ಬಾಂಗ್ಲಾದೇಶದಲ್ಲಿ ಪ್ರಸಾರ ಮಾಧ್ಯಮಗಳ ಸುಳ್ಳು ವಾರ್ತೆ
ಭಾರತದಲ್ಲಿ ಹಿಂದುದ್ವೇಷಿ ಪ್ರಸಾರ ಮಾಧ್ಯಮಗಳು ಮತ್ತು ಬಾಂಗ್ಲಾದೇಶದ ಪ್ರಸಾರ ಮಾಧ್ಯಮಗಳು ಒಂದೇ ಮಾಲೆಯ ಮಣಿಯಾಗಿದ್ದಾರೆ ಎಂಬುದನ್ನು ತಿಳಿಯಿರಿ ! – ಸಂಪಾದಕರು
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದರೂ, ಅಲ್ಲಿನ ಪ್ರಸಾರ ಮಾಧ್ಯಮಗಳು ಆ ಸುದ್ದಿಯನ್ನು ಹತ್ತಿಕ್ಕಲು ಮತ್ತು ಹಿಂಸಾಚಾರಕ್ಕೆ ಹಿಂದೂಗಳೇ ಕಾರಣ ಎಂದು ತೋರಿಸಲು ಪ್ರಯತ್ನಿಸುತ್ತಿವೆ. ಬಾಂಗ್ಲಾದೇಶದ ಪ್ರಸಾರ ಮಾಧ್ಯಮ ‘ಬಾಂಸೆರಕೆಲ್ಲಾ’ವು ಒಂದು ವಿಡಿಯೋವನ್ನು ಪ್ರಸಾರ ಮಾಡಿ ಅದರಲ್ಲಿ ‘ಹಿಂದೂಗಳು ತಾವೇ ದೇವಸ್ಥಾನ ಮತ್ತು ಮನೆಗಳಿಗೆ ಬೆಂಕಿ ಹಾಕಿ ಸುಟ್ಟರು’, ಎಂದು ಹೇಳಿದೆ. ‘ಬಾಂಸೆರಕೆಲ್ಲಾ’ವು ಟ್ವೀಟ್ ಮಾಡಿ, ಸ್ಥಳೀಯರ ಹೇಳಿಕೆಯಂತೆ ರಂಗಪುರದ ಪೀರಗಂಜದಲ್ಲಿ ಹಿಂದೂಗಳು ಬಾಂಗ್ಲಾದೇಶದ ಘನತೆಯನ್ನು ಹಾಳು ಮಾಡಲು ತಾವೇ ತಮ್ಮ ಮನೆಗಳಿಗೆ ಬೆಂಕಿ ಹಚ್ಚಿದರು, ಎಂದು ಹೇಳಿದೆ.
‘Hindus burned their own houses’: Bangladeshi media outlet tries to whitewash Rangpur violence by Islamistshttps://t.co/IBW2rMMS5A
— OpIndia.com (@OpIndia_com) October 18, 2021