ಹುಬ್ಬಳ್ಳಿಯಲ್ಲಿ ಆಮಿಷ ತೋರಿಸಿ ಮತಾಂತರ ಮಾಡಲು ಯತ್ನಿಸಿದ ಪಾದ್ರಿಯ ವಿರುದ್ಧ ದೂರು !

ಹಿಂದುತ್ವನಿಷ್ಠ ಸಂಘಟನೆಗಳಿಂದ ಚರ್ಚ್‍ನಲ್ಲಿ ಭಜನೆ

ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ ! -ಸಂಪಾದಕರು 

ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಬಂಧಿಸುವಂತೆ ಪ್ರತಿಭಟನೆ ಮಾಡುವಾಗ

ಹುಬ್ಬಳ್ಳಿ – ಇಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಚರ್ಚ್‍ನಲ್ಲಿ ಹಿಂದೂಗಳ ಮತಾಂತರವನ್ನು ನಿಲ್ಲಿಸಿದರು ಮತ್ತು ಭಜನೆಯನ್ನು ಹಾಡಿದ ಘಟನೆ ಅಕ್ಟೋಬರ್ 17 ರಂದು ನಡೆದಿದೆ. ಇಲ್ಲಿನ ಬೈರಿದೇವರಕೊಪ್ಪ ಚರ್ಚ್‍ನಲ್ಲಿ ಈ ಘಟನೆ ನಡೆದಿದೆ. ಈ ಸಂಘಟನೆಯ ಕಾರ್ಯಕರ್ತರು ಚರ್ಚ್‍ನ ಪಾದ್ರಿ ಸೋಮು ಅವರಾಧಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಬಜರಂಗದಳ ರಾಜ್ಯ ಸಂಯೋಜಕ ರಘು ಸಕಲೇಶಪೋರ ಮಾತನಾಡಿ, ವಿಶ್ವನಾಥ ಎಂಬ ವ್ಯಕ್ತಿಯನ್ನು ಪಾದ್ರಿ ಸೋಮು ಅವರು ಆಮಿಷವೊಡ್ಡಿ ಮತಾಂತರಕ್ಕಾಗಿ ಚರ್ಚ್‍ಗೆ ಕರೆತಂದರು. ಅವರು ಚರ್ಚ್‍ನಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋದರು ಮತ್ತು ಪಾದ್ರಿ ಸೋಮು ಮತ್ತು ಇತರರ ವಿರುದ್ಧದ ಅಪರಾಧವನ್ನು ದಾಖಲಿಸಿದರು. ಇದರ ನಂತರ ನಮಗೆ ಈ ಮಾಹಿತಿ ಸಿಕ್ಕಿದನಂತರ ನಾವು ಚರ್ಚ್‍ಗೆ ಹೋಗಿ ಭಜನೆಯನ್ನು ಹಾಡಲು ಆರಂಭಿಸಿದೆವು ಎಂದು ಹೇಳಿದರು.