ಕಾಶ್ಮೀರದಲ್ಲಿ ಉಗ್ರರಿಗೆ ಸಹಾಯ ಮಾಡುವ 900 ಗಿಂತಲೂ ಹೆಚ್ಚಿನ ಮತಾಂಧ ನಾಗರಿಕರು ಪೊಲೀಸರ ವಶದಲ್ಲಿ !

ಇಂದಿನ ತನಕ ಮಾಡದಿರುವುದನ್ನು ಇದೇ ಮೊದಲ ಬಾರಿಗೆ ಮಾಡಿ ಪೊಲೀಸರು ಸ್ಥಳಿಯ ಮತಾಂಧರನ್ನು ವಶಪಡಿಸಿಕೊಂಡು ಕ್ರಮ ತೆಗೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ; ಆದರೆ ಇದನ್ನು ಮೊದಲೇ ಮಾಡುವುದು ಅಪೇಕ್ಷಿತವಿತ್ತು ! – ಸಂಪಾದಕರು 

ಕಾಶ್ಮೀರದಲ್ಲಿ ಉಗ್ರವಾದ ನಾಶವಾಗದಿರಲು ಅಲ್ಲಿಯ ಮತಾಂಧ ಮತ್ತು ದೇಶದ್ರೋಹಿ ನಾಗರಿಕರಿಂದ ಉಗ್ರರಿಗೆ ಸಿಗುತ್ತಿರುವ ತೆರೆಮರೆಯ ಬೆಂಬಲವೇ ಕಾರಣವಾಗಿದೆ. ಆದ್ದರಿಂದ ಇಂತಹವರನ್ನು ಸಹ ಉಗ್ರರೆಂದು ಪರಿಗಣಿಸಿ ಅವರಿಗೂ ಕಠಿಣ ಶಿಕ್ಷೆ ನೀಡಬೇಕು !- ಸಂಪಾದಕರು 

ಶ್ರೀನಗರ (ಜಮ್ಮು-ಕಾಶ್ಮೀರ) – ಕಳೆದ ಕೆಲವು ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂ ಮತ್ತು ಸಿಕ್ಖ್ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದರು. ನಂತರ ಭದ್ರತಾ ಪಡೆಯಿಂದ ಹೆಚ್ಚು ಕಡಿಮೆ 900 ಕ್ಕೂ ಹೆಚ್ಚಿನ ಸ್ಥಳಿಯ ಮತಾಂಧ ನಾಗರಿಕರನ್ನು ವಶಪಡಿಸಲಾಗಿದೆ. ‘ಉಗ್ರರ ಬಗ್ಗೆ ಸಹಾನುಭೂತಿ ತೋರಿದ್ದಾರೆ’, ಎಂಬ ಆರೋಪ ಇವರೆಲ್ಲರ ಮೇಲಿದೆ. ಅದರಲ್ಲಿ ಹೆಚ್ಚಿನವರು ನಿಷೇಧಿತ ‘ಜಮಾತೆ ಇಸ್ಲಾಮಿ’ ಈ ಉಗ್ರ ಸಂಘಟನೆಯ ಜೊತೆಗೆ ಸಂಬಂಧ ಪಟ್ಟಿರುವವರು ಎಂಬ ಸಂದೇಹವಿದೆ. ಈ ಜನರು ಭಯೋತ್ಪಾದಕರ ‘ಓವರ್ ಗ್ರೌಂಡ್ ವರ್ಕರ್ಸ್’ (ಓ.ಜಿ.ಡಬ್ಲ್ಯೂ – ಭೂಗತ ಕಾರ್ಯಕರ್ತರ) ಪಟ್ಟಿಯಲ್ಲಿದ್ದಾರೆ. ಅವರು ಉಗ್ರರಿಗೆ ವಿವಿಧ ರೀತಿಯ ಸಹಾಯ ಮಾಡುತ್ತಿದ್ದಾರೆ. ಉದಾಹರಣೆಗಾಗಿ. ಇರಲು ಮನೆಯ ವ್ಯವಸ್ಥೆ ಮಾಡಿಕೊಡುವುದು ಮುಂತಾದವು. ಶ್ರೀನಗರ್, ಗಾಂದರಬಲ, ಬಡಗಾಮ ಮತ್ತು ದಕ್ಷಿಣ ಕಾಶ್ಮೀರದ ಪ್ರದೇಶಗಳಿಂದ ಈ ಜನರನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿಚಾರಣೆ ಮಾಡಲಾಗುತ್ತಿದೆ.