ಢಾಕಾ (ಬಾಂಗ್ಲಾದೇಶ)ದಲ್ಲಿ ಶ್ರೀ ದುರ್ಗಾದೇವಿಯ ದೇವಾಲಯದಲ್ಲಿ ದೇವಿಯ ಪೂಜೆ ಮಾಡಲು ಮತಾಂಧರಿಂದ ವಿರೋಧ !

ಬಾಂಗ್ಲಾದೇಶದ ಅಸುರಕ್ಷಿತ ಹಿಂದೂಗಳು ಮತ್ತು ಅವರ ಧಾರ್ಮಿಕ ಉತ್ಸವಗಳು !

ಬೇರೆಡೆ ಸ್ಥಳಾಂತರಿಸಿ ಮೂರ್ತಿಯ ಸ್ಥಾಪನೆ !

ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ಸ್ಥಿತಿಯ ಬಗ್ಗೆ ಮಾನವ ಹಕ್ಕುಗಳ ಸಂಘಟನೆಗಳು ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು 

ಮುಸಲ್ಮಾನ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ದುಃಸ್ಥಿತಿ ಮತ್ತು ಚಕಾರವೆತ್ತದ ಮಾನವಾಧಿಕಾರ ಸಂಘಟನೆಗಳು ! -ಸಂಪಾದಕರು 

ಬಾಂಗ್ಲಾದೇಶದ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಆಘಾತವಾಗುತ್ತಿರುವಾಗ ಅವರಿಗೆ ನ್ಯಾಯ ದೊರಕಿಸಿಕೊಡಲು ಕೇಂದ್ರ ಸರಕಾರವು ಏನು ಪ್ರಯತ್ನ ಮಾಡಲಿದೆ ! -ಸಂಪಾದಕರು 

ಹಿಂದೂಗಳು ಮತಾಂಧರ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು

ಢಾಕಾ (ಬಾಂಗ್ಲಾದೇಶ) – ಇಲ್ಲಿಯ ಟಿಪ್ಪು ಸುಲ್ತಾನ ಮಾರ್ಗದಲ್ಲಿನ ಶ್ರೀ ದುರ್ಗಾದೇವಿಯ ದೇವಾಲಯದಲ್ಲಿ ಹಿಂದೂಗಳಿಗೆ ಪೂಜೆ ಮಾಡದಂತೆ ಮತಾಂಧರು ತಡೆದಿದ್ದಾರೆ. ‘ಬಾಂಗ್ಲಾದೇಶ ಹಿಂದು ಯುನಿಟಿ ಕೌನ್ಸಿಲ್’ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇಲ್ಲಿಯ ಸರಕಾರದಿಂದ ಶ್ರೀ ದುರ್ಗಾದೇವಿಯ ಪೂಜೆಗಾಗಿ ತಾತ್ಕಾಲಿಕ ಸ್ಥಳವನ್ನು ನೀಡಲಾಗಿದೆ. ದೇವಿಯ ಮೂರ್ತಿಯನ್ನು ಆ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಕೆಲವು ದಿನಗಳ ಹಿಂದೆ ಈ ದೇವಾಲಯದ ಮೇಲೆ ದಾಳಿ ನಡೆಸಲಾಗಿತ್ತು. ಈ ಬಗ್ಗೆ ಸ್ಥಳೀಯ ಹಿಂದೂಗಳು ಮತಾಂಧರ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು. ಈ ದೇವಾಲಯವನ್ನು 1929 ರಲ್ಲಿ ನಿರ್ಮಿಸಲಾಗಿತ್ತು. ‘ಈ ದೇವಾಲಯವನ್ನು ಉಳಿಸುವಲ್ಲಿ ನಾವು ಒಂದು ದಿನ ಖಂಡಿತವಾಗಿ ಯಶಸ್ವಿ ಆಗುವೆವು’, ಎಂದು ಬಾಂಗ್ಲಾದೇಶ ಹಿಂದು ಯುನಿಟಿ ಕೌನ್ಸಿಲ್ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಚಟಗಾವನಲ್ಲಿನ ಶ್ರೀ ದುರ್ಗಾದೇವಿಯ ಮೂರ್ತಿ ಧ್ವಂಸ !

ಬಾಂಗ್ಲಾದೇಶದ ಚಟಗಾವ ಇಲ್ಲಿ ಅಕ್ಟೋಬರ್ 10 ರಂದು ಫಿರಂಗಿ ಮಾರುಕಟ್ಟೆಯಲ್ಲಿರುವ ಶ್ರೀ ಶಮಶಾನೇಶ್ವರ ಶಿವ ವಿಗ್ರಹ ದೇವಾಲಯದಲ್ಲಿನ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸ ಮಾಡಲಾಗಿತ್ತು. ಈ ಮೂರ್ತಿಯನ್ನು ಪೂಜಾಮಂಟಪದಲ್ಲಿ ಸ್ಥಾಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಘಟನೆಯ ವಿರುದ್ಧ ಹಿಂದೂಗಳು ಪ್ರತಿಭಟನೆಯನ್ನೂ ಮಾಡಿದ್ದಾರೆ.

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು