್’ ಎಂಬ ಬಾಂಗ್ಲಾದೇಶಿ ಅಲ್ಪಸಂಖ್ಯಾತ ಸಂಘಟನೆಯ ರಾಣಾ ದಾಸ್‍ಗುಪ್ತಾರವರು ಮಾತನಾಡಿ, ಪಲಾಯನದಿಂದ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ನಂತರ ಅಪರಾಧಗಳು ದಾಖಲಾಗುತ್ತಿರಲಿಲ್ಲ. ಸರಕಾರದಿಂದ ಕೇವಲ ದೂರು ನೊಂದಾಯಿಸುವ ಆದೇಶ ನೀಡಲಾಗುತ್ತಿತ್ತು. ಈಗ ಅವಾಮಿ ಲೀಗ್ ಸರಕಾರದ ಕಾಲದಲ್ಲಿ ದೂರುಗಳು ದಾಖಲಾಗುತ್ತಿವೆ; ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಹೇಳಿದರು.