‘ಕಲಬೆರಕೆಯನ್ನು ಹೇಗೆ ಗುರುತಿಸಬೇಕು ಮತ್ತು ಪರಿಹಾರ ?’ ಈ ಕುರಿತು ‘ಆನ್‌ಲೈನ್’ ವಿಶೇಷ ಚರ್ಚಾಕೂಟ !
ಆಹಾರ ಪದಾರ್ಥಗಳಲ್ಲಿ ಕಲಬೆರಕೆಯಾಗಿದ್ದರೆ, ಸೀಲ್ ಮಾಡಿದ್ದ ಆಹಾರ ಪದಾರ್ಥಗಳಲ್ಲಿನ ‘ಪ್ಯಾಕ್’ ಮೇಲೆ ತಪ್ಪಾದ ‘ಲೇಬಲ್’ ಇದ್ದಲ್ಲಿ, ಆಹಾರ ಪದಾರ್ಥಗಳ ಬಗ್ಗೆ ಜನರ ದಾರಿ ತಪ್ಪಿಸುವ ಜಾಹಿರಾತುಗಳ ಪ್ರಸಾರ ಮಾಡುತ್ತಿದ್ದಲ್ಲಿ, ಆಹಾರ ಸುರಕ್ಷೆಯ ಬಗ್ಗೆ ಈಗಿರುವ ಕಾನೂನಿನ ಪ್ರಕಾರ ಅಪರಾಧಿಗಳ ವಿರುದ್ಧ ದಂಡದ ಏರ್ಪಾಡು ಅಸ್ತಿತ್ವದಲ್ಲಿದೆ. ಈ ಬಗೆಗಿನ ಅಪರಾಧಕ್ಕೆ ಆರ್ಥಿಕ ದಂಡ, ಸೆರೆಮನೆ ಇತ್ಯಾದಿ ಶಿಕ್ಷೆಗಳಿವೆ. ಹಲವಾರು ಬಾರಿ ಹಾಲಿನಲ್ಲಿ ನೀರು, ಯೂರಿಯಾ, ಸ್ಟಾರ್ಚ್, ಡಿಟರ್ಜಂಟ್ ಇತ್ಯಾದಿ ಪದಾರ್ಥಗಳ ಕಲಬೆರಕೆ ಮಾಡಲಾಗುತ್ತದೆ. ‘ಕಲಬೆರಕೆಯನ್ನು ಹೇಗೆ ಗುರುತಿಸಬೇಕು’ ಇದನ್ನು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದ (FSSAI ನ) ಜಾಲತಾಣದಲ್ಲಿ ಲಭ್ಯವಿದೆ. ಹಾಲು ಅಥವಾ ಯಾವುದೇ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯು ಗಮನಕ್ಕೆ ಬಂದರೆ ‘FSSAIಗೆ ದೂರವಾಣಿ ಮೂಲಕ, ಆನ್‌ಲೈನ್ ಅಥವಾ ಪ್ರತ್ಯಕ್ಷ ಪತ್ರವ್ಯವಹಾರಗಳ ಮೂಲಕ ದೂರನ್ನು ನೊಂದಾಯಿಸಬಹುದು. ದೂರು ಸಿಕ್ಕಿದ ನಂತರ ‘ಆಹಾರ ಸುರಕ್ಷತಾ ದಳ’ದ ಅಧಿಕಾರಿಗಳು ದೂರುದಾರರಿಗೆ ಕ್ರಮದ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡುತ್ತಾರೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಂಡು ಬಂದಲ್ಲಿ ಜಾಗೃತ ನಾಗರಿಕರು ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದ ಬಳಿ ಅಂದರೆ ‘FSSAI’ ಬಳಿ ದೂರು ನೀಡಿರಿ, ಎಂದು ಕೊಲ್ಲಾಪುರದ ಆಹಾರ ಹಾಗೂ ಔಷಧಿ ಆಡಳಿತ ಇಲಾಖೆಯ ಸಹಾಯಕ ಆಯುಕ್ತ ಶ್ರೀ. ಮೋಹನ ಕೆಂಬಳಕರ ಇವರು ಕರೆ ನೀಡಿದ್ದಾರೆ. ಅವರು ‘ಆರೋಗ್ಯ ಸಹಾಯ ಸಮಿತಿ’ ಹಾಗೂ ‘ಸುರಾಜ್ಯ ಅಭಿಯಾನ’ದ ವತಿಯಿಂದ ಆಯೋಜಿಸಲಾಗಿದ್ದ ‘ಆಹಾರದಲ್ಲಿ ಕಲಬೆರಕೆ ಹೇಗೆ ಗುರುತಿಸಬೇಕು ಮತ್ತು ಪರಿಹಾರ ?’ ಈ ಆನ್‌ಲೈನ್’ ವಿಶೇಷ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಸಾತಾರಾ ಹಾಗೂ ಕೊಲ್ಲಾಪುರದ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಕಿರಿಯ ವೈಜ್ಞಾನಿಕ ಅಧಿಕಾರಿ ಶ್ರೀ. ಸುನಿಲ ಪಾಖರೆ ಇವರು ಹಾಲು, ಚಹಾ ಪೌಡರ್, ಬೇಳೆ ಇತ್ಯಾದಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯನ್ನು ಹೇಗೆ ಗುರುತಿಸಬೇಕು, ಎಂಬುದನ್ನು ಪ್ರಾತ್ಯಕ್ಷಿಕೆ ಸಹಿತ ತೋರಿಸಿದರು. ಈ ಕಾರ್ಯಕ್ರಮವನ್ನು Hindujagruti.org ಈ ಜಾಲತಾಣ, ಅದೇ ರೀತಿ ಸಮಿತಿಯ HinduJagruti’ಈ ‘ಯುಟ್ಯೂಬ್ ಚಾನೆಲ್ ಹಾಗೂ ಸಮಿತಿಯ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಸಾರ ಮಾಡಲಾಯಿತು. ಅದೇ ರೀತಿ ಅಕ್ಟೋಬರ್ 20 ರಂದು ಪ್ರಸಾರಗೊಳ್ಳಲಿರುವ ಈ ಕಾರ್ಯಕ್ರಮದ ಮುಂದಿನ ಭಾಗವನ್ನು ನಾಗರಿಕರು ತಪ್ಪದೇ ನೋಡಬೇಕು ಮತ್ತು ‘ಕಲಬೆರಕೆ’ ಈ ಸಮಸ್ಯೆಯ ವಿರುದ್ಧ ಹೋರಾಡಲು ‘ಸುರಾಜ್ಯ ಅಭಿಯಾನ’ವನ್ನು ಸಂಪರ್ಕಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನರೇಂದ್ರ ಸುರ್ವೆ ಇವರು ಕರೆ ನೀಡಿದರು.
ಶ್ರೀ. ಕೆಂಬಳಕರ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಅನೇಕ ಸ್ಥಳಗಳಲ್ಲಿ ಕೆಮಿಕಲ್‌ಅನ್ನು ಉಪಯೋಗಿಸಿ ಕೃತಕವಾಗಿ ಕಾಯಿಗಳನ್ನು ಹಣ್ಣು ಮಾಡಲಾಗುತ್ತದೆ. ಅದೇ ರೀತಿ ಪಾನೀಯಗಳ ಮೂಲಕವೂ ವಿವಿಧ ರೀತಿಯ ಬಣ್ಣಗಳನ್ನು ಉಪಯೋಗಿಸಿ ಕಲಬೆರಕೆ ಮಾಡಲಾಗುತ್ತದೆ. ನಾಗರಿಕರಿಗೆ ಯಾವುದೇ ರೀತಿಯ ಕಲಬೆರಕೆ ಕಂಡು ಬಂದಲ್ಲಿ ಅವರು ಈ ಬಗ್ಗೆ FSSAI ಇದರ ಕೇಂದ್ರೀಯ ಇಲಾಖೆಗೆ 18000112100 ಈ ಟೊಲ್ ಫ್ರೀ ಸಂಖ್ಯೆಯಲ್ಲಿ ದೂರನ್ನು ನೋಂದಾಯಿಸಿರಿ. ನಾಗರಿಕರು ಸ್ವಚ್ಛತೆಯ ನಿಯಮಗಳನ್ನು ಪಾಲಿಸದ ಸ್ಥಳಗಳಲ್ಲಿ, ಅದೇ ರೀತಿ ತೆರೆದ ಆಹಾರಗಳನ್ನು ತಿನ್ನುವುದನ್ನು ತಡೆಗಟ್ಟಬೇಕು ಎಂದು ಹೇಳಿದರು.