ಕಾಶ್ಮೀರದಲ್ಲಿ ಭಾಜಪ, ಸಂಘ ಮತ್ತು ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಲು ಐ.ಎಸ್.ಐ.ನ ಸಂಚು !

ದಾರಿ ತಪ್ಪಿಸಲು ಹೊಸ ಭಯೋತ್ಪಾದಕ ಸಂಘಟನೆಯ ಸ್ಥಾಪನೆ

ಇದರಿಂದ, ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆ ನಿರ್ಮೂಲನೆ ಮಾಡಬೇಕಾದರೆ ಪಾಕಿಸ್ತಾನವನ್ನೇ ನಾಶ ಮಾಡುವುದು ಅವಶ್ಯಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ! – ಸಂಪಾದಕರು 

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಗೂಢಚರ ಸಂಸ್ಥೆ ಐ.ಎಸ್.ಐ.ಯು ಸಪ್ಟೆಂಬರ್ 21 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫ್ಫರಾಬಾದ್‍ನಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳ ನೇತಾರರ ಜೊತೆಗೆ ಸಭೆಯನ್ನು ನಡೆಸಿತು. ಇದರಲ್ಲಿ ಜಮ್ಮು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸಲಾಗಿದೆ. ಕಾಶ್ಮೀರದಲ್ಲಿ ಮುಖ್ಯವಾಗಿ ಪೊಲೀಸರು, ಭದ್ರತಾ ಪಡೆ, ಗೂಢಚರ ಸಂಸ್ಥೆಯೊಂದಿಗೆ ಕಾರ್ಯ ಮಾಡುವ ಕಾಶ್ಮೀರಿಗಳನ್ನು ಹತ್ಯೆ ಮಾಡಲು ನಿರ್ಧರಿಸಲಾಯಿತು. ಅದೇ ರೀತಿ ಕಾಶ್ಮೀರಿಗಳಲ್ಲದ ಜನರನ್ನು ಮತ್ತು ಭಾಜಪ ಮತ್ತು ರಾ.ಸ್ವ.ಸಂಘದೊಂದಿಗೆ ಸಂಬಂಧಿಸಿದ ಜನರನ್ನೂ ಹತ್ಯೆಗೆ ಗುರಿಯಾಗಿಸಲು ಆಯ್ಕೆ ಮಾಡಲಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಒತ್ತಡ ನಿರ್ಮಾಣ ಮಾಡಲು 200 ಜನರ ಪಟ್ಟಿಯನ್ನು ತಯಾರಿಸಿ ಅವರ ಹತ್ಯೆ ಮಾಡುವ ಯೋಜನೆಯನ್ನು ರೂಪಿಸಲಾಯಿತು.

1. ‘ಈ ದಾಳಿಗಳನ್ನು ಸ್ಥಳಿಯ ನಾಗರಿಕರು ಭಯೋತ್ಪಾದಕರಿಗೆ ಬೆಂಬಲವೆಂಬಂತೆ ತಾವಾಗಿಯೇ ಮಾಡಿದ್ದಾರೆ ಮತ್ತು ಇದರಲ್ಲಿ ಭಯೋತ್ಪಾದಕ ಸಂಘಟನೆ ಭಾಗಿಯಾಗಿಲ್ಲ’, ಎಂಬುದನ್ನು ತೋರಿಸಲು ಈ ದಾಳಿಯನ್ನು ಕಾರ್ಯರೂಪಕ್ಕೆ ತರಲು ಭಾರತೀಯ ಭದ್ರತಾ ಪಡೆಯ ಪಟ್ಟಿಯಲ್ಲಿ ಇಲ್ಲದಿರುವ ಭಯೋತ್ಪಾದಕರನ್ನು ಉಪಯೋಗಿಸಲಾಗುವುದು.

2. ಈ ಸಭೆಯಲ್ಲಿ ಒಂದು ಹೊಸದಾದ ಭಯೋತ್ಪಾದಕ ಸಂಘಟನೆಯನ್ನು ಸ್ಥಾಪಿಸಲಾಯಿತು, ಇದು ಭಾರತೀಯ ತನಿಖಾ ದಳದ ದಾರಿಯನ್ನು ತಪ್ಪಿಸಲು ಹತ್ಯೆ ಮತ್ತು ದಾಳಿಯ ಹೊಣೆಯನ್ನು ಸ್ವೀಕರಿಸಲಿದೆ, ಎಂಬ ಮಾಹಿತಿ ಬೆಳಕಿಗೆ ಬಂದಿದೆ.