ಒಂದು ರಾಜ್ಯಕ್ಕೆ ಹೀಗೆ ಮಾಡಲು ಸಾಧ್ಯವಾದರೆ, ಕೇಂದ್ರ ಸರಕಾರವು ದೇಶದಲ್ಲಿ ಇಂತಹ ಸಮೀಕ್ಷೆಗಳನ್ನು ಮಾಡಿ ಹಿಂದೂಗಳನ್ನು ಮತಾಂತರಿಸುವ ಕ್ರೈಸ್ತರನ್ನು ಹತ್ತಿಕ್ಕುವ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಬೆಂಗಳೂರು – ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನೋಂದಾಯಿತ ಮತ್ತು ನೋಂದಾಯಿಸದ ಕ್ರೈಸ್ತ ಮತಪ್ರಚಾರಕರ ಸಮೀಕ್ಷೆಗೆ ಆದೇಶಿಸಿದೆ. ಅಕ್ಟೋಬರ್ ೧೩ ರಂದು ನಡೆದ ಇಲಾಖೆಯ ಸಭೆಯಲ್ಲಿ ಸಮೀಕ್ಷೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶಾಸಕ ಗೂಳಿಹಟ್ಟಿ ಶೇಖರ, ಪುಟ್ಟರಂಗ ಶೆಟ್ಟಿ, ಬಿ.ಎಂ. ಫಾರೂಕ್, ವಿರುಪಾಕ್ಷಪ್ಪ ಬಳ್ಳಾರಿ, ಅಶೋಕ ನಾಯಕ ಮತ್ತು ಇತರ ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ, ಸರಕಾರದಿಂದ ಕ್ರೈಸ್ತ ಮತಪ್ರಚಾರಕರಿಗೆ ಸಿಗುವ ಸೌಲಭ್ಯಗಳು ಮತ್ತು ಅವರ ನೋಂದಣಿಯ ಕುರಿತು ಚರ್ಚಿಸಲಾಯಿತು. ಈ ಸಮಯದಲ್ಲಿ ಮತಪ್ರಚಾರಕರಿಗೆ ಒದಗಿಸಲಾದ ಎಲ್ಲಾ ಸೌಲಭ್ಯಗಳನ್ನು ತೆಗೆದುಹಾಕಬೇಕೆಂಬ ಅಭಿಪ್ರಾಯವನ್ನು ಮಂಡಿಸಲಾಯಿತು. ಭಾಜಪದ ಶಾಸಕ ಗೂಳಿಹಟ್ಟಿ ಶೇಖರ ಮಾತನಾಡಿ, ರಾಜ್ಯದಲ್ಲಿ ಶೇ. ೪೦ ರಷ್ಟು ಚರ್ಚುಗಳು ಅಕ್ರಮವಾಗಿದೆ ಎಂದು ಹೇಳಿದರು. (ಇಷ್ಟು ದೊಡ್ಡ ಸಂಖ್ಯೆಯ ಕಾನೂನುಬಾಹಿರ ಚರ್ಚುಗಳನ್ನು ನಿರ್ಮಿಸುವವರೆಗೂ ಸರಕಾರಿ ವ್ಯವಸ್ಥೆ ನಿದ್ರಿಸುತ್ತಿತ್ತೇ ? – ಸಂಪಾದಕರು)
Karnataka: Govt to survey official and non-official Christian missionaries, takes first step to curb illegal conversionshttps://t.co/rjsbtZolxT
— OpIndia.com (@OpIndia_com) October 15, 2021
೧. ಶೇಖರ ಇವರು ವಿಧಾನಪರಿಷತ್ತಿನ ಮಳೆಗಾಲದ ಅಧಿವೇಶನದಲ್ಲಿ ಮತಾಂತರದ ಸೂತ್ರವನ್ನು ಮಂಡಿಸಿದ್ದರು. ತನ್ನ ಸ್ವಂತ ತಾಯಿಯನ್ನೂ ಕ್ರೈಸ್ತ ಮಿಷನರಿಗಳು ಮತಾಂತರಿಸಿದ್ದಾರೆ ಎಂದು ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು. ತನ್ನ ತಾಲೂಕಿನಲ್ಲಿ ೨೦ ದಿಂದ ೨೫ ಸಾವಿರ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂದೂ ಅವರು ಹೇಳಿದ್ದರು.
೨. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಈ ಹಿಂದೆಯೇ ಮತಾಂತರದ ಬಗ್ಗೆ ಮಾತನಾಡುತ್ತಾ, ಸರಕಾರವು ಬಲವಂತದ ಮತಾಂತರವನ್ನು ತಡೆಯಲು ಕಾನೂನು ರೂಪಿಸಲಿದೆ. ಇದಕ್ಕಾಗಿ ದೇಶದ ವಿವಿಧ ರಾಜ್ಯಗಳು ಈ ಬಗ್ಗೆ ನಿರ್ಮಿಸಿದ ಕಾನೂನುಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಅದರ ನಂತರ, ಇಂತಹ ಕಾನೂನನ್ನು ರಾಜ್ಯದಲ್ಲಿ ಮಾಡಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.