ಫರ್ರೂಖಾಬಾದ (ಉತ್ತರಪ್ರದೇಶ)ನಲ್ಲಿನ ಶ್ರೀ ಬಿಸಾರಿ ದೇವಿಯ ದೇವಸ್ಥಾನದ ಧ್ವಂಸಗೈದ ಬೌದ್ಧರು

ಕೇಸರಿ ಧ್ವಜ ತೆಗೆದು ಪಂಚಶೀಲ ಧ್ವಜ ಹಾರಾಡಿಸಲಾಗಿದೆ !

ದೇವಾಲಯಕ್ಕಾದ ನಷ್ಟ ಪರಿಹಾರ ಕೊಡುವುದಾಗಿ ಉಪಜಿಲ್ಲಾಧಿಕಾರಿಗಳಿಂದ ಲಿಖಿತ ಆಶ್ವಾಸನೆ

* ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಹಿಂದೂಗಳ ದೇವಾಲಯಗಳಲ್ಲಿ ಈ ರೀತಿಯ ಧ್ವಂಸ ಆಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಜರುಗಿಸ ಬೇಕು !- ಸಂಪಾದಕರು

* ‘ಬೌದ್ಧ ಎಂದರೆ ಶಾಂತಿಯ ಧರ್ಮ’ ಎಂದು ಹೇಳಲಾಗುತ್ತದೆ; ಆದರೆ ಈ ಘಟನೆಯನ್ನು ನೋಡಿದಾಗ, ಅದು ತಪ್ಪಾಗಿದೆ, ಎಂದು ತಿಳಿದುಕೊಳ್ಳಬೇಕೆ ? – ಸಂಪಾದಕರು

ಬೌದ್ಧ ಧರ್ಮದ ಕೆಲವರು ಶ್ರೀ ಬಿಸಾರಿ ದೇವೀಯ ದೇವಾಲಯದ ಮೇಲೆ ಹಾರಿಸಿದ್ದ ಕೇಸರಿ ಧ್ವಜವನ್ನು ತೆಗೆದು ಅಲ್ಲಿ ಪಂಚಶೀಲ ಧ್ವಜವನ್ನು ಹಾರಿಸುತ್ತಿರುವುದು .

ಫರ್ರೂಖಾಬಾದ (ಉತ್ತರಪ್ರದೇಶ) – ಇಲ್ಲಿನ ಸಂಕಿಸಾ ಬೌದ್ಧ ತೀರ್ಥಕ್ಷೇತ್ರದಲ್ಲಿರುವ ಶ್ರೀ ಬಿಸಾರಿ ದೇವೀಯ ದೇವಾಲಯವನ್ನು ಬೌದ್ಧ ಧರ್ಮದ ಕೆಲವರು ಧ್ವಂಸ ಮಾಡಿ ದೇವಾಲಯದ ಮೇಲೆ ಹಾರಿಸಿದ್ದ ಕೇಸರಿ ಧ್ವಜವನ್ನು ತೆಗೆದು ಅಲ್ಲಿ ಪಂಚಶೀಲ ಧ್ವಜವನ್ನು ಹಾರಿಸಿದ್ದಾರೆ. ಆದ್ದರಿಂದ ಅಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಗಿದ್ದು ಕಲ್ಲುತೂರಾಟದ ಘಟನೆ ನಡೆಯಿತು. ಅದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅಕ್ಟೋಬರ 20 ನಡೆದ ಧಮ್ಮ ಯಾತ್ರೆಯ ಸಮಯದಲ್ಲಿ ಈ ಘಟನೆಯಾಗಿದೆ. ಈ ಘಟನೆಯ ಬಳಿಕ ಪೊಲೀಸು ಅಧೀಕ್ಷಕರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಉಪಜಿಲ್ಲಾಧಿಕಾರಿಗಳು `ದೇವಸ್ಥಾನಕ್ಕೆ ಆದ ಹಾನಿಯನ್ನು ತುಂಬಿಸಿಕೊಡಲಾಗುವುದು’, ಎಂದು ಲಿಖಿತ ಆಶ್ವಾಸನೆ ನೀಡಿದರು.

ಬೌದ್ಧರ ಪ್ರಕಾರ, ಆ ಧಾರ್ಮಿಕ ಸ್ಥಳದಲ್ಲಿ ಬೌದ್ಧ ಸ್ತೂಪವಿದ್ದು ಅಲ್ಲಿ ಭಗವಾನ ಬುದ್ಧನ `ಸ್ವರ್ಗಾವತರಣೆ’ (ಸ್ವರ್ಗದಿಂದ ಪೃಥ್ವಿಗೆ ಬರುವುದು) ಆಗಿತ್ತು ಎಂದು ಹೇಳಿದರೆ ಮತ್ತೊಂದು ಕಡೆ ಹಿಂದೂಗಳು ಇಲ್ಲಿ ಶ್ರೀ ಬಿಸಾರಿ ದೇವಿಯ ಪ್ರಾಚೀನ ದೇವಾಲಯವಿದೆ ಹಾಗೂ ಅಲ್ಲಿ ಶ್ರೀ ಹನುಮಂತನ ಮೂರ್ತಿಯಿದೆ ಎಂದು ಹೇಳಿದ್ದಾರೆ. ಕಳೆದ 40 ವರ್ಷಗಳಿಂದ ಎರಡೂ ಮತದವರ ನಡುವೆ ವಿವಾದ ನಡೆಯುತ್ತಿದ್ದು ನ್ಯಾಯಾಲಯದಲ್ಲಿ ಈ ಬಗ್ಗೆ ಮೊಕದ್ದಮೆಯೂ ನಡೆಯುತ್ತಿದೆ.